ಬ್ರೇಕಿಂಗ್ ನ್ಯೂಸ್
17-03-21 04:28 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಮಾ.17: ತ್ರಿಪುರಾ ಸಿಎಂ ಬಿಪ್ಲವ್ ಕುಮಾರ್ ದೇವ್ ಕೇರಳದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಕೇರಳದಲ್ಲಿ ಮೂಲಸೌಕರ್ಯ ಅಭಿವೃದ್ಧಿ ತ್ರಿಪುರಾಗಿಂತಲೂ ಕಡೆಯಾಗಿದೆ. ಬಿಜೆಪಿ ಒಂದ್ವೇಳೆ ಅಧಿಕಾರಕ್ಕೆ ಬಂದಲ್ಲಿ ಕೇರಳದ ಚಿತ್ರಣವೇ ಬದಲಾಗಲಿದೆ. ಪವಾಡ ಸೃಷ್ಟಿಯಾಗಲಿದೆ ಎಂದು ಬಿಪ್ಲವ್ ಕುಮಾರ್ ಹೇಳಿದ್ದಾರೆ.
ತಿರುವನಂತಪುರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ ಬಿಪ್ಲವ್ ಕುಮಾರ್, ಶಿಕ್ಷಣ ಮತ್ತು ಮೂಲಸೌಕರ್ಯದಲ್ಲಿ ಕೇರಳ, ತ್ರಿಪುರಾ ರಾಜ್ಯಕ್ಕಿಂತಲೂ ಹಿಂದಿದೆ. ಆದರೆ, ಕಳೆದ ಬಾರಿ ತ್ರಿಪುರಾ ಜನ ಸುದೀರ್ಘ ಕಾಲದ ಕಮ್ಯುನಿಸ್ಟ್ ಆಡಳಿತವನ್ನು ಅಂತ್ಯಗೊಳಿಸಿದರು. ನಾನು ತ್ರಿಪುರಾದಲ್ಲಿ ಬಿಜೆಪಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ, ಮಾಣೆಕ್ ಸರ್ಕಾರ್ ಎದುರಲ್ಲಿ ಈ ಹುಡುಗನಿಂದ ಅದೇನು ಮಾಡಲು ಸಾಧ್ಯ ಎಂದು ಕೆಲವರು ಪ್ರಶ್ನೆ ಮಾಡಿದ್ದರು. ತ್ರಿಪುರಾದಲ್ಲಿಯೂ ಬಿಜೆಪಿಗೆ ಒಬ್ಬ ಸಿಂಗಲ್ ಕೌನ್ಸಿಲರ್ ಕೂಡ ಇರಲಿಲ್ಲ. ಆದರೆ, ಅಲ್ಲಿ ಪವಾಡ ಎನ್ನುವ ರೀತಿ ಬಿಜೆಪಿ ಅಧಿಕಾರಕ್ಕೆ ಬಂತು. ಕೇರಳದಲ್ಲಿಯೂ ಅದೇ ಸ್ಥಿತಿಯಿದೆ. ಕಮ್ಯುನಿಸ್ಟ್ ವಿರೋಧಿ ಭಾವನೆ ಕೇರಳದಲ್ಲಿ ಮಾತ್ರ ಇರುವುದಲ್ಲ. ಇಡೀ ಜಗತ್ತಿನಲ್ಲಿ ಕಂಡುಬರುತ್ತಿದೆ. ತ್ರಿಪುರಾ ರೀತಿಯ ಫಲಿತಾಂಶವನ್ನು ಕೇರಳದ ಜನ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದೇ ಒಂದು ರಾಜಕೀಯ ಕೊಲೆ ನಡೆದಿಲ್ಲ. ಕೇರಳದಲ್ಲಿ ಮಾರ್ಕಿಸ್ಟ್ ಮತ್ತು ಎಸ್ ಡಿಪಿಐ ರೀತಿಯ ಉಗ್ರವಾದಿ ಸಂಘಟನೆಗಳು ಕೂಡ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡಿವೆ. ಇವೆಲ್ಲದಕ್ಕೂ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅಂತ್ಯ ಬೀಳಲಿದೆ. ಆದರೆ, ಬಿಜೆಪಿಯನ್ನು ಮಾರ್ಕಿಸ್ಟರು ಸೇರಿ ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸುತ್ತಿದೆ. ನಿಜಕ್ಕಾದರೆ, ಮಾರ್ಕಿಸ್ಟರು ಧರ್ಮ ಮತ್ತು ಜಾತಿಗಳನ್ನೇ ಒಡೆದು ಆಡಳಿತ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಪಶ್ಚಿಮ ಬಂಗಾಳದಲ್ಲಿ ಒಂದಾಗಿರುವ ಸಿಪಿಎಂ ಮತ್ತು ಕಾಂಗ್ರೆಸ್ ಕೇರಳದಲ್ಲಿ ಪರಸ್ಪರ ಎದುರಾಳಿಗಳು. ಇದೇ ಸಿಪಿಎಂ ಕೇಂದ್ರದಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುತ್ತದೆ. ಸರಿಯಾಗಿ ನೋಡಿದರೆ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಎರಡೂ ಒಂದೇ. ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮುಸ್ಲಿಮರನ್ನು ಬಂಗಾಳಕ್ಕೆ ಅಟ್ಟುತ್ತಾರೆಂದು ಕಮ್ಯುನಿಸ್ಟರು ಆರೋಪಿಸಿದ್ದರು. ಆದರೆ, ತ್ರಿಪುರಾದಲ್ಲಿ ಮುಸ್ಲಿಮ್ ಸೋದರರು ಸೌಹಾರ್ದವಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ಯಾವುದೇ ತೊಂದರೆ ಆಗಿಲ್ಲ. ತ್ರಿಪುರಾದಲ್ಲಿ ಬಿಜೆಪಿಯದ್ದು ಐತಿಹಾಸಿಕ ಸಾಧನೆ. ಶೂನ್ಯದಿಂದ ಮೇಲೆದ್ದು ಅಧಿಕಾರಕ್ಕೆ ಬಂದಿದ್ದು ಕೇರಳಕ್ಕೂ ಮಾದರಿಯಾಗಬೇಕು ಎಂದರು ಬಿಪ್ಲವ್ ಕುಮಾರ್.
ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ, ಅಮಿತ್ ಷಾ ಸೇರಿದಂತೆ ಘಟಾನುಘಟಿಗಳು ಪ್ರಚಾರಕ್ಕೆ ಬರಲಿದ್ದಾರೆ. ಮಾರ್ಚ್ 3ರಿಂದ ಎಪ್ರಿಲ್ 2ರ ವರೆಗೆ ಮೋದಿ ಕೇರಳದಲ್ಲಿ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ , ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಸ್ಟಾರ್ ಪ್ರಚಾರಕಿ ಖುಷ್ಬು, ವಿಜಯಶಾಂತಿ ಕೂಡ ಕೇರಳದಲ್ಲಿ ಪ್ರಚಾರ ನಡೆಸಲಿದ್ದಾರೆ.
Tripura Chief Minister Biplab Kumar Deb on Tuesday said that if Kerala joins Prime Minister Narendra Modi, it will get a twin-engine NDA government for development.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm