ಮಥುರಾದಲ್ಲಿ ಮೂವರು ಮಕ್ಕಳಿಗೆ ವಿಷವುಣಿಸಿ ದಂಪತಿ ಸಾವಿಗೆ ಶರಣು ; ಜಾಗ ಮಾರಿದ್ದ ಚಿಂತೆ, ದೇವಸ್ಥಾನದಲ್ಲಿ ಅವಮಾನ ! ಗೋಡೆಯಲ್ಲೇ ಡೆತ್ ನೋಟ್ 

10-02-26 07:31 pm       HK News Desk   ದೇಶ - ವಿದೇಶ

ಉತ್ತರ ಪ್ರದೇಶದ ಮಥುರಾದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವರು ಮಕ್ಕಳಿಗೆ ಹಾಲಿಗೆ ವಿಷ ಬೆರೆಸಿ ಕೊಟ್ಟು ಪತಿ- ಪತ್ನಿ ತಾವೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮಕ್ಕಳು ಹೊರಗೆ ಬಾರದೇ ಇದ್ದುದರಿಂದ  ನೆರೆಯವರು ಅನುಮಾನದಿಂದ ಮನೆ ಬಾಗಿಲು ತೆರೆದಾಗ ಐವರೂ ಮೃತಪಟ್ಟಿದ್ದಾರೆ.

ಮಥುರಾ, ಫೆ.10 : ಉತ್ತರ ಪ್ರದೇಶದ ಮಥುರಾದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವರು ಮಕ್ಕಳಿಗೆ ಹಾಲಿಗೆ ವಿಷ ಬೆರೆಸಿ ಕೊಟ್ಟು ಪತಿ- ಪತ್ನಿ ತಾವೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮಕ್ಕಳು ಹೊರಗೆ ಬಾರದೇ ಇದ್ದುದರಿಂದ  ನೆರೆಯವರು ಅನುಮಾನದಿಂದ ಮನೆ ಬಾಗಿಲು ತೆರೆದಾಗ ಐವರೂ ಮೃತಪಟ್ಟಿದ್ದಾರೆ.

ಮಥುರಾ ಜಿಲ್ಲೆಯ ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ಪರ್‌ಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಘಟನೆಗೆ ಕಾರಣವೇನೆಂದು ತಿಳಿಯಲು ಮೃತರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರೈತ ಮನೀಶ್(35), ಪತ್ನಿ ಸೀಮಾ, ಇಬ್ಬರು ಹೆಣ್ಮಕ್ಕಳಾದ ಪ್ರಿಯಾಂಶಿ, ಹನಿ ಮತ್ತು ಎರಡೂವರೆ ವರ್ಷದ ಪಂಕಜ್ ಮೃತರು.‌ ತಾಯಿ ಮಕ್ಕಳ ಶವಗಳು ಬೆಡ್ ನಲ್ಲಿದ್ದರೆ, ಮನೀಶ್ ಹೊರಗಡೆ ಹಾಲ್ನಲ್ಲಿತ್ತು. ಮನೆಯ ಒಳಗಡೆ ಗೋಡೆಯಲ್ಲಿ ನಾನು ಮನೀಶ್ ಮತ್ತು ಸೀಮಾ ನಮ್ಮ ಸ್ವಂತ ಇಚ್ಛೆಯಂತೆ ಸಾವಿಗೆ ಶರಣಾಗಿದ್ದೇವೆ, ಇದರಲ್ಲಿ ಯಾರದೇ ಪಾತ್ರವಿಲ್ಲ. ಯಾರಿಗೂ ಕಿರುಕುಳ ಕೊಡುವುದು ಬೇಡ ಎಂದು ಬರೆಯಲಾಗಿದೆ. ಇದೇ ಅಂಶವನ್ನು ಕಾಗದದಲ್ಲಿ ಡೆತ್ ನೋಟ್ ಬರೆಯಲಾಗಿದೆ. 

ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿ ಮೊದಲು ತಮ್ಮ ಮಕ್ಕಳ ಹಾಲಿಗೆ ವಿಷ ಹಾಕಿ, ನಂತರ ತಾವೂ ಅದನ್ನು ಕುಡಿದು ಸಾವಿಗೆ ಶರಣಾಗಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಒಂದೇ ಕುಟುಂಬದ ಐವರು ಮೃತಪಟ್ಟಿರುವುದು ಸಂಪೂರ್ಣ ಗ್ರಾಮವನ್ನು ಶೋಕದಲ್ಲಿ ಮುಳುಗಿಸಿದೆ.
ರೈತ ಮನೀಶ್ ಮತ್ತು ಅತನ ಸೋದರ ಒಂದೇ ಗ್ರಾಮದಲ್ಲಿ ಪ್ರತ್ಯೇಕ ವಾಸವಿದ್ದರು. ಇತ್ತೀಚೆಗೆ ತನಗಿದ್ದ ಜಾಗವನ್ನು ಮನೀಶ್ 19 ಲಕ್ಷಕ್ಕೆ ಮಾರಾಟ ಮಾಡಿದ್ದು ಅದರ ಹಣವನ್ನು ಬ್ಯಾಂಕಿನಲ್ಲಿಟ್ಟಿದ್ದ. ಇದಲ್ಲದೆ, ದೈನಿಕ್ ಭಾಸ್ಕರ್ ಮಾಹಿತಿ ಪ್ರಕಾರ ಇತ್ತೀಚೆಗೆ ಮನೀಶ್ ಕುಟುಂಬದೊಂದಿಗೆ ದೇವಸ್ಥಾನ ತೆರಳಿದ್ದಾಗ ಅಲ್ಲಿನ‌ ಅರ್ಚಕ ಅವಮಾನಿಸಿ ಕೂಡಿ ಹಾಕಿದ್ದರು ಎನ್ನುವ ಮಾಹಿತಿ ಇದೆ.‌

In a tragic incident in Uttar Pradesh’s Mathura district, a couple allegedly poisoned their three young children before taking their own lives. The family of five was found dead inside their home in Khapparpur village after neighbors grew suspicious. A suicide note written on the wall and on paper stated that no one else was responsible for their decision. Preliminary reports suggest the couple mixed poison in milk given to the children and later consumed it themselves.