ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ್ಸ್ ಆರಂಭ ; ಪಂಜಾಬ್ ವಿವಿಯಲ್ಲಿ ಅಪಾರ ಸಂಸ್ಕೃತ ಸಾಹಿತ್ಯ ಭಂಡಾರ, ಭಗವದ್ಗೀತೆ- ಮಹಾಭಾರತ ಕಲಿಕೆಗೆ ಯೋಜನೆ 

15-12-25 08:12 pm       HK News Desk   ದೇಶ - ವಿದೇಶ

ವಿಭಜನೆಯ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಎರಡು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಕೆಯ ಕೋರ್ಸ್ ಆರಂಭಿಸಲಾಗಿದೆ. ಪಂಜಾಬ್‌ ಪ್ರಾಂತ್ಯದ ಎರಡು ವಿಶ್ವವಿದ್ಯಾನಿಲಯಗಳು ಸಂಸ್ಕೃತದಲ್ಲಿ ಕಿರು ಕೋರ್ಸ್‌ಗಳನ್ನು ಪ್ರಾರಂಭಿಸಿದ್ದು, ಭವಿಷ್ಯದಲ್ಲಿ ಭಗವದ್ಗೀತೆ ಮತ್ತು ಮಹಾಭಾರತವನ್ನು ಕಲಿಸಲು ಯೋಜಿಸಿವೆ. 

ಲಾಹೋರ್, ಡಿ.15 : ವಿಭಜನೆಯ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಎರಡು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಕೆಯ ಕೋರ್ಸ್ ಆರಂಭಿಸಲಾಗಿದೆ. ಪಂಜಾಬ್‌ ಪ್ರಾಂತ್ಯದ ಎರಡು ವಿಶ್ವವಿದ್ಯಾನಿಲಯಗಳು ಸಂಸ್ಕೃತದಲ್ಲಿ ಕಿರು ಕೋರ್ಸ್‌ಗಳನ್ನು ಪ್ರಾರಂಭಿಸಿದ್ದು, ಭವಿಷ್ಯದಲ್ಲಿ ಭಗವದ್ಗೀತೆ ಮತ್ತು ಮಹಾಭಾರತವನ್ನು ಕಲಿಸಲು ಯೋಜಿಸಿವೆ. 

ಪಂಜಾಬ್ ಪ್ರಾಂತ್ಯದ ಲಾಹೋರ್ ವಿಶ್ವವಿದ್ಯಾಲಯ (ಸಾರ್ವಜನಿಕ) ಮತ್ತು ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (ಖಾಸಗಿ) ಈ ಶಾಸ್ತ್ರೀಯ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಮೂರು ತಿಂಗಳ ಕೋರ್ಸ್ ಪ್ರಾರಂಭಿಸಿವೆ. ಸಂಶೋಧನೆಗಾಗಿ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತದ ಹಸ್ತಪ್ರತಿಗಳ ಸಂಗ್ರಹ ಕಾರ್ಯವನ್ನು ಬೋಧಕರು ಮಾಡುತ್ತಿದ್ದಾರೆ. ಕಳೆದ ವರ್ಷ ಅಲ್ಪಾವಧಿಯ ಕೋರ್ಸ್‌ಗಳಿಗೆ ಸಿದ್ಧತೆ ಪ್ರಾರಂಭವಾಗಿತ್ತು. 2025 ರಲ್ಲಿ ಮೊದಲ ಕೋರ್ಸ್‌ಗೆ ಪ್ರವೇಶ ಮಾಡಿಕೊಳ್ಳಲಾಗಿದೆ.

ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (LUMS) ಮೊದಲ ಹಂತಗಳಲ್ಲಿ ಕೋರ್ಸ್ ಆರಂಭಿಸಿದ್ದು ನಂತರ ಪಂಜಾಬ್ ವಿಶ್ವವಿದ್ಯಾಲಯ ಲಾಹೋರ್ ಸಂಸ್ಕೃತ ಕೋರ್ಸ್ ಆರಂಭಿಸಿತು ಎಂದು ಪಂಜಾಬ್ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರೊ. ಡಾ ಅಶೋಕ್ ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 

ಕೋರ್ಸ್ ಆರಂಭದಲ್ಲಿ ಸಂಸ್ಕೃತ ಕುರಿತು ಬೇಸಿಕ್ ಶಿಕ್ಷಣ ನೀಡಲಾಗುವುದು, ಭಾಷೆ ಮೇಲೆ ಹಿಡಿತ ಹೊಂದಲು ವಿದ್ಯಾರ್ಥಿ ಏಳು ಹಂತಗಳನ್ನು ಪೂರ್ಣಗೊಳಿಸಬೇಕು. ಅದಕ್ಕೆ ಕನಿಷ್ಠ ಮೂರು ವರ್ಷಗಳ ಅಗತ್ಯವಿದೆ ಎಂದು ಕುಮಾರ್ ಹೇಳಿದರು. ಸಂಸ್ಕೃತ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮೂರು ವರ್ಷಗಳ ಪೂರ್ಣ ಪ್ರಮಾಣದ ಕೋರ್ಸ್ ಬೇಕಾಗಬಹುದು. ಮೂರು ವರ್ಷಗಳ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಭಗವದ್ಗೀತೆ ಮತ್ತು ಮಹಾಭಾರತವನ್ನು ಕಲಿಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. 

ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಕೋರ್ಸ್ ಪ್ರಾರಂಭಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರ್, 1947 ರಲ್ಲಿ ವಿಭಜನೆಯ ನಂತರ, ಈ ಶಾಸ್ತ್ರೀಯ ಭಾಷೆಯನ್ನು ಬಲ್ಲವರೆಲ್ಲರೂ ಭಾರತಕ್ಕೆ ಹೋಗಿದ್ದರಿಂದ ಇಲ್ಲಿ ಯಾರೂ ಉಳಿದಿರಲಿಲ್ಲ. ಪಂಜಾಬ್ ವಿಶ್ವವಿದ್ಯಾಲಯವು ಸಂಸ್ಕೃತದ ಅಪಾರ ಸಾಹಿತ್ಯವನ್ನು ಹೊಂದಿರುವುದರಿಂದ, ನಮ್ಮ ಹೊಸ ಡೀನ್ ಸಂಸ್ಕೃತ ಕಲಿಕೆಗೆ ಅವಕಾಶ ನೀಡಲು ನಿರ್ಧರಿಸಿದರು ಎಂದು ಅವರು ತಿಳಿಸಿದರು.

In a significant academic and cultural development, two universities in Pakistan have introduced courses in Sanskrit for the first time since the Partition of 1947. Institutions in Punjab province have launched short-term Sanskrit programmes, with plans to eventually teach classical texts such as the Bhagavad Gita and the Mahabharata.