ಬ್ರೇಕಿಂಗ್ ನ್ಯೂಸ್
10-06-26 06:42 pm HK News Staffer ದೇಶ - ವಿದೇಶ
ನವದೆಹಲಿ, ಜೂ.10: ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತಿ ದೀರ್ಘಕಾಲ ನಿರಂತರವಾಗಿ ಅಧಿಕಾರ ನಡೆಸಿದ ಪ್ರಧಾನಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ 64 ವರ್ಷಗಳ ಹಳೆಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.
2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಅವರು ಜೂನ್ 10ರಂದು 4,399 ದಿನಗಳ ನಿರಂತರ ಆಡಳಿತ ಪೂರೈಸಿದ್ದು, 4,398 ದಿನಗಳ ಕಾಲ ಅಧಿಕಾರ ನಡೆಸಿದ್ದ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಮೀರಿದ್ದಾರೆ. ನೆಹರೂ ಅವರು 1952ರ ಮೇ 13ರಿಂದ 1964ರ ಮೇ 27ರವರೆಗೆ ನಿರಂತರವಾಗಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ಇದಕ್ಕೂ ಮುನ್ನ 2025ರ ಜುಲೈ 25ರಂದು ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 4,077 ದಿನಗಳ ನಿರಂತರ ಆಡಳಿತದ ದಾಖಲೆಯನ್ನು ಹಿಂದಿಕ್ಕುವ ಮೂಲಕ ದೇಶದ ಮೂರನೇ ಅತಿ ದೀರ್ಘಾವಧಿಯ ಪ್ರಧಾನಿಯಿಂದ ಎರಡನೇ ಸ್ಥಾನಕ್ಕೇರಿದ್ದರು. ಇದೀಗ ನೆಹರೂ ದಾಖಲೆಯನ್ನೂ ಮುರಿದು ಮೊದಲ ಸ್ಥಾನಕ್ಕೇರಿದ್ದಾರೆ.



ಈ ಐತಿಹಾಸಿಕ ಸಾಧನೆಯ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಸಂಪುಟ ಸಹೋದ್ಯೋಗಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು. ಸಚಿವ ಸಂಪುಟವು ಅಭಿನಂದನಾ ನಿರ್ಣಯವನ್ನೂ ಅಂಗೀಕರಿಸಿತು.
ಇನ್ನೊಂದೆಡೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 12 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೂನ್ 5ರಿಂದ 21ರವರೆಗೆ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳ ಕುರಿತು ಜನಜಾಗೃತಿ ಅಭಿಯಾನ ನಡೆಸಲು ಕೇಂದ್ರ ಸಚಿವರು, ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖಂಡರಿಗೆ ಸೂಚನೆ ನೀಡಲಾಗಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಕಳೆದ 12 ವರ್ಷಗಳ ಪಯಣವು ಜನರ ವಿಶ್ವಾಸ, ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಸಮರ್ಪಿತವಾಗಿದೆ. 140 ಕೋಟಿ ಭಾರತೀಯರ ಆಶೀರ್ವಾದದೊಂದಿಗೆ ಯುವಕರು, ಮಹಿಳೆಯರು ಮತ್ತು ರೈತರ ಸಬಲೀಕರಣಕ್ಕಾಗಿ ನಾವು ನಿರಂತರವಾಗಿ ಶ್ರಮಿಸಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಡಿಜಿಟಲ್ ಕ್ರಾಂತಿಯವರೆಗೆ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ನಿರ್ಮಿಸಿದೆ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಈ ಸಾಧನೆಗೆ ಎನ್ಡಿಎ ನಾಯಕರು ವಿಶೇಷ ಅಭಿನಂದನೆ ಸಲ್ಲಿಸಿದ್ದು, 72 ಪ್ರಮುಖ ನಾಯಕರು ಸಭೆ ಸೇರಿ ಜಂಟಿ ನಿರ್ಣಯ ಅಂಗೀಕರಿಸಲು ಮುಂದಾಗಿದ್ದಾರೆ. ಇದೇ ವೇಳೆ ಪ್ರಧಾನಿ ಅವರಿಗೆ ವಿಶೇಷ ಗೌರವ ಸಮಾರಂಭವೂ ಆಯೋಜಿಸಲಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮೋದಿಯವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ, “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಜನರು ಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಇದು ಸಾಕ್ಷಿ” ಎಂದು ಹೇಳಿದ್ದಾರೆ. ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ, ಮೋದಿ ಅವರನ್ನು ಜಾಗತಿಕ ರಾಜಕೀಯದ ‘ರೋಲ್ ಮಾಡೆಲ್’ ಎಂದು ಬಣ್ಣಿಸಿ, ಭಾರತದಲ್ಲಿ ಕೋಟ್ಯಂತರ ಜನರ ಜೀವನಮಟ್ಟ ಸುಧಾರಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಶಂಸಿಸಿದ್ದಾರೆ.
ಆದರೆ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “12 ವರ್ಷಗಳಲ್ಲಿ ಬಡವರ ಜೀವನ ಸುಧಾರಿಸುವ ಬದಲು ಉದ್ಯೋಗ ಮತ್ತು ಜೀವನೋಪಾಯದ ಮೇಲೆಯೇ ಹೊಡೆತ ಬಿದ್ದಿದೆ” ಎಂದು ಆರೋಪಿಸಿದ್ದಾರೆ.
ಒಟ್ಟಾರೆ, ಪ್ರಧಾನಿ ನರೇಂದ್ರ ಮೋದಿ ಅವರ 4,399 ದಿನಗಳ ನಿರಂತರ ಆಡಳಿತವು ಭಾರತೀಯ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆಯಾಗಿ ಗುರುತಿಸಿಕೊಂಡಿದ್ದು, ದೇಶದ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
26-11-26 08:34 pm
HK News Staffer
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
25-11-26 11:53 am
HK News Staffer
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
28-11-26 08:54 am
HK News Staffer
ಧರ್ಮಸ್ಥಳ ಅಸಹಜ ಸಾವು ಪ್ರಕರಣ ; ಎಸ್ಐಟಿ ವರದಿಯನ್ನು...
27-11-26 06:23 pm
ಬೋಳೂರು - ಬೆಂಗ್ರೆ ಸೇತುವೆ ಕಾಮಗಾರಿ ; ಕ್ರೇನ್ ಸಹಿತ...
27-11-26 12:28 pm
ಮಂಗಳೂರು - ಬೆಂಗಳೂರು ವಾಹನ ಸಂಚಾರಕ್ಕೆ ಮತ್ತೊಂದು ಹೊ...
26-11-26 09:00 pm
ಎಸ್ಐಟಿ ಕಚೇರಿಗೆ ಮಹೇಶ್ ಶೆಟ್ಟಿ ತಿಮರೋಡಿ ದಾಖಲೆ ಸಲ್...
26-11-26 03:53 pm
27-11-26 03:14 pm
HK News Staffer
ಗೂಗಲ್ನಲ್ಲಿ ಹುಡುಕಾಡಿ ತುಂಗಾ ನದಿಗೆ ಸ್ನಾನಕ್ಕಿಳಿದ...
26-11-26 08:35 pm
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm
ದುಬೈನಿಂದ ಚಿನ್ನ ಸ್ಮಗ್ಲಿಂಗ್ ; ಶೌಚಾಲಯದಲ್ಲಿ ಬಚ್ಚಿ...
26-11-26 01:01 pm