ಬ್ರೇಕಿಂಗ್ ನ್ಯೂಸ್
30-12-20 01:50 pm Headline Karnataka News Network ದೇಶ - ವಿದೇಶ
ತಿರುವನಂತಪುರ, ಡಿ.30: ದೇವರ ಸ್ವಂತ ನಾಡೆಂದು ಕರೆಸಿಕೊಳ್ಳುವ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಪೊಲೀಸರು ಮತ್ತು ನ್ಯಾಯಾಂಗದ ಸಮ್ಮುಖದಲ್ಲೇ ದಲಿತ ದಂಪತಿಯ ಮಾರಣ ಹೋಮ ನಡೆದಿದ್ದು ಸಿಪಿಎಂ ನೇತೃತ್ವದ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ಡಿ.22ರಂದು ತಿರುವನಂತಪುರದ ನೈಯಾಟಿಂಕರದಲ್ಲಿ ಘಟನೆ ನಡೆದಿದ್ದು, ತಮ್ಮ ವಾಸದ ಮನೆಯನ್ನು ತೆರವು ಮಾಡಲು ಬಂದಿದ್ದ ಪೊಲೀಸರ ವಿರುದ್ಧ ಆಕ್ರೋಶಗೊಂಡು ಅವರ ಮುಂದೆಯೇ ದಂಪತಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 47 ವರ್ಷದ ರಾಜನ್ ಮತ್ತು 40 ವರ್ಷದ ಅಂಬಲಿ ಸಾವಿಗೆ ಶರಣಾದವರು. ತೀವ್ರ ಸುಟ್ಟ ಗಾಯಗೊಂಡಿದ್ದ ದಂಪತಿಯನ್ನು ತಿರುವನಂತಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ, ರಾಜನ್ ಭಾನುವಾರ ರಾತ್ರಿ ಮತ್ತು ಪತ್ನಿ ಅಂಬಲಿ ಸೋಮವಾರ ಸಾವಿಗೀಡಾಗಿದ್ದಾರೆ.
ಮೂರು ಸೆಂಟ್ ಸರಕಾರಿ ಜಾಗದಲ್ಲಿ ದಂಪತಿ ಶೆಡ್ ರೂಪದಲ್ಲಿ ಮನೆ ಕಟ್ಟಿಕೊಂಡಿದ್ದಾಗಿ ನೆರೆಮನೆಯವರು ದೂರು ನೀಡಿದ್ದರು. ಎರಡು ಮನೆಗಳ ನಡುವಿನ ವಿವಾದ ಕೋರ್ಟಿಗೆ ಹೋಗಿ, ಕಳೆದ ಜೂನ್ ತಿಂಗಳಲ್ಲಿ ಶೆಡ್ ತೆರವುಗೊಳಿಸಲು ಆದೇಶ ಬಂದಿತ್ತು. ಈ ನಡುವೆ, ದಲಿತ ಕುಟುಂಬ ಕೋರ್ಟ್ ಆದೇಶಕ್ಕೆ ಸ್ಟೇ ತಂದಿತ್ತು ಎನ್ನಲಾಗುತ್ತಿದೆ. ಹೀಗಿದ್ದರೂ, ನೈಯಾಟಿಂಕರ ಪೊಲೀಸ್ ಠಾಣೆ ಸಿಬಂದಿ ಮತ್ತು ನ್ಯಾಯಾಂಗದ ಆದೇಶ ಪಾಲನೆಗೆ ಬಂದಿದ್ದ ವಕೀಲರು ದಲಿತ ಕುಟುಂಬವನ್ನು ಸದ್ರಿ ಜಾಗದಿಂದ ತೆರವು ಮಾಡಲು ಮುಂದಾಗಿದ್ದರು. ಡಿ.22ರಂದು ಮನೆಗೆ ಆಗಮಿಸಿದ್ದ ಪೊಲೀಸರು, ವಕೀಲರು ಮತ್ತು ದಲಿತ ಕುಟುಂಬದ ಮಧ್ಯೆ ವಾಗ್ವಾದ ನಡೆದಿದೆ. ಜಟಾಪಟಿಯಿಂದ ನೊಂದ ಬಡಪಾಯಿ ಕುಟುಂಬದ ಯಜಮಾನ ರಾಜನ್ ಹೊರಗೆ ಬಂದು ಪೊಲೀಸರನ್ನು ಉದ್ದೇಶಿಸಿ, ನಾನು ಸತ್ತರೆ ಇಲ್ಲೇ ಸಾಯುವುದು. ನೀವು ನಮ್ಮನ್ನು ಎಬ್ಬಿಸುವುದಾದರೆ ಸಮಾಧಿಯ ಜೊತೆಗೆ ಎಬ್ಬಿಸಿ ಎನ್ನುತ್ತಾ ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಪತ್ನಿಯ ಮೈಗೂ ಪೆಟ್ರೋಲ್ ಸುರಿದಿದ್ದಾನೆ.
ಪತಿ ಮತ್ತು ಪತ್ನಿ ಆವೇಶದಿಂದ ಮನೆಯಿಂದ ಹೊರಗೆ ಬಂದಿದ್ದು ರಾಜನ್ ತನ್ನ ಜೇಬಿನಲ್ಲಿದ್ದ ಲೈಟರ್ ತೆಗೆದು ಉರಿಸಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬಂದಿಯೊಬ್ಬರು ಗ್ಯಾಸ್ ಲೈಟರನ್ನು ತಪ್ಪಿಸಲು ಪ್ರಯತ್ನ ಪಡುತ್ತಾರೆ. ಅಷ್ಟರಲ್ಲೇ ಬೆಂಕಿ ಧಗ್ಗನೆ ಹತ್ತಿಕೊಂಡಿದ್ದು ದಂಪತಿ ಇಬ್ಬರೂ ಬೆಂಕಿಯ ಕೆನ್ನಾಲಿಗೆಯಲ್ಲಿ ನರಳಾಡಿದ್ದಾರೆ. ಇದನ್ನು ಅಲ್ಲಿನ ಸ್ಥಳೀಯರು ಮೊಬೈಲಿನಲ್ಲಿ ಚಿತ್ರೀಕರಿಸಿದ್ದು, ಪೊಲೀಸರ ಎದುರಲ್ಲೇ ಘಟನೆ ನಡೆದಿರುವುದಕ್ಕೆ ಸಾಕ್ಷ್ಯವಾಗಿದ್ದು ಈ ವಿಡಿಯೋ ಕೇರಳದಲ್ಲಿ ಭಾರೀ ವೈರಲ್ ಆಗಿದ್ದಲ್ಲದೆ ಆಡಳಿತಾರೂಢ ಎಡಪಕ್ಷದ ಸರಕಾರದ ವಿರುದ್ಧ ಆಕ್ರೋಶ ತಿರುಗಿದೆ.
ದಲಿತರು, ಬಡವರ ಪರ ಎಂದು ಹೇಳಿಕೊಳ್ಳುವ ಎಡಪಕ್ಷದ ಸರಕಾರ, ಬಡಪಾಯಿ ಕುಟುಂಬವನ್ನು ಸರಕಾರಿ ಜಾಗದಿಂದ ತೆರವುಗೊಳಿಸಲು ಪೊಲೀಸರ ಮೂಲಕ ಬಲಪ್ರಯೋಗ ಮಾಡಬೇಕಿತ್ತೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲಿನ ಪ್ರತಿಪಕ್ಷಗಳು ಕೂಡ ಇಂಥದ್ದೇ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ದಂಪತಿಗೆ ರಾಹುಲ್ ಮತ್ತು ರೆಂಜಿತ್ ಎನ್ನುವ ಇಬ್ಬರು ತರುಣ ಮಕ್ಕಳಿದ್ದು ತಂದೆ, ತಾಯಿ ಸಾವನ್ನಪ್ಪಿದ ಬಳಿಕ ಆಸ್ಪತ್ರೆಯಿಂದ ಹೊರಗಡೆ ಬಂದು ರೋದಿಸಿದ್ದಾರೆ. ಈ ಕೃತ್ಯವನ್ನು ಸರಕಾರವೇ ಮಾಡಿದ್ದು, ಪೊಲೀಸರೇ ಮಾಡಿದ್ದು, ನೈಯಾಟಿಂಕರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಈ ಘಟನೆಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದು ಮಾಧ್ಯಮದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕುಟುಂಬಕ್ಕೆ ಎಲ್ಲ ರೀತೀಯ ನೆರವು ನೀಡುವುದಾಗಿ ಹೇಳಿದ್ದಾರೆ. ಇದೇ ವೇಳೆ, ಸಿಪಿಎಂ ಯುವ ಘಟಕ ಡಿವೈಎಫ್ಐ ತಾವು ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಹೇಳಿದರೆ, ಯೂತ್ ಕಾಂಗ್ರೆಸ್ ನವರು ಕುಟುಂಬಕ್ಕೆ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದೆ. ಇಬ್ಬರ ಜಗಳದಲ್ಲಿ ಪೊಲೀಸರು ಒಬ್ಬರ ಪರವಾಗಿ ನಿಂತು ಬಡಪಾಯಿ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಡಿಜಿಪಿ ಆದೇಶ ಮಾಡಿದ್ದಾರೆ. ಮಾನವ ಹಕ್ಕು ಆಯೋಗವೂ ತನಿಖೆ ಮಾಡಿ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದೆ. '
Video:
Kerala couple set themselves using petrol in an attempt to thwart an eviction attempt by authorities on December 22. The couple belonging to Neyyattinkara in Thiruvananthapuram sustained burn injuries after 47-year-old Rajan was accidently set ablaze on December 22. Rajan died on Sunday night while 40-year-old Ambili died on Monday evening.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm