ಬ್ರೇಕಿಂಗ್ ನ್ಯೂಸ್
27-03-21 05:19 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾ.27: ವಾತಾವರಣದ ಮಾಲಿನ್ಯದಿಂದಾಗಿ ಮನುಷ್ಯನಿಗೆ ನಾನಾ ರೀತಿಯ ತೊಂದರೆಗಳು ಎದುರಾಗುತ್ತಿವೆ. ಪರಿಸರ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಮನುಷ್ಯನಲ್ಲಿ ಜನನಾಂಗ, ಶಿಶ್ನಗಳು ಕುಗ್ಗುತ್ತಿದ್ದು ಮುರುಟಿಕೊಳ್ಳುತ್ತಿವೆ ಎನ್ನುವ ವಿಚಾರವನ್ನು ಹೊರಗೆಡಹಿದ್ದಾರೆ. ಪರಿಸರ ಮಾಲಿನ್ಯದ ಕಾರಣದಿಂದಾಗಿ ಹುಟ್ಟುವ ಶಿಶುವಿನ ಜನನಾಂಗಗಳು ಅತ್ಯಂತ ಕಿರಿದಾಗಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಅಮೆರಿಕದ ಶನ್ನಾ ಸ್ವಾನ್ ಎಂಬ ಮಹಿಳಾ ವಿಜ್ಞಾನಿ ಬರೆದಿರುವ ಕೌಂಟ್ ಡೌನ್ ಎನ್ನುವ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದು, ಮನುಷ್ಯ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಸನ್ನಿವೇಶಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹುಟ್ಟುತ್ತಿರುವ ಮಕ್ಕಳಲ್ಲಿ ಶಿಶ್ನಗಳ ಗಾತ್ರ ಕಿರಿದಾಗುತ್ತಿದ್ದು ಮುರುಟಿಕೊಂಡಿರುವುದು ಕಂಡುಬಂದಿದೆ. ಅಲ್ಲದೆ, ಮಾಲಿನ್ಯದಿಂದಾಗಿ ಮನುಷ್ಯನ ಸಹಜ ಸೃಷ್ಟಿ ಕ್ರಿಯೆಯ ಶಕ್ತಿ ಕುಗ್ಗುತ್ತಿದೆ. ಹೀಗಾಗಿ ಮನುಷ್ಯನ ಪುನರುತ್ಪತ್ತಿಯ ಜೈವಿಕ ಪ್ರಕ್ರಿಯೆ ಸವಾಲಾಗಿ ಪರಿಣಮಿಸಲಿದೆ ಎಂದು ತಿಳಿಸಿದ್ದಾರೆ.

ಮನುಷ್ಯನಲ್ಲಿ ವೀರ್ಯೋತ್ಪತ್ತಿಯ ಕುಸಿತದಿಂದ ಆಧುನಿಕ ಜಗತ್ತು ಯಾವೆಲ್ಲಾ ಅಪಾಯಗಳನ್ನು ಎದುರಿಸುತ್ತಿದೆ. ಹೆಣ್ಣು ಹಾಗೂ ಗಂಡಿನ ಸೃಷ್ಟಿ ಕ್ರಿಯೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಮತ್ತು ಇದರಿಂದ ಮನುಷ್ಯ ಕುಲದ ಭವಿಷ್ಯದ ಮೇಲಾಗುವ ಪರಿಣಾಮಗಳೇನು ಎಂಬುದರ ಬಗ್ಗೆ ವಿಜ್ಞಾನಿ ಅಧ್ಯಯನ ಕೈಗೊಂಡಿದ್ದರು. ಅಧ್ಯಯನದಲ್ಲಿ ಪ್ಲಾಸ್ಟಿಕ್ ಉತ್ಪಾದನೆಗೆ ಬಳಸುವ phthalate ಎನ್ನುವ ಹೆಸರಿನ ಕೆಮಿಕಲ್ ಮನುಷ್ಯನ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ಪತ್ತೆ ಮಾಡಿದ್ದಾರೆ. ನಿರಂತರ ಪ್ಲಾಸ್ಟಿಕ್ ಮಾಲಿನ್ಯವನ್ನು ಹೀರಿಕೊಳ್ಳುವ ಮನುಷ್ಯನಿಂದ ಹುಟ್ಟುವ ಮಕ್ಕಳಲ್ಲಿ ಜನನಾಂಗ ದೋಷಗಳು ಕಂಡುಬರುತ್ತವೆ ಎಂದು ಕಂಡುಕೊಂಡಿದ್ದಾರೆ.

Phthalate ಕೆಮಿಕಲ್ ಬಳಸುವುದರಿಂದ ಪ್ಲಾಸ್ಟಿಕ್ ಹೆಚ್ಚು ಫ್ಲೆಕ್ಸಿಬಲ್ ಆಗಿ ಪರಿವರ್ತನೆಯಾಗುತ್ತವೆ. ಆದರೆ, ಈ ರೀತಿಯ ವಿಷಕಾರಿ ಕೆಮಿಕಲ್ ಆಟಿಕೆ ಇನ್ನಿತರ ಸಾಮಗ್ರಿಗಳ ಮೂಲಕ ಮನುಷ್ಯನ ಆಹಾರ ಸೇರುತ್ತಿದ್ದು, ದೀರ್ಘಕಾಲೀನ ಪ್ರಭಾವಗಳನ್ನು ಬೀರುತ್ತಿದೆ. ಮನುಷ್ಯನಲ್ಲಿ ಸಹಜವಾಗಿ ಉತ್ಪಾದನೆಯಾಗುವ ಹಾರ್ಮೋನ್ ಗಳಿಗೆ ಪೆಟ್ಟು ನೀಡಲಿದೆ. ಇದರಿಂದ ಮನುಷ್ಯ ಕುಲದ ಮೇಲೆ ಮಹತ್ತರ ಪರಿಣಾಮ ಬೀರಲಿದೆ ಎಂದು ಶನ್ನಾ ಸ್ವಾನ್ ಹೇಳಿದ್ದಾರೆ.
An environmental scientist, in her new book titled Count Down, has warned that human penises are shrinking and genitals becoming malfunctioned due to pollution. Dr Shanna Swan writes that humanity is facing an "existential crisis" in fertility rates because of phthalates.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm