ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ ! ಷೇರು ಮಾರುಕಟ್ಟೆ- ವಿದೇಶಿ ಹೂಡಿಕೆ ಕುಸಿತಕ್ಕೆ ದರ ಇಳಿಕೆ 

03-12-25 05:32 pm       HK News Desk   ದೇಶ - ವಿದೇಶ

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ಬುಧವಾರ 25 ಪೈಸೆಯ ಕುಸಿತದೊಂದಿಗೆ ಭಾರತದ ಕರೆನ್ಸಿ ಮೊದಲ ಬಾರಿಗೆ ನೈಂಟಿ ಕ್ರಾಸ್ ಮಾಡಿದೆ.

ನವದೆಹಲಿ, ಡಿ.3  : ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ಬುಧವಾರ 25 ಪೈಸೆಯ ಕುಸಿತದೊಂದಿಗೆ ಭಾರತದ ಕರೆನ್ಸಿ ಮೊದಲ ಬಾರಿಗೆ ನೈಂಟಿ ಕ್ರಾಸ್ ಮಾಡಿದೆ.

ಅಮೆರಿಕದ ಡಾಲರ್ ಎದುರು ರೂಪಾಯಿ ಅಪಮೌಲ್ಯ ಮುಂದುವರೆದಿದ್ದು, ಪ್ರತಿ ಡಾಲರ್ ಗೆ ಮೌಲ್ಯ 90.25 ರೂಪಾಯಿಗೆ ತಲುಪಿದೆ. ಇದು ಈವರೆಗಿನ ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ. ನಿನ್ನೆ ಡಾಲರ್ ಎದುರು ರೂಪಾಯಿ ಮೌಲ್ಯ 89.94 ರೂಪಾಯಿ ಆಗಿತ್ತು.

ವಿದೇಶಗಳಿಗೆ ಹೊರ ಹರಿವು ಮತ್ತು ಬ್ಯಾಂಕುಗಳು ನಿರಂತರವಾಗಿ ಡಾಲರ್‌ಗಳನ್ನು ಖರೀದಿಸುತ್ತಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ದೇಶೀಯ ಷೇರು ಮಾರುಕಟ್ಟೆಗಳ ಕುಸಿತ ಮತ್ತು ಭಾರತ-ಅಮೆರಿಕ ವ್ಯಾಪಾರ ವಿಳಂಬ, ವಿದೇಶಿ ಹೂಡಿಕೆದಾರರು ಹಣ ಹಿಂಪಡೆಯುವುದು ರೂಪಾಯಿ ದುರ್ಬಲಗೊಳ್ಳಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. 

ಇದೇ ವೇಳೆ, ಚಿನ್ನ, ಬೆಳ್ಳಿ ಆಮದು ಹೆಚ್ಚಳದಿಂದ ಡಾಲರ್‌ಗಳ ಬೇಡಿಕೆ ಏರಿದೆ ಎಂದೂ ಹೇಳಲಾಗುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿಸಿದೆ.

The Indian rupee hit a historic low on Wednesday, falling below the 90-mark for the first time, and touching ₹90.25 per US dollar. This marks the weakest level ever recorded for the Indian currency.