ಬ್ರೇಕಿಂಗ್ ನ್ಯೂಸ್
14-02-26 10:55 pm HK Staffer ದೇಶ - ವಿದೇಶ
ವಾಷಿಂಗ್ಟನ್, ಫೆ 14: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಭಾರತೀಯ ಮೂಲದ 54 ವರ್ಷದ ನಿಖಿಲ್ ಗುಪ್ತಾ ಅಮೆರಿಕದ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಕೊಲೆಗೆ ಸಂಚು ರೂಪಿಸುವುದು, ಬಾಡಿಗೆದಾರರ ನೇಮಕ ಹಾಗೂ ಹಣ ವರ್ಗಾವಣೆ ನಡೆಸಿದ್ದಾಗಿ ಒಪ್ಪಿಕೊಂಡಿರುವ ನಿಖಿಲ್ ಗುಪ್ತರನ್ನು ಅಮೆರಿಕದ ನ್ಯಾಯಾಲಯ ದೋಷಿಯಾಗಿ ಪರಿಗಣಿಸಲಾಗಿದೆ. ಮ್ಯಾನ್ಹ್ಯಾಟನ್ನ ಫೆಡರಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಖಿಲ್ ಗುಪ್ತಾಗೆ ಮೇ 29ರಂದು ಶಿಕ್ಷೆ ಪ್ರಕಟಿಸುವುದಾಗಿ ತಿಳಿಸಿದೆ. ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ನಿಖಿಲ್ ಗುಪ್ತಾಗೆ ಗರಿಷ್ಠ 40 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಗುಪ್ತರನ್ನು 2023ರ ಜೂನ್ 30ರಂದು ಚೆಕ್ ರಿಪಬ್ಲಿಕ್ನಲ್ಲಿ ಬಂಧಿಸಲಾಯಿತು. ನಂತರ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಯಿತು. 2023ರ ನವೆಂಬರ್ನಲ್ಲಿ ಅಮೆರಿಕ ನ್ಯಾಯಾಂಗ ಇಲಾಖೆ ಅಧಿಕೃತವಾಗಿ ಆರೋಪಗಳನ್ನು ಪ್ರಕಟಿಸಿತ್ತು.
ಅಮೆರಿಕದ ಅಟಾರ್ನಿ ಕಚೇರಿಯ ಪ್ರಕಾರ, 2023ರ ಮೇನಲ್ಲಿ ಗುಪ್ತರನ್ನು ಅಮೆರಿಕದಲ್ಲಿ ಹತ್ಯೆ ನಡೆಸಲು ಸಂಪರ್ಕಿಸಲಾಯಿತು. ಗುಪ್ತ ಸಂಪರ್ಕಿಸಿದ ವ್ಯಕ್ತಿ ಅಪರಾಧ ಜಗತ್ತಿನ ವ್ಯಕ್ತಿ ಎಂದು ಭಾವಿಸಿದ್ದರೂ, ಆತ ಡ್ರಗ್ ಎನ್ಫೋರ್ಸ್ಮೆಂಟ್ ಆಡಳಿತ (DEA) ರಹಸ್ಯ ಮೂಲವಾಗಿದ್ದನು.
ಯುಎಸ್ ಪ್ರಾಸಿಕ್ಯೂಟರ್ಗಳ ಪ್ರಕಾರ, ಈ ಸಂಚು ಭಾರತೀಯ ಸರ್ಕಾರಿ ಉದ್ಯೋಗಿಯ ನಿರ್ದೇಶನದ ಮೇರೆಗೆ ನಡೆದಿತ್ತು ಎಂದು ಆರೋಪಿಸಲಾಗಿದೆ. 2023ರಲ್ಲಿ ನಿಖಿಲ್ ಗುಪ್ತರನ್ನು ವಿಕಾಸ್ ಯಾದವ್ ಎಂಬ ಅಧಿಕಾರಿ ಸಂಪರ್ಕಿಸಿದ್ದಾಗಿ ತಿಳಿದುಬಂದಿದೆ. 1,00,000 ಡಾಲರ್ ಸುಪಾರಿಗೆ ಒಪ್ಪಂದವಾಗಿದ್ದು ಮುಂಗಡ ಹಣವಾಗಿ 15,000 ಡಾಲರ್ ಅನ್ನು ನಿಖಿಲ್ ಗುಪ್ತಾ ಖಾತೆಗೆ ಪಾವತಿಸಲಾಗಿತ್ತು.
ಹತ್ಯೆಗೆ ಅಗತ್ಯವಾದ ಮಾಹಿತಿ ಸಂಗ್ರಹಿಸಿ ಶೂಟರ್ಗೆ ಹಂಚಲಾಗಿತ್ತು. ಪನ್ನುನ್ ಅವರ ಮನೆ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ದಿನಚರಿ ಮಾಹಿತಿ ಹಂಚಿಕೊಳ್ಳಲಾಗಿತ್ತು. ನಿಗಾವಹಿಸಿದ ಚಿತ್ರಗಳನ್ನೂ ಕಳುಹಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಆದರೆ ಕೊಲೆ ಯತ್ನ ನಡೆಯುವ ಮುನ್ನವೇ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮತ್ತು ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ ಅಧಿಕಾರಿಗಳು ಸಂಚುವನ್ನು ಭೇದಿಸಿದ್ದಾರೆ.
ಜೂನ್ 18, 2023ರಂದು ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ಡೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿದ್ದ ಬಳಿಕ “ಇನ್ನು ಕಾಯಬೇಕಾಗಿಲ್ಲ” ಎಂದು ಗುಪ್ತ ಹೇಳಿದ್ದಾನೆಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತ ಒಪ್ಪಿಕೊಂಡಿರುವ ಆರೋಪಗಳ ಪ್ರಕಾರ:
ಒಟ್ಟು ಗರಿಷ್ಠ 40 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದ್ದು ಈ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಹಾಗೂ ರಾಜತಾಂತ್ರಿಕ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
In a significant development in an international assassination plot case, 54-year-old Indian-origin national Nikhil Guptahas pleaded guilty in a U.S. court to charges related to a conspiracy to kill Khalistani separatist leader Gurpatwant Singh Pannun.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm