Jawaharlal Nehru, Babri Masjid, Sardar Patel, Rajnath Singh: ನೆಹರೂ ಬಾಬರಿ ಮಸೀದಿ ನಿರ್ಮಾಣಕ್ಕೆ ಸಾರ್ವಜನಿಕ ನಿಧಿ ಬಳಸಲು ಮುಂದಾಗಿದ್ದರು, ಸರ್ದಾರ್ ಪಟೇಲ್ ತಡೆದಿದ್ದರು! 

03-12-25 07:14 pm       HK News Desk   ದೇಶ - ವಿದೇಶ

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಸಾರ್ವಜನಿಕ ನಿಧಿ ಬಳಸಲು ಬಯಸಿದ್ದರು.

ನವದೆಹಲಿ, ಡಿ.3: ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಸಾರ್ವಜನಿಕ ನಿಧಿ ಬಳಸಲು ಬಯಸಿದ್ದರು. ಆದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ತೀವ್ರವಾಗಿ ವಿರೋಧಿಸಿ ನೆಹರು ಪ್ರಯತ್ನಕ್ಕೆ ತಡೆಯೊಡ್ಡಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಗುಜರಾತಿನ ವಡೋದರ ಹತ್ತಿರದ ಸಾಧ್ಲಿ ಗ್ರಾಮದಲ್ಲಿ ಸರ್ದಾರ್ ಪಟೇಲ್ 150ನೇ ಜಯಂತ್ಯುತ್ಸವದ ‘ಯುನಿಟಿ ಮಾರ್ಚ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟೇಲ್ ನಿಜವಾದ ಸೆಕ್ಯುಲರ್ ನಾಯಕರಾಗಿದ್ದರು, ಯಾರನ್ನೂ ತೃಪ್ತಿಪಡಿಸುವ ರಾಜಕೀಯ ಮಾಡದೆ ಸಮಾನತೆಯ ಮೌಲ್ಯಗಳನ್ನು ಕಾಯ್ದುಕೊಂಡಿದ್ದರು ಎಂದು ಹೇಳಿದರು.

ನೆಹರೂ ಸಾರ್ವಜನಿಕ ಹಣದಿಂದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದರು. ಆದರೆ ಇದಕ್ಕೆ ಮೊದಲಿಗರಾಗಿ ಪಟೇಲ್ ವಿರೋಧ ವ್ಯಕ್ತಪಡಿಸಿದರು. ಅವರು ನೆಹರು ಯೋಜನೆ ಜಾರಿ ಆಗದಂತೆ ತಡೆದಿದ್ದರು ಎಂದು ಸಿಂಗ್ ಹೇಳಿದ್ದಾರೆ.

ಗುಜರಾತ್‌ನ ಸೋಮನಾಥ ದೇವಾಲಯದ ಪುನಃಸ್ಥಾಪನೆಯ ವಿಷಯವನ್ನು ನೆಹರು ಎತ್ತಿದಾಗ, ಜನಸಾಮಾನ್ಯರು ದಾನ ಮಾಡಿದ 30 ಲಕ್ಷ ರೂ.ಗಳನ್ನು ಬಳಸಿ ದೇಗುಲ ಪುನರ್ ಸ್ಥಾಪಿಸಲಾಯಿತು. ದೇಗುಲ ನಿರ್ಮಾಣಕ್ಕೆ ಸರ್ಕಾರದ ಹಣ ಬಳಸಿಲ್ಲ, ಸಾರ್ವಜನಿಕ ದೇಣಿಗೆಗಳನ್ನು ಮಾತ್ರ ಬಳಸಲಾಗಿತ್ತು, ಇದೇ ರೀತಿಯಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೂ ಯಾವುದೇ ಸರ್ಕಾರಿ ಹಣ ಕೊಡಲಾಗಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟ ಪಡಿಸಿದರು. ಇದು ನಿಜವಾದ ಸೆಕ್ಯುಲರಿಸಂ ಎಂದು ಅವರು ಅಭಿಪ್ರಾಯಪಟ್ಟರು.

India’s Defence Minister Rajnath Singh has claimed that former Prime Minister Jawaharlal Nehru once proposed using public funds for the construction of the Babri Masjid in Ayodhya, but Sardar Vallabhbhai Patel strongly opposed the idea and prevented it from happening.