ಬ್ರೇಕಿಂಗ್ ನ್ಯೂಸ್
05-03-21 05:11 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಮಾ.5: ಕೇರಳ ರಾಜಕೀಯದಲ್ಲಿ ಸಂಚಲನ ಎಬ್ಬಿಸಿದ್ದ ಗೋಲ್ಡ್ ಸ್ಮಗ್ಲಿಂಗ್ ಜಾಲ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಬಲವಾಗಿ ಸುತ್ತಿಕೊಂಡಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಎಂಬ ಮಹಿಳೆ, ವಿವಿಧ ಏಜನ್ಸಿಗಳ ತನಿಖೆಯ ಸಂದರ್ಭ ಸಿಎಂ ಪಿಣರಾಯಿ ಸೇರಿದಂತೆ ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾತಿ ಹೊಂದಿರುವುದನ್ನು ಬಾಯಿಬಿಟ್ಟಿದ್ದಾಳೆ. ತನಿಖಾ ಹಂತದ ಬಗ್ಗೆ ಕಸ್ಟಮ್ ಕಮಿಷನರ್ ಸುಮಿತ್ ಕುಮಾರ್ ಹೈಕೋರ್ಟಿಗೆ ಮಾಹಿತಿ ನೀಡಿದ್ದಾರೆ.
ಚಿನ್ನ ಕಳ್ಳಸಾಗಾಣಿಕೆ ಮತ್ತು ಅಕ್ರಮವಾಗಿ ಹಣದ ವಹಿವಾಟು ನಡೆಸುತ್ತಿದ್ದ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣದ ವಿಚಾರಣೆ ಸಂದರ್ಭ ಆರೋಪಿ ಸ್ವಪ್ನಾ ಎರ್ನಾಕುಲಂ ಕೋರ್ಟಿನಲ್ಲಿ ಸ್ವತಃ ಈ ಬಗ್ಗೆ ಹೇಳಿಕೆ ನೀಡಿದ್ದಳು. ಆಕೆಯ ಹೇಳಿಕೆ ಪ್ರಕಾರ, ಕೇರಳ ವಿಧಾನಸಭೆ ಸ್ಪೀಕರ್ ಸೇರಿದಂತೆ ಸಿಎಂ ಪಿಣರಾಯಿ ವಿಜಯನ್ ಸಂಪುಟದ ಮೂವರು ಪ್ರಭಾವಿ ಸಚಿವರು ಕೂಡ ಪ್ರಕರಣದಲ್ಲಿ ಶಾಮೀಲು ಹೊಂದಿದ್ದಾರೆ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬಗ್ಗೆ ಐಟಿ, ಇಡಿ, ಕಸ್ಟಮ್ಸ್ ಸೇರಿದಂತೆ ಐದು ಕೇಂದ್ರೀಯ ತನಿಖಾ ತಂಡಗಳು ತನಿಖೆ ನಡೆಸುತ್ತಿದ್ದು, ವಿವಿಧ ಕೋನಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖಾ ಹಂತದ ಬಗ್ಗೆ ಕಸ್ಟಮ್ಸ್ ವಿಭಾಗದ ಕಮಿಷನರ್ ಸುಮಿಟ್ ಕುಮಾರ್ ಇದೀಗ ಕೇರಳ ಹೈಕೋರ್ಟಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೆ, ಸ್ಪಪ್ನಾ ಸುರೇಶ್ ತನಗೆ ಸಿಎಂ ಪಿಣರಾಯಿ ವಿಜಯನ್ ಮತ್ತು ಆವರ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್ ಜೊತೆಗೆ ಹತ್ತಿರದ ನಂಟು ಇರುವ ಬಗ್ಗೆಯೂ ಮಾಹಿತಿ ನೀಡಿದ್ದಾಳೆ. ರಾಜ್ಯ ಸರಕಾರದಲ್ಲಿ ಪ್ರಭಾವಿಯಾಗಿರುವ ರಾಜಕಾರಣಿಗಳು, ಅಧಿಕಾರಿಗಳು ಕಿಕ್ ಬ್ಯಾಕ್ ಪಡೆದಿರುವ ಬಗ್ಗೆಯೂ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಸ್ವಪ್ನಾ ಅರೇಬಿಕ್ ಭಾಷೆ ತಿಳಿದಿದ್ದರಿಂದ ಕೇರಳದ ರಾಜಕಾರಣಿಗಳು ಮತ್ತು ಸೌದಿಯ ಅರಬಿಗಳ ಜೊತೆ ದುಬಾಷಿಯಾಗಿ ಕೆಲಸ ಮಾಡುತ್ತಿದ್ದಳು. ಹೀಗಾಗಿ ಅಕ್ರಮವಾಗಿ ಚಿನ್ನದ ಕಳ್ಳಸಾಗಣೆ ಮತ್ತು ಹಣದ ವಹಿವಾಟು ನಡೆಸುತ್ತಿರುವ ಬಗ್ಗೆ ಎಲ್ಲದಕ್ಕೂ ಆಕೆ ಸಾಕ್ಷಿಯಾಗಿದ್ದಳು.
ಪ್ರಿನ್ಸಿಪಾಲ್ ಸೆಕ್ರಟರಿಯಾಗಿದ್ದ ಎಸ್.ಶಿವಶಂಕರ್, ರಾಜಕಾರಣಿಗಳು ಮತ್ತು ಯುಎಇ ದೂತಾವಾಸದ ಕಚೇರಿಯ ಅಧಿಕಾರಿಗಳ ನಡುವೆ ಕೊಂಡಿಯಾಗಿದ್ದ. ಅಕ್ರಮ ಹಣಕಾಸು ವರ್ಗಾವಣೆಯನ್ನು ಅಧಿಕಾರಿಗಳ ನಡುವೆ ಸರಾಗವಾಗಿ ಕೆಲಸ ಮಾಡಿಸುತ್ತಿದ್ದ ಎಂದು ಸ್ವಪ್ನಾ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.
Days ahead of assembly polls, Swapna Suresh, the kingpin in the gold smuggling case, has named CM Vijayan and three cabinet ministers during her interrogation to the customs department.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm