ಬ್ರೇಕಿಂಗ್ ನ್ಯೂಸ್
12-12-25 11:00 pm HK News Desk ದೇಶ - ವಿದೇಶ
ಚೆನ್ನೈ, ಡಿ.12 : ತಮಿಳುನಾಡಿನಲ್ಲಿ ಕಾರ್ತಿಕ ದೀಪೋತ್ಸವ ವಿವಾದ ರಾಜಕೀಯ ತಿರುವು ಪಡೆದಿದೆ. ಮಸೀದಿ ಹತ್ತಿರ ಇದೆಯೆಂದು ದೀಪೋತ್ಸವಕ್ಕೆ ಅವಕಾಶ ನಿರಾಕರಿಸಿದ್ದ ಸ್ಟಾಲಿನ್ ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿದ್ದು, ದೀಪ ಉರಿಸುವುದರಿಂದ ಅಲ್ಲಿನ ಜನರಿಗೇನು ತೊಂದರೆ ಆಗಿಲ್ಲ, ಮಸೀದಿಯವರು ತೊಂದರೆಯಾಗಿದೆ ಎಂದು ಆಕ್ಷೇಪಿಸಿಲ್ಲ. ನೀವು ಯಾಕೆ ತೊಂದರೆ ಮಾಡುತ್ತಿದ್ದೀರಿ. ನಿಮಗೇನು ಸಮಸ್ಯೆ ಎಂದು ತರಾಟೆಗೆತ್ತಿಕೊಂಡಿದೆ.
ಶುಕ್ರವಾರ ಮದ್ರಾಸ್ ಹೈಕೋರ್ಟಿನ ದ್ವಿಸದಸ್ಯ ಪೀಠದಲ್ಲಿ ಕಾರ್ತಿಗೈ ದೀಪ ವಿಚಾರ ವಿಚಾರಣೆಗೆ ಬಂದಿದ್ದು, ಸ್ಟಾಲಿನ್ ಸರಕಾರಕ್ಕೆ ನ್ಯಾಯಾಧೀಶರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಮಧುರೈ ಮೀನಾಕ್ಷಿ ದೇಗುಲದಿಂದ ಕೆಲವೇ ಕಿಮೀ ದೂರದಲ್ಲಿರುವ ತಿರುಪ್ಪಾರಕುಂದ್ರಂ ಎನ್ನುವ ಬೆಟ್ಟದಲ್ಲಿ ನೂರಾರು ವರ್ಷಗಳಿಂದಲೂ ಕಾರ್ತಿಕ ದೀಪೋತ್ಸವ ಮಾಡುತ್ತ ಬಂದಿದ್ದರು. ಬೆಟ್ಟದ ಮೇಲೆ ಉಚ್ಚಿ ಪಿಳ್ಳೈಯ್ಯಾರ್ ದೇವಸ್ಥಾನವೂ ಇದ್ದು, ಜನರು ತಮ್ಮಷ್ಟಕ್ಕೆ ಆಚರಣೆ ಮಾಡಿಕೊಂಡು ಬಂದಿದ್ದರು. ಆದರೆ ಈ ಬಾರಿ ಅಲ್ಲಿಯೇ ಹತ್ತಿರ ದರ್ಗಾ ಇದೆಯೆಂದು ಸ್ಟಾಲಿನ್ ಸರಕಾರ ದೀಪೋತ್ಸವಕ್ಕೆ ಅಡ್ಡಿ ಪಡಿಸಿದೆ ಎಂಬ ಆರೋಪ ಕೇಳಿಬಂದಿದೆ.

ವಾರದ ಹಿಂದೆ ಮದ್ರಾಸ್ ಹೈಕೋರ್ಟಿನ ಜಿ.ಆರ್. ಸ್ವಾಮಿನಾಥನ್ ಇದ್ದ ಏಕ ಸದಸ್ಯ ಪೀಠವು ದೀಪೋತ್ಸವಕ್ಕೆ ಅವಕಾಶ ನೀಡಿರುವುದನ್ನು ಖಂಡಿಸಿ ಡಿಎಂಕೆ ನಾಯಕರು, ನ್ಯಾಯಾಧೀಶರನ್ನು ಪದಚ್ಯುತಿಗೊಳಿಸಬೇಕೆಂದು ಹೇಳಿ 120 ಸಂಸದರ ಸಹಿಯೊಂದಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ದೂರು ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಬಿಜೆಪಿ ನಾಯಕರು ಸ್ಟಾಲಿನ್ ಸರಕಾರ ಸನಾತನ ಧರ್ಮ ವಿರೋಧಿ ಎಂದು ಜರೆದಿದ್ದಾರೆ. ಅಲ್ಲದೆ, ಮುಸ್ಲಿಮರ ತುಷ್ಟೀಕರಣಕ್ಕಾಗಿ ಹಿಂದುಗಳು ನೂರಾರು ವರ್ಷಗಳಿಂದ ನಡೆಸಿಬರುತ್ತಿದ್ದ ದೀಪೋತ್ಸವಕ್ಕೆ ಅಡ್ಡಿಪಡಿಸಿದ್ದಾಗಿ ಆರೋಪಿಸಿದೆ.
ಶುಕ್ರವಾರ ಹೈಕೋರ್ಟಿಗೆ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಪಿ.ಎಸ್.ರಮಣ್, ಉಚ್ಚಿ ಪಿಳ್ಳೈಯ್ಯಾರ್ ದೇವಸ್ಥಾನದಲ್ಲಿ ನೂರು ವರ್ಷಗಳಿಂದಲೂ ದೀಪೋತ್ಸವ ನಡೆಯುತ್ತಿದ್ದು ಈ ವರ್ಷವೂ ಎಂದಿನಂತೆ ನಡೆಯುತ್ತಿತ್ತು. ಆದರೆ ಯಾವತ್ತೂ ದೀಪ ಉರಿಸುತ್ತಿದ್ದ ಜಾಗವನ್ನು ಬದಲಿಸಿ ವ್ಯಕ್ತಿಯೊಬ್ಬರು ದರ್ಗಾ ಬಳಿಯ ದೀಪಾತೂನ್ ಎಂಬ ಸ್ತಂಭದಲ್ಲಿ ಉರಿಸಲು ಅವಕಾಶ ನೀಡಬೇಕೆಂದು ಕೋರ್ಟಿಗೆ ಅಪೀಲು ಮಾಡಿದ್ದರು. ಇದರ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಬದಲಿಗೆ, ಖಾಸಗಿ ಹಿತಾಸಕ್ತಿಯಷ್ಟೇ ಅಡಗಿದೆ. ಹಿಂದಿನಿಂದ ಬಂದ ಸಂಪ್ರದಾಯ ಉಲ್ಲಂಘಿಸಿ ಪ್ರತ್ಯೇಕ ಸ್ಥಳದಲ್ಲಿ ದೀಪೋತ್ಸವ ನಡೆಸುವುದಕ್ಕೆ, ಅದಕ್ಕೆ ಪರ್ಮಿಶನ್ ನೀಡುವುದಕ್ಕೆ ಆರ್ಟಿಕಲ್ 226 ಪ್ರಕಾರ ಕೋರ್ಟಿಗೂ ಅಧಿಕಾರ ಇಲ್ಲ ಎಂದು ವಾದಿಸಿದರು.
ಸಂಪ್ರದಾಯ ಪ್ರಕಾರ ದೀಪೋತ್ಸವ ನಡೆಸುವುದಕ್ಕೆ ನಮ್ಮ ಅಡ್ಡಿ ಇಲ್ಲ. ಆದರೆ ಹಿಂದೆಯೂ ಅಲ್ಲಿ ದೀಪಾತೂನ್ ಸ್ತಂಭ ಇತ್ತೇ ಎನ್ನುವುದು ಪ್ರಶ್ನೆ. ಹಿಂದಿನಿಂದಲೂ ಇತ್ತು ಎಂದರೆ ದೀಪ ಉರಿಸುವುದಕ್ಕೆ ತೊಂದರೆ ಇಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಅಲ್ಲಿ ದೇವಸ್ಥಾನ ಮತ್ತು ದರ್ಗಾ ಕಮಿಟಿಯವರು ಸೌಹಾರ್ದವಾಗಿದ್ದಾರೆ. ಅಲ್ಲಿ ಶಾಂತಿ ಕದಡುವುದಕ್ಕೆ ಅವರೇನೂ ಹೋಗಿಲ್ಲ. ಅರ್ಜಿದಾರರು ಕೂಡ ಅಲ್ಲಿ ದರ್ಗಾದವರನ್ನು ಪ್ರತಿವಾದಿ ಮಾಡಿಲ್ಲ. ಹಾಗಿರುವಾಗ ನಿಮಗೆ ಯಾಕೆ ತೊಂದರೆ ಎಂದು ಪ್ರಶ್ನಿಸಿದರು.
ಜಿ.ಆರ್ ಸ್ವಾಮಿನಾಥನ್ ಕೂಡ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೇಳಿದ್ದರು. ಎಂದಿನಂತೆ ಹೇಗೆ ದೀಪೋತ್ಸವ ನಡೆಯುತ್ತಿತ್ತೋ ಅದನ್ನೇ ಮುಂದುವರಿಸಿ ಎಂದಿದ್ದರು. ಆದರೆ ನೀವು ಡಿ.4ರಂದು ದೀಪೋತ್ಸವ ನಡೆಸುವುದಕ್ಕೆ ಕಾನೂನು ಸಮಸ್ಯೆ ನೆಪದಲ್ಲಿ ಅವಕಾಶ ನೀಡಿಲ್ಲ ಎಂದು ಆಕ್ಷೇಪಿಸಿದರು. ಸಂಪ್ರದಾಯ ಮುರಿಯಿರಿ ಎಂದು ಸ್ವಾಮಿನಾಥನ್ ಹೇಳಿಲ್ಲ. ನೀವು ಯಾಕೆ ಸಮಸ್ಯೆ ತಂದುಕೊಂಡಿದ್ದೀರಿ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಸರಕಾರ, ದೀಪೋತ್ಸವ ವಿವಾದವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದು ತುರ್ತಾಗಿ ಅರ್ಜಿ ಇತ್ಯರ್ಥ ಪಡಿಸಬೇಕೆಂದು ಮುಖ್ಯ ನ್ಯಾಯಮೂರ್ತಿಗೆ ಕೇಳಿಕೊಂಡಿದೆ.
ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ಇರುವುದರಿಂದ ದೀಪೋತ್ಸವ ವಿವಾದ ಹಿಂದು- ಮುಸ್ಲಿಂ ಮಧ್ಯೆ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಸ್ಟಾಲಿನ್ ಸರಕಾರಕ್ಕೂ ಅತ್ತ ದರಿ ಇತ್ತ ಪುಲಿ ಎನ್ನುವ ಸ್ಥಿತಿಯಾಗಿದೆ. ದರ್ಗಾ ಪರ ನಿಲ್ಲಲು ಹೋಗಿ ತೀವ್ರ ವಿವಾದಕ್ಕೆ ತಿರುಗಿದ್ದು ಸ್ಥಳದಲ್ಲಿ ಹಿಂದು ಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.
The Karthigai Deepam festival controversy in Tamil Nadu has taken a political turn, with the Madras High Court openly criticising the DMK government for blocking the traditional ritual. During Friday’s hearing, the High Court questioned the state government, asking why it had stopped devotees from lighting the customary lamp near a hilltop temple, despite the nearby mosque raising no objections.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm