ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ, ಕಾಂಗ್ರೆಸ್- ಆರ್ ಜೆಡಿ ಧೂಳೀಪಟ, ರಾಹುಲ್ –ಪ್ರಿಯಾಂಕಾ ಜೋಡಿಗೆ ಮುಖಭಂಗ !

14-11-25 11:50 am       HK News Desk   ದೇಶ - ವಿದೇಶ

ಬಿಹಾರ ಅಸೆಂಬ್ಲಿ ಚುನಾವಣೆಯ ಮತ ಎಣಿಕೆ ನಡೆದಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕ್ಲೀನ್ ಸ್ವೀಪ್ ಸಾಧನೆಯೊಂದಿಗೆ ಭರ್ಜರಿ ಜಯಭೇರಿ ಬಾರಿಸುವತ್ತ ಮುನ್ನುಗ್ಗಿದೆ. ಬೆಳಗ್ಗೆ 11 ಗಂಟೆ ವರೆಗಿನ ಮಾಹಿತಿಯಂತೆ, ಎನ್ ಡಿಎ ಕೂಟ 190 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಆರ್ ಜೆಡಿ- ಕಾಂಗ್ರೆಸ್ ನೇತೃತ್ವದ 50 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ.

ಪಾಟ್ನಾ, ನ.14 : ಬಿಹಾರ ಅಸೆಂಬ್ಲಿ ಚುನಾವಣೆಯ ಮತ ಎಣಿಕೆ ನಡೆದಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕ್ಲೀನ್ ಸ್ವೀಪ್ ಸಾಧನೆಯೊಂದಿಗೆ ಭರ್ಜರಿ ಜಯಭೇರಿ ಬಾರಿಸುವತ್ತ ಮುನ್ನುಗ್ಗಿದೆ. ಬೆಳಗ್ಗೆ 11 ಗಂಟೆ ವರೆಗಿನ ಮಾಹಿತಿಯಂತೆ, ಎನ್ ಡಿಎ ಕೂಟ 190 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಆರ್ ಜೆಡಿ- ಕಾಂಗ್ರೆಸ್ ನೇತೃತ್ವದ 50 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ.

ಎನ್ ಡಿಎ ಕೂಟದಲ್ಲಿ ಬಿಜೆಪಿ 82, ಜೆಡಿಯು 80, ಎಲ್ ಜೆಪಿ 22, ಎಚ್ ಎಎಂ 4, ಆರ್ ಎಲ್ ಎಂ 2 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್ ಜೆಡಿ 35, ಕಾಂಗ್ರೆಸ್ 6 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಸಾಧಿಸಿದೆ. ಎಡ ಪಕ್ಷಗಳು ಎಂಟು ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.

ಬಿಹಾರದ 243 ಸದಸ್ಯ ಬಲದ ಅಸೆಂಬ್ಲಿಗೆ ನ.6 ಮತ್ತು 11ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಇತಿಹಾಸದಲ್ಲೇ ಮೊದಲು ಎನ್ನುವಂತೆ ಈ ಬಾರಿ ಬಿಹಾರದಲ್ಲಿ 67 ಶೇ. ಮತದಾನ ನಡೆದಿತ್ತು. 2005ರ ಬಳಿಕ ನಿರಂತರ ನಾಲ್ಕು ಬಾರಿ ಸಿಎಂ ಆಗಿರುವ ನಿತೀಶ್ ಕುಮಾರ್ 5ನೇ ಬಾರಿಗೆ ಗದ್ದುಗೆ ಹಿಡಿಯುತ್ತಾರಾ ಅನ್ನುವ ನಿರೀಕ್ಷೆಯಿತ್ತು. ಈ ಬಾರಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದು ಸಿಎಂ ಯಾರಾಗುತ್ತಾರೆ ಎನ್ನುವ ಕುತೂಹಲ ಇದೆ.

243 ಕ್ಷೇತ್ರಗಳ ಪೈಕಿ 190ಕ್ಕೂ ಹೆಚ್ಚು ಸ್ಥಾನಗಳಷ್ಟು ಮುನ್ನಡೆಯೊಂದಿಗೆ ಅತಿ ದೊಡ್ಡ ಕ್ಲೀನ್ ಸ್ವೀಪ್ ಸಾಧನೆಯನ್ನು ಬಿಜೆಪಿ ಮೈತ್ರಿಕೂಟ ಮಾಡುವ ಲಕ್ಷಣ ಕಂಡುಬಂದಿದೆ. ಈ ಫಲಿತಾಂಶ 2020ರಲ್ಲಿ ಬಂದಿದ್ದ ಸಾಧನೆಯನ್ನೂ ಮೀರಿಸಿದ್ದು ಬಿಜೆಪಿ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಕಾಂಗ್ರೆಸ್ ಪಾಲಿಗೆ ಅತಿ ಹೀನಾಯ ಫಲಿತಾಂಶ ಇದಾಗಿದ್ದು ಬಿಹಾರದಲ್ಲಿ ಒಂದಂಕಿಗೆ ಇಳಿದಿರುವುದು ಆ ಪಕ್ಷದ ಅಧೋಗತಿಯನ್ನು ತೋರಿಸಿದೆ. ಈ ಬಾರಿ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ರಶಾಂತ ಕಿಶೋರ್ ಅವರ ಪಕ್ಷವು ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆಯನ್ನು ತೋರಿಸಿದ್ದು, ಮತ ವಿಭಜನೆ ಮಾಡುವುದಕ್ಕೂ ಸಫಲವಾಗಿಲ್ಲ.

The counting of votes for the Bihar Assembly elections is underway, and the NDA alliance led by the BJP is heading for a massive clean sweep, registering an overwhelming lead. As of 11:00 AM, the NDA is leading in 190 constituencies, while the RJD–Congress alliance is ahead in just 50 seats.