ಬ್ರೇಕಿಂಗ್ ನ್ಯೂಸ್
11-12-25 04:24 pm HK News Desk ದೇಶ - ವಿದೇಶ
ನವದೆಹಲಿ, ಡಿ.11 : ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಇದೇ 2025 ಸೆಪ್ಟಂಬರ್ 17ಕ್ಕೆ ಮೋದಿಯವರಿಗೆ 75 ವರ್ಷ ತುಂಬಿತ್ತು. ಈ ಬಗ್ಗೆ ಆರೆಸ್ಸೆಸ್ ನಿರ್ಧರಿಸುತ್ತದೆ ಎನ್ನುವ ಊಹಾಪೋಹಗಳ ನಡುವೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಆ ವಿಚಾರದಲ್ಲಿ ಆರೆಸ್ಸೆಸ್ ಪಾತ್ರವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಆರೆಸ್ಸೆಸ್ ದೃಷ್ಟಿಕೋನ ಮತ್ತು ಮುಂದಿನ ದಾರಿ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋಹನ್ ಭಾಗವತ್, ನರೇಂದ್ರ ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವುದನ್ನು ಖುದ್ದು ಮೋದಿಯವರು ಮತ್ತು ಬಿಜೆಪಿ ನಿರ್ಧರಿಸಬೇಕೇ ವಿನಾ ಇದರಲ್ಲಿ ಸಂಘದ ಪಾತ್ರವೇನೂ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ಮಾತೃ ಸಂಘಟನೆ ಎಂದೇ ಗುರುತಿಸಲ್ಪಡುವ ಆರ್ಎಸ್ಎಸ್, ಬಿಜೆಪಿಯ ಎಲ್ಲಾ ಪ್ರಮುಖ ನಿರ್ಣಯಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನರೇಂದ್ರ ಮೋದಿಗೆ ಉತ್ತರಾಧಿಕಾರಿ ವಿಚಾರ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರ, ಸಂಘದಲ್ಲಿ ಚರ್ಚೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು.
ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ, ಆರ್ಎಸ್ಎಸ್ ಮುಖ್ಯಸ್ಥರಿಗೆ ವಾರದಲ್ಲಿ ಇದು ಎರಡನೇ ಬಾರಿ ಎದುರಾಗಿತ್ತು. ಇದಕ್ಕೆ, ಬಹಿರಂಗವಾಗಿ ಮೋಹನ್ ಭಾಗವತ್ ಉತ್ತರ ನೀಡಲು ಹೋಗಿರಲಿಲ್ಲ. 75 ವರ್ಷ ತುಂಬಿದವರು, ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯಬೇಕು ಎನ್ನುವ ಆಂತರಿಕ ನಿಯಮ ಬಿಜೆಪಿಯಲ್ಲಿತ್ತು.
ನರೇಂದ್ರ ಮೋದಿಯವರ ನಂತರ ಯಾರು ಎನ್ನುವ ಪ್ರಶ್ನೆಗೆ, ನಾನು ಅಥವಾ ರಾಷ್ಟ್ರೀಯ ಸ್ವಯಂಸೇವಕ ಸಂಘ ಉತ್ತರಿಸಲು ಸಾಧ್ಯವಿಲ್ಲ. ಅದನ್ನು, ಖುದ್ದು ಮೋದಿ ಮತ್ತು ಬಿಜೆಪಿಯವರೇ ನಿರ್ಧರಿಸಬೇಕು. ನೂತನವಾಗಿ ಆಯ್ಕೆಯಾಗುವವರಿಗೆ ನಾನು ಕೇವಲ ಶುಭ ಹಾರೈಸಬಲ್ಲೆ ಎಂದು ಮೋಹನ್ ಭಾಗವತ್ ಉತ್ತರವನ್ನು ಕೊಟ್ಟಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ, 75 ವರ್ಷ ತುಂಬಿದವರು, ಇತರರಿಗೆ ಅವಕಾಶವನ್ನು ಮಾಡಿಕೊಡಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 75 ವರ್ಷ ತುಂಬಿದವರು ನಿವೃತ್ತಿ ಆಗಬೇಕೆಂದು ನಾನು ಎಂದೂ ಹೇಳಿರಲಿಲ್ಲ ಎಂದು ಮೋಹನ್ ಭಾಗವತ್ ಆಬಳಿಕ ಸ್ಪಷ್ಟ ಪಡಿಸಿದ್ದರು. ಭಾಗವತ್ ಮತ್ತು ಮೋದಿ ಇಬ್ಬರೂ ಒಂದೇ ವಯಸ್ಸಿನವರು ಎನ್ನುವುದು ವಿಶೇಷ.
Debate has resurfaced over who will succeed Prime Minister Narendra Modi, especially as he will turn 75 on September 17, 2025. Amid speculation that the Rashtriya Swayamsevak Sangh (RSS) would decide his successor, RSS chief Dr. Mohan Bhagwat has issued a clear clarification stating that the Sangh has no role in this matter.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm