ರಸ್ತೆ ಬದಿ ನಮಾಜ್‌ ಮಾಡುತ್ತಿದ್ದ ಪ್ಯಾಲೆಸ್ತೀನ್‌ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆಸಿದ ಇಸ್ರೇಲ್ ಸೈನಿಕ ! ವಿಡಿಯೋ ವೈರಲ್ 

27-12-25 04:29 pm       HK News Desk   ದೇಶ - ವಿದೇಶ

ರಸ್ತೆ ಬದಿಯಲ್ಲಿ ಕುಳಿತು ನಮಾಜ್‌ ಮಾಡುತ್ತಿದ್ದ ಪ್ಯಾಲೆಸ್ತೀನ್‌ ವ್ಯಕ್ತಿಗೆ ಇಸ್ರೇಲಿ ಸೈನಿಕನೊಬ್ಬ ವಾಹನದಿಂದ ಡಿಕ್ಕಿ ಹೊಡೆಸಿರುವ ಘಟನೆ ನಡೆದಿದ್ದು ಇದರ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಜೆರುಸಲೇಮ್, ಡಿ.27 : ರಸ್ತೆ ಬದಿಯಲ್ಲಿ ಕುಳಿತು ನಮಾಜ್‌ ಮಾಡುತ್ತಿದ್ದ ಪ್ಯಾಲೆಸ್ತೀನ್‌ ವ್ಯಕ್ತಿಗೆ ಇಸ್ರೇಲಿ ಸೈನಿಕನೊಬ್ಬ ವಾಹನದಿಂದ ಡಿಕ್ಕಿ ಹೊಡೆಸಿರುವ ಘಟನೆ ನಡೆದಿದ್ದು ಇದರ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇಸ್ರೇಲ್ ಗಡಿಭಾಗದ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ರಸ್ತೆಯ ಪಕ್ಕದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್ಯಕ್ತಿಗೆ, ರೈಫಲ್ ಹಿಡಿದುಕೊಂಡು ಇಸ್ರೇಲಿ ಮೀಸಲು ಪಡೆಯ ಸೈನಿಕನೊಬ್ಬ ಎಟಿವಿ ವಾಹವನ್ನು ಡಿಕ್ಕಿ ಹೊಡೆಸಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. 

ಶಸ್ತ್ರಸಜ್ಜಿತ ಸೈನಿಕ ಪ್ಯಾಲೆಸ್ತೀನಿಯನ್ ವ್ಯಕ್ತಿಗೆ ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ನಂತರ ಇಲ್ಲಿಂದ ಹೊರಡುವಂತೆ ಸೂಚಿಸಿದ್ದಾನೆ. ಈತ ಮೀಸಲು ಪಡೆಯ ಸಿಬ್ಬಂದಿಯಾಗಿದ್ದು, ಆ ರೀತಿಯ ಕೃತ್ಯಕ್ಕಾಗಿ ಅವರನ್ನು ಮಿಲಿಟರಿ ಸೇವೆಯಿಂದ ಮುಕ್ತಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಸೈನಿಕ ತನ್ನ ಅಧಿಕಾರವನ್ನು ಉಲ್ಲಂಘಿಸಿ ಅತಿರೇಕದ ವರ್ತನೆ ತೋರಿಸಿದ್ದಾರೆ. ಆತನ ಬಳಿಯಿದ್ದ ಶಸ್ತ್ರಾಸ್ತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಾಹನ ಡಿಕ್ಕಿ ಹೊಡೆದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಗಡಿಭಾಗದಲ್ಲಿ ಪ್ಯಾಲೆಸ್ತೀನಿಯರ ವಿರುದ್ಧ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲಿ ಕಡೆಯಿಂದ ದಾಳಿಗಳಾಗಿವೆ. ಘಟನೆಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದು 750ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಅಂಕಿ ಅಂಶಗಳು ತಿಳಿಸಿವೆ.

A shocking incident from the occupied West Bank has gone viral after an Israeli reserve soldier intentionally rammed an ATV into a Palestinian man who was praying on the roadside. Video footage shows the armed soldier striking the man and then ordering him to leave the area. The Israeli military has confirmed that the soldier violated protocol and has been removed from service, with his weapon confiscated.