ಬ್ರೇಕಿಂಗ್ ನ್ಯೂಸ್
31-03-21 12:53 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾರ್ಚ್ 31: ಹಲವು ಜನ ಸಾಮಾನ್ಯರಿಗೆ ತಿಂಗಳಲ್ಲಿ ಒಮ್ಮೆಯಾದರೂ ಬ್ಯಾಂಕ್ ಕೆಲಸಗಳಿರುತ್ತವೆ. ಆದರೆ, ಆ ದಿನ ಬ್ಯಾಂಕ್ಗೆ ರಜೆ ಇದ್ದರೆ ಅವರ ಇತರ ಕೆಲಸಗಳಿಗೆ ತೊಂದರೆಯಾಗಬಹುದು. ಈ ಹಿನ್ನೆಲೆ ಬ್ಯಾಂಕ್ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು.
ಇದೇ ರೀತಿ ಏಪ್ರಿಲ್ 2021 ರಲ್ಲೂ ಬ್ಯಾಂಕುಗಳು 15 ದಿನಗಳ ಕಾಲ ಬಂದ್ ಆಗಿರುತ್ತದೆ. ಏಪ್ರಿಲ್ ತಿಂಗಳ ಮೊದಲನೆಯ ದಿನವೂ ಸಹ ರಜಾ ದಿನವೇ ಆಗಿದೆ.
ಹೌದು, 2020-21ರ ಹಣಕಾಸು ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳುವುದರಿಂದ, ಹಣಕಾಸಿನ ವರ್ಷದ ಕೊನೆಯ ದಿನವಾದ ಮಾರ್ಚ್ 31 ರಂದು ಗ್ರಾಹಕರಿಗೆ ಸಂಬಂಧಿಸಿದ ಕೆಲಸವನ್ನು ಮಾಡಲಾಗುವುದಿಲ್ಲ. ಏಪ್ರಿಲ್ 1 ರಂದೂ ಸಹ ಇದೇ ರೀತಿ ಬ್ಯಾಂಕುಗಳು ತಮ್ಮ ವಾರ್ಷಿಕ ಖಾತೆಗಳನ್ನು ಕ್ಲೋಸ್ ಮಾಡುವ ದಿನವಾಗಿದ್ದು ಜನಸಾಮಾನ್ಯರ ಕೆಲಸ ನಿರ್ವಹಿಸುವುದಿಲ್ಲ. ಈ ಹಿನ್ನೆಲೆ ಜನರಿಗೆ ತೊಂದರೆಯಾಗಬಾರದೆಂದು ಆರ್ಬಿಐ ಬ್ಯಾಂಕುಗಳ ರಜಾ ದಿನಗಳ ಪಟ್ಟಿಯನ್ನು ನೀಡುತ್ತದೆ. ನಿಮಗೆ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ನಲ್ಲಿ ಕೆಲಸ ಇದ್ದರೆ, ಯಾವ ದಿನ ಮುಚ್ಚಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಪಟ್ಟಿಯನ್ನು ಪರಿಶೀಲಿಸಿ.
ಆದರೂ, ಎಲ್ಲ ಬ್ಯಾಂಕುಗಳಲ್ಲಿ ಹಾಗೂ ಎಲ್ಲ ರಾಜ್ಯಗಳಲ್ಲಿ 15 ದಿನಗಳ ಕಾಲ ರಜೆ ಇರುವುದಿಲ್ಲ. ಏಕೆಂದರೆ ಕೆಲವು ಹಬ್ಬಗಳನ್ನು ಇಡೀ ದೇಶದಲ್ಲಿ ಆಚರಿಸಲಾಗುವುದಿಲ್ಲ ಎಂಬುದನ್ನು ಬ್ಯಾಂಕ್ ಗ್ರಾಹಕರು ಗಮನಿಸಬೇಕಾಗಿದೆ.
ಬ್ಯಾಂಕ್ ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ...
ತೆಲುಗು ಹೊಸ ವರ್ಷ, ಬಿಹು, ಗುಡಿ ಪಾಡ್ವಾ, ವೈಶಾಖ, ಬಿಜು ಉತ್ಸವ ಮತ್ತು ಯುಗಾದಿ ಹಿನ್ನೆಲೆ ಏಪ್ರಿಲ್ 13 ರಂದು ಬ್ಯಾಂಕುಗಳಿಗೆ ರಜೆ ಇರುತ್ತದೆ. ಮರುದಿನ ಅಂದರೆ ಏಪ್ರಿಲ್ 14 ರಂದು ಡಾ. ಅಂಬೇಡ್ಕರ್ ಜಯಂತಿ ಹಿನ್ನೆಲೆ ಬ್ಯಾಂಕುಗಳನ್ನು ಮುಚ್ಚಲಾಗುವುದು. ನಂತರ ಏಪ್ರಿಲ್ 15, ಹಿಮಾಚಲ ದಿನ, ವಿಶು, ಬಂಗಾಳಿ ಹೊಸ ವರ್ಷ, ಸರ್ಹುಲ್ ಹಿನ್ನೆಲೆ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ನೀಡಲಾಗುವುದು. ಇದರ ನಂತರ, ಏಪ್ರಿಲ್ 21 ರಂದು ರಾಮ ನವಮಿ ಮತ್ತು ಏಪ್ರಿಲ್ 25ರಂದು ಮಹಾವೀರ ಜಯಂತಿ ಹಿನ್ನೆಲೆ ಬ್ಯಾಂಕ್ ಶಾಖೆಗಳಿಗೆ ರಜೆ ಇರುತ್ತದೆ.
ಇದರ ಜತೆಗೆ ಏಪ್ರಿಲ್ 10 ಮತ್ತು 24 ರಂದು ಬ್ಯಾಂಕುಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆ ಇದ್ದರೆ, ಏಪ್ರಿಲ್ 4, 11, 18 ಹಾಗೂ 25 ರಂದು ಭಾನುವಾರ ಎಂದಿನಂತೆ ರಜೆ ಇದೆ.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm