ಬ್ರೇಕಿಂಗ್ ನ್ಯೂಸ್
25-02-21 09:58 am Headline Karnataka News Network ದೇಶ - ವಿದೇಶ
ಆಲಪ್ಪುಝ, ಫೆ.25: ಎಸ್ಡಿಪಿಐ ಮತ್ತು ಆರೆಸ್ಸೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಆರೆಸ್ಸೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆಗೈದ ಘಟನೆ ಇಲ್ಲಿನ ವಯಲಾರ್ ಪಂಚಾಯತ್ ವ್ಯಾಪ್ತಿಯ ನಾಗಂಕುಲರ ಎಂಬಲ್ಲಿ ನಡೆದಿದೆ.
ಆರೆಸ್ಸೆಸ್ ಶಾಖಾ ಮುಖ್ಯ ಶಿಕ್ಷಕ್ ಆಗಿದ್ದ ನಂದು ಯಾನೆ ರಾಹುಲ್ ಕೃಷ್ಣ (22) ಕೊಲೆಯಾದ ಯುವಕ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇರಳ ಭೇಟಿಯನ್ನು ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಎಸ್ಡಿಪಿಐ ಮುಂದಾಗಿತ್ತು. ಈ ಸಂಬಂಧ ವಾರದ ಹಿಂದೆ ಎಸ್ಡಿಪಿಐ ಕಾರ್ಯಕರ್ತರು ಸೇರಿ ವಯಲಾರ್ ನಲ್ಲಿ ಸಭೆ ನಡೆಸಿದ್ದರು. ಕಳೆದ ಭಾನುವಾರ ಯೋಗಿ ಆದಿತ್ಯನಾಥ್, ಕಾಸರಗೋಡಿಗೆ ಆಗಮಿಸಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಯಾತ್ರೆಗೆ ಚಾಲನೆ ನೀಡಿದ್ದರು. ಇದನ್ನು ವಿರೋಧಿಸಿ ಎಸ್ಡಿಪಿಐ ಕಾರ್ಯಕರ್ತರು ಮಾರ್ಚ್ ನಡೆಸಿದ್ದಲ್ಲದೆ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಘೋಷಣೆ ಕೂಗಿದ್ದರು.
ಬುಧವಾರ ಮತ್ತೆ ಆಲಪ್ಪುಝ ಜಿಲ್ಲೆಯ ವಯಲಾರ್ ಪ್ರದೇಶದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಮಾರ್ಚ್ ನಡೆಸಿದ್ದಲ್ಲದೆ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಅವಾಚ್ಯವಾಗಿ ನಿಂದಿಸುತ್ತಾ ಘೋಷಣೆ ಕೂಗಿದ್ದು ಆರೆಸ್ಸೆಸ್ ಕಾರ್ಯಕರ್ತರನ್ನು ಕೆರಳಿಸಿತ್ತು. ರಾತ್ರಿ ವೇಳೆಗೆ, ಎರಡೂ ಕಡೆಯ ಗುಂಪುಗಳು ಪ್ರತ್ಯೇಕವಾಗಿ ಮಾರ್ಚ್ ನಡೆಸಿದ್ದಲ್ಲದೆ ನಿಂದನೆಯ ಘೋಷಣೆಗಳನ್ನು ಕೂಗಿತ್ತು. ಆನಂತರ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಎಸ್ಡಿಪಿಐ ಕಡೆಯಿಂದ ದಾಳಿ ನಡೆದಿದೆ ಎನ್ನಲಾಗುತ್ತಿದ್ದು ಆರೆಸ್ಸೆಸ್ ಕಾರ್ಯಕರ್ತ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಘರ್ಷಣೆಯಲ್ಲಿ ಎಸ್ಡಿಪಿಐ ಮತ್ತು ಆರೆಸ್ಸೆಸ್ ಸೇರಿದ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಘಟನೆಯನ್ನು ಖಂಡಿಸಿ ಬಿಜೆಪಿ ಆಲಪ್ಪುಝ ಜಿಲ್ಲಾ ಘಟಕ ಬೆಳಗ್ಗಿನಿಂದ ಸಂಜೆಯ ವರೆಗೆ ಹರತಾಳಕ್ಕೆ ಕರೆ ನೀಡಿದೆ.
ವಯಲಾರ್ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನೆಲೆಯಾಗಿದ್ದು ಹೆಚ್ಚುವರಿ ಪೊಲೀಸರ ಪಡೆಯನ್ನು ನಿಯೋಜಿಸಲಾಗಿದೆ.
AN RSS worker was hacked to death allegedly by members of Social Democratic Party of India (SDPI), the political wing of Popular Front of India, during a clash in Alappuzha district on Wednesday night.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm