ಬ್ರೇಕಿಂಗ್ ನ್ಯೂಸ್
22-08-20 11:02 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 22: ಭಾರತ ಸರಕಾರ ವಿಶ್ವ ಸಂಸ್ಥೆ ಮತ್ತು ವಿಶ್ವ ರಾಷ್ಟ್ರಗಳಿಗೆ ಹಾಕಿದ ಒತ್ತಡಕ್ಕೆ ಕೊನೆಗೂ ಫಲ ಸಿಕ್ಕಿದೆ. ಪಾಕಿಸ್ಥಾನ ಕಡೆಗೂ ತನ್ನಲ್ಲಿರುವ 88 ಉಗ್ರರ ಪಟ್ಟಿಯನ್ನು ವಿಶ್ವ ಸಂಸ್ಥೆಗೆ ನೀಡಿದ್ದು ಉಗ್ರರಿಗೆ ಆರ್ಥಿಕ ನಿರ್ಬಂಧ ವಿಧಿಸುವುದಾಗಿ ಹೇಳಿಕೊಂಡಿದೆ. ಇದೇ ವೇಳೆ, ಈ ಪಟ್ಟಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನನ್ನೂ ಆ ಪಟ್ಟಿಗೆ ಸೇರಿಸಿದ್ದು ದಾವೂದ್ ಪಾಕಿಸ್ಥಾನದಲ್ಲೇ ಇರುವುದನ್ನು ಒಪ್ಪಿಕೊಂಡಿದೆ.
1993ರ ಮುಂಬೈ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿರುವುದಾಗಿ ಭಾರತ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು. ಆದರೆ, ಪಾಕ್ ಸರಕಾರ ಮಾತ್ರ ದಾವೂದ್ ಪಾಕಿಸ್ತಾನದ ನೆಲದಲ್ಲಿ ಇಲ್ಲ ಎಂದೇ ವಾದಿಸಿತ್ತು. ಈಗ 88 ಮಂದಿಯ ವಿಳಾಸ ಸಹಿತ ಹೆಸರನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ದಾವೂದ್ ವಿಳಾಸ ಕರಾಚಿ, ಕ್ಲಿಫ್ಟನ್ ಮಾರ್ಕೆಟ್ ಏರಿಯಾ ಎಂದು ನಮೂದಿಸಿರುವುದು ಆತನ ಬಗ್ಗೆ ಸುಳ್ಳಾಡುತ್ತಾ ಬಂದ ಪಾಕ್ ಬಣ್ಣವನ್ನು ಬಯಲು ಮಾಡಿದೆ.

ಈಗ ಉಗ್ರರ ವಿಚಾರದಲ್ಲಿ ವಿಶ್ವ ರಾಷ್ಟ್ರಗಳ ಒತ್ತಡಕ್ಕೆ ಮಣಿದ ಪಾಕ್ ಸರಕಾರ ಈಗ ಉಗ್ರರು, ಉಗ್ರ ಸಂಘಟನೆಗಳು ಸೇರಿ 88 ಮಂದಿಯನ್ನು ಗ್ರೇ ಲಿಸ್ಟ್ ಗೆ ಸೇರಿಸಿ ಆದೇಶ ಮಾಡಿದೆ. ಈ ಮೂಲಕ ಉಗ್ರರು ಅಥವಾ ಸಂಘಟನೆಗಳು ವಿದೇಶಗಳಿಂದ ಹಣ ಪಡೆಯುವಂತಿಲ್ಲ. ಪಾಕ್ ನೆಲದಲ್ಲಿ ಹಣದ ವಹಿವಾಟು ಮಾಡುವಂತೆಯೂ ಇಲ್ಲ. ಇವರ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದಾಗಿ ಪಾಕ್ ಹೇಳಿಕೊಂಡಿದೆ. ಇದರಲ್ಲಿ ಮುಂಬೈ ದಾಳಿಗೆ ಸಂಚು ನಡೆಸಿದ್ದ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಜೈಶ್ ಇ - ಮಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕೂಡ ಸೇರಿದ್ದಾನೆ. ಅಲ್ಲದೆ, ಉಗ್ರ ಸಂಘಟನೆಗಳಾದ ಜಮಾತ್ ಉದ್ ದಾವಾ, ಜೆಇಎಂ, ತಾಲಿಬಾನ್, ಡಾಯೆಶ್, ಹಕ್ಕಾನಿ ಗ್ರೂಪ್, ಅಲ್ ಕಾಯಿದಾ ಮತ್ತಿತರ ಮುಂಚೂಣಿ ಗುಂಪುಗಳು ಸೇರಿವೆ.
ಭಾರತದ ಪ್ರಧಾನಿ ಮೋದಿ ಅಮೆರಿಕ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಪಾಕಿಸ್ಥಾನವನ್ನು ಉಗ್ರ ಪೋಷಕ ರಾಷ್ಟ್ರವೆಂದು ಪರಿಗಣಿಸುವಂತೆ ಒತ್ತಡ ಹೇರಿದ್ದರು. ಅಲ್ಲದೆ, ವಿಶ್ವಸಂಸ್ಥೆಯಲ್ಲಿ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ರಾಷ್ಟ್ರಗಳು ಆರ್ಥಿಕ ನೆರವು ನೀಡಬಾರದೆಂದು ಒತ್ತಾಯಿಸಿದ್ದರು. ಅಮೆರಿಕ ಆರ್ಥಿಕ ನೆರವು ನಿಲ್ಲಿಸಿದ್ದು ಪಾಕಿಸ್ತಾನ ಸರಕಾರ ಉಗ್ರರ ವಿಚಾರದಲ್ಲಿ ಗಟ್ಟಿ ನಿಲುವು ತಾಳುವಂತೆ ಮಾಡಿದೆ. ಆದರೆ, ಈ ನಿರ್ಬಂಧ ಎಷ್ಟರ ಮಟ್ಟಿಗೆ ಫಲದಾಯಕ ಎನ್ನೋದು ನೋಡಬೇಕಷ್ಟೆ.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm