ಬ್ರೇಕಿಂಗ್ ನ್ಯೂಸ್
20-08-20 09:46 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 20: ಕೊರೊನಾ ಲಾಕ್ ಡೌನ್ ಎಲ್ಲ ಕೈಗಾರಿಕಾ ಕ್ಷೇತ್ರಗಳನ್ನೂ ಅಡ್ಡಡ್ಡ ಮಲಗಿಸಿಬಿಟ್ಟಿದೆ. ಇದರಲ್ಲಿ ಹೆಚ್ಚಿನ ಬಿಸಿ ಅನುಭವಿಸಿರುವುದು ಆಟೋಮೊಬೈಲ್ ಕ್ಷೇತ್ರ. ಇದರ ಪರಿಣಾಮ ಎಂಬಂತೆ, ಜಗತ್ತಿನ ಅತಿ ದುಬಾರಿ ಮತ್ತು ಹೈಎಂಡ್ ಬೈಕ್ ಎಂದು ಹೆಸರು ಗಳಿಸಿರುವ ಅಮೆರಿಕನ್ ಮೂಲದ ಹರ್ಲೇ ಡೇವಿಡ್ಸನ್ ಭಾರತದಲ್ಲಿ ತನ್ನ ಉತ್ಪಾದನೆಯನ್ನೇ ನಿಲ್ಲಿಸಲು ಮುಂದಾಗಿದೆ.
ಜಗತ್ತಿನ ಅತಿ ದೊಡ್ಡ ಬೈಕ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಹರ್ಲೇ ಡೇವಿಡ್ಸನ್ ಬೈಕ್ ಗಳು 2019 -2020ರ ಸಾಲಿನಲ್ಲಿ ಕೇವಲ 2500 ಯೂನಿಟ್ ಗಳಷ್ಟೇ ಮಾರಾಟವಾಗಿವೆ. ಅದರಲ್ಲೂ ಕಳೆದ ಎಪ್ರಿಲ್ – ಜೂನ್ ಅವಧಿಯಲ್ಲಿ ನೂರು ಬೈಕ್ ಗಳಷ್ಟೇ ಸೇಲ್ ಆಗಿದ್ದವು. ದಿಢೀರ್ ಆಗಿ ಮಾರಾಟ ಕುಸಿತ ಕಂಡಿದ್ದರಿಂದ ಕಂಪನಿಯ ಮಾರ್ಕೆಟಿಂಗ್ ವಿಭಾಗ, ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಹರ್ಲೇ ಡೇವಿಡ್ಸನ್ ಕಂಪೆನಿ, ಹರ್ಯಾಣದ ಬವಾಲ್ ನಲ್ಲಿ 2009ರಿಂದ ಉತ್ಪಾದನಾ ಘಟಕ ಹೊಂದಿದ್ದು ಈ ಬಾರಿ ಅತಿ ಕಡಿಮೆ ಮಾರಾಟ ದಾಖಲಿಸಿದೆ. ಇದೇ ವೇಳೆ, ಹತ್ತಿರದ ಪ್ರತಿಸ್ಪರ್ಧಿ ರಾಯಲ್ ಎನ್ ಫೀಲ್ಡ್ 2019- 2020ರ ಸಾಲಿನಲ್ಲಿ ಭಾರತದಲ್ಲಿ 42 ಸಾವಿರ ಬೈಕ್ ಗಳನ್ನು ಮಾರಾಟ ಮಾಡಿದೆ.
ಆಮದು ತೆರಿಗೆ ಏರಿಳಿತವೂ ಕಾರಣ ?
ಅಮೆರಿಕದಲ್ಲಿ ದಿಢೀರ್ ಆಗಿ ಆಮದು ತೆರಿಗೆಯನ್ನು ಹೆಚ್ಚಿಸಿದ್ದೂ ಹರ್ಲೇ ಡೇವಿಡ್ಸನ್ ಭಾರತದಿಂದ ಕಾಲು ಹಿಂತೆಗೆಯಲು ಕಾರಣ ಎನ್ನಲಾಗ್ತಿದೆ. ಇದೇ ವೇಳೆ, ಭಾರತದಲ್ಲಿ 1600 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಇಂಜಿನ್ ಸಹಿತ ಬೈಕ್ ಗಳ ಮೇಲಿನ ಆಮದು ತೆರಿಗೆಯನ್ನು ಇಳಿಸಲಾಗಿದೆ. ಈ ಎರಡು ಕಾರಣಗಳಿಂದ ಹರ್ಲೇ ಡೇವಿಡ್ಸನ್ ಕಂಪೆನಿಗೆ ಭಾರತಕ್ಕೆ ವಿದೇಶದಿಂದಲೇ ಬೈಕ್ ಗಳನ್ನು ತರಿಸುವುದು ಕಡಿಮೆ ಖರ್ಚಿನಲ್ಲಿ ಸಾಧ್ಯವಾಗಲಿದೆ. ಕೊರೊನಾ ಲಾಕ್ ಡೌನ್ ಆಗಿ ಸೇಲ್ಸ್ ಕಡಿಮೆಯಾಗಿರುವ ಕಾರಣಕ್ಕಿಂತಲೂ ತೆರಿಗೆ ಇಳಿಕೆಯೇ ಪ್ರಮುಖ ಕಾರಣ ಎನ್ನುವ ವಿಶ್ಲೇಷಣೆ ನಡೆಸಲಾಗುತ್ತಿದೆ.

ಹರ್ಲೇ ಡೇವಿಡ್ಸನ್ ಬೈಕ್ ಮಾದರಿಗಳಲ್ಲಿ ಅತಿ ಕಡಿಮೆಯದ್ದಂದ್ರೆ 4.69 ಲಕ್ಷ ರೂಪಾಯಿನದ್ದು. ಉಳಿದಂತೆ 11 ಲಕ್ಷ, 18 ಲಕ್ಷ, 50 ಲಕ್ಷದ ಬೈಕ್ ಗಳನ್ನು ತಯಾರಿಸುತ್ತಿದ್ದು, ಇಂಥ ದುಬಾರಿ ಬೈಕ್ ಗಳನ್ನು ಕೊಳ್ಳುವ ಮಂದಿ ಯುರೋಪ್, ಅಮೇರಿಕಾಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ. ಈ ಕಾರಣದಿಂದ 2020-21ರಲ್ಲಿ ಭಾರತದಲ್ಲಿ 2.5 ಲಕ್ಷ ರೂಪಾಯಿಗೆ, ಅತಿ ಕಡಿಮೆ ಬೆಲೆಯ ಬೈಕ್ ತಯಾರಿಸಲು ಕಂಪನಿ ಮುಂದಾಗಿತ್ತು. ಆದರೆ, ಇವೆಲ್ಲವನ್ನೂ ಬದಿಗಿಟ್ಟು ಈಗ ಸೇಲ್ಸ್ ಕಾರಣ ಮುಂದಿಟ್ಟು ದೇಶದ ಏಕೈಕ ಉತ್ಪಾದನಾ ಘಟಕವನ್ನು ಮುಚ್ಚಲು ಹರ್ಲೇ ಡೇವಿಡ್ಸನ್ ಕಂಪನಿ ಚಿಂತನೆ ನಡೆಸಿದೆ.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm