ಬ್ರೇಕಿಂಗ್ ನ್ಯೂಸ್
11-02-26 06:47 pm HK News Desk ದೇಶ - ವಿದೇಶ
ಇಸ್ಲಮಾಬಾದ್, ಫೆ.11 : ಅಮೆರಿಕಾ, ಭಾರತದ ಜೊತೆಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾದ ಬೆನ್ನಲ್ಲೇ ಪಾಕಿಸ್ತಾನ ಪತರಗುಟ್ಟಿ ಹೋಗಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಅಮೆರಿಕಾ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅಮೆರಿಕಾ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್ ರೀತಿ ಬಳಸಿ ಬಿಸಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿರುವ ಆಸಿಫ್, 1999ರ ನಂತರ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿ ಅಮೆರಿಕಾದೊಂದಿಗೆ ಮಾಡಿಕೊಂಡ ಒಪ್ಪಂದವು ಪಾಕಿಸ್ತಾನಕ್ಕೆ ಶಾಶ್ವತ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ. ಜಾಗತಿಕ ರಾಜಕಾರಣದಲ್ಲಿ ನಮಗೆ ಅಮೆರಿಕಾದ ಬೆಂಬಲ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿ ನಾವು, ಅವರು ಹೇಳಿದನ್ನೆಲ್ಲ ಕೇಳಿದೆವು. ಇದರಿಂದಾಗಿ ಇಂದು ಪಾಕಿಸ್ತಾನ ದುಸ್ಥಿತಿ ಅನುಭವಿಸುತ್ತಿದೆ. ಇದಕ್ಕೆ ನಮ್ಮ ಮತ್ತು ಅಮೆರಿಕಾ ನಡುವಿನ ಒಪ್ಪಂದವೇ ನೇರ ಕಾರಣವಾಗಿದೆ.
ನಾವು ಮಾಡಿದ ತಪ್ಪಿನಿಂದಾಗಿ ಈಗಲೂ ನಾವು ಮೇಲೇಳಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದ ಶಿಕ್ಷಣ ವ್ಯವಸ್ಥೆಯನ್ನು ಮರು ರೂಪಿಸಿ, ಚಿಕ್ಕ- ಚಿಕ್ಕ ಮಕ್ಕಳಲ್ಲಿ ಧಾರ್ಮಿಕ ದ್ವೇಷ (ಜಿಹಾದ್) ವನ್ನು ತುಂಬಿದ್ದರಿಂದ ನಮ್ಮ ದೇಶ ಏಳಿಗೆಯನ್ನು ಕಾಣಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
1980ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಸೋವಿಯತ್ ವಿರೋಧಿ ಯುದ್ಧಕ್ಕೂ ಇಸ್ಲಾಂಗೂ ಯಾವುದೇ ಸಂಬಂಧ ಇರಲಿಲ್ಲ. ಇದು ಕೇವಲ ಅಮೆರಿಕಾದ ಪ್ರತಿಷ್ಠೆಗೆ ನಡೆದ ಯದ್ಧವಾಗಿತ್ತು. ಈ ಯುದ್ಧದಲ್ಲಿ ಜಿಹಾದ್ ಘೋಷಣೆ ಮಾಡುವ ಅಗತ್ಯವೇ ಇರಲಿಲ್ಲ. ಯಾವುದೇ ಲಾಭವಿಲ್ಲದಿದ್ದರೂ ಈ ಯುದ್ಧದಲ್ಲಿ ಭಾಗವಹಿಸಿದರಿಂದ ಪಾಕಿಸ್ತಾನವು ದೀರ್ಘ ಕಾಲೀನ ಅಸ್ಥಿರತೆ ಮತ್ತು ಸಾಮಾಜಿಕ ಹಾನಿಯನ್ನು ಎದುರಿಸಬೇಕಾಯಿತು. ಇದನ್ನು ಇನ್ನು ಮುಂದಾದರೂ ನಿಲ್ಲಿಸಬೇಕು ಎಂದರು.
ಇದೇ ವೇಳೆ ಅಮೆರಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸೆಪ್ಟೆಂಬರ್ 11, 2001ರ ದಾಳಿಯ ನಂತರ, ಅಮೆರಿಕಾ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಲು ಮುಂದಾಯಿತು. ಇದಕ್ಕೆ ಪಾಕಿಸ್ತಾನವನ್ನು ಬಳಸಿಕೊಂಡಿತು. ಈ ಒಪ್ಪಂದವನ್ನು ಒಪ್ಪಿಕೊಂಡ ಆಗಿನ ಮಿಲಿಟರಿ ಆಡಳಿತಗಾರ ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಪಾಕಿಸ್ತಾನವನ್ನು, ತನ್ನದಲ್ಲದ ಯುದ್ಧಗಳಲ್ಲಿ ಸಿಲುಕುವಂತೆ ಮಾಡಿದರು ಎಂದು ಆರೋಪಿಸಿದರು.
ಅಫ್ಘಾನಿಸ್ತಾನದ ಜೊತೆ ಹೊಂದಾಣಿಕೆ ಮಾಡಿಕೊಂಡ ಅಮೆರಿಕಾ, ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರನ್ನು ಬಳಸಿ ಎಸೆದಂತೆ ನಮ್ಮನ್ನು ದೂರವಿಟ್ಟರು. ನಾವು ಅನುಭವಿಸಿದ ಕಷ್ಟಕ್ಕೆ ಯಾವುದೇ ಸಹಾಯ ಅವರಿಂದ ಬರಲಿಲ್ಲ. ಇಬ್ಬರ ನಡುವಿನ ಜಗಳದಲ್ಲಿ ಪಾಕಿಸ್ತಾನವನ್ನು ಕೈಗೊಂಬೆಯಂತೆ ಮಾಡಲಾಯಿತು ಎಂದು ಕಿಡಿಕಾರಿದರು.
Pakistan’s Defence Minister Khawaja Asif criticized the United States, claiming Pakistan was “used like toilet paper” in past alliances, especially during the Afghan conflict and post-9/11 war on terror. Speaking in Parliament, he said Pakistan’s support for US policies since 1999 caused long-term instability and social damage.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm