ಬ್ರೇಕಿಂಗ್ ನ್ಯೂಸ್
07-11-25 05:21 pm HK News Desk ದೇಶ - ವಿದೇಶ
ತಿರುವನಂತಪುರಂ, ನ.7 : ಎರಡನೇ ಮದುವೆಯನ್ನು ರಿಜಿಸ್ಟರ್ ಮಾಡಲು ನಿರಾಕರಿಸಿದ ಸ್ಥಳೀಯಾಡಳಿತದ ನಿರ್ಧಾರವನ್ನು ಎತ್ತಿಹಿಡಿದಿರುವ ಕೇರಳ ಹೈಕೋರ್ಟ್, ಮುಸ್ಲಿಂ ವ್ಯಕ್ತಿಯೊಬ್ಬರನ್ನು ಉದ್ದೇಶಿಸಿ ಧರ್ಮದ ಪ್ರಾಶಸ್ತ್ಯ ಎರಡನೇಯದ್ದು. ಈ ದೇಶದಲ್ಲಿ ಸಂವಿಧಾನಕ್ಕೇ ಮೊದಲ ಪ್ರಾಶಸ್ತ್ಯ ಎಂದು ಹೇಳಿದೆ.
ಕಣ್ಣೂರಿನ 44 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮೊದಲ ಮದುವೆಯನ್ನು ರಿಜಿಸ್ಟರ್ ಮಾಡಿದ್ದು 2017ರಲ್ಲಿ ಎರಡನೇ ಮದುವೆಯಾಗಿದ್ದ. ಎರಡನೇ ಪತ್ನಿಗೆ ಮತ್ತೆರಡು ಮಕ್ಕಳಾಗಿತ್ತು. ಗಂಡನ ಆಸ್ತಿಯಲ್ಲಿ ಪತ್ನಿ ಮತ್ತು ಮಕ್ಕಳಿಗೆ ಸಮಾನ ಹಕ್ಕು ಪಡೆಯುವುದಕ್ಕಾಗಿ ಕಾನೂನು ಪ್ರಕಾರ, ಮದುವೆ ರಿಜಿಸ್ಟರ್ ಆಗಿರಬೇಕಾಗುತ್ತದೆ. ಇದರಂತೆ, ಸ್ಥಳೀಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡನೇ ಮದುವೆಯನ್ನು ನೋಂದಣಿ ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ ನೋಂದಣಾಧಿಕಾರಿ ಎರಡನೇ ಮದುವೆಯ ನೋಂದಣಿಗೆ ಕಾನೂನು ಪ್ರಕಾರ ನಿರಾಕರಿಸಿದ್ದರು.
ನಿರಾಕರಣೆಯನ್ನು ಪ್ರಶ್ನಿಸಿ ದಂಪತಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಧೀಶ ಪಿ.ವಿ.ಕುಂಞಕೃಷ್ಣನ್ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಎರಡನೇ ಮದುವೆಗೆ ಅವಕಾಶ ಇರಬಹುದು. ಆದರೆ ಎರಡನೇ ಮದುವೆಯನ್ನು ನೋಂದಣಿ ಮಾಡಬೇಕೆಂದಿದ್ದರೆ ಅದಕ್ಕೆ ಈ ನೆಲದ ಕಾನೂನು ಒಪ್ಪಬೇಕು. ಆಗ ಮೊದಲ ಪತ್ನಿಯ ಅವಶ್ಯಕತೆ ಪ್ರಶ್ನೆ ಬರುತ್ತದೆ.
ಇಂತಹ ಸಂದರ್ಭದಲ್ಲಿ ಧರ್ಮದ ಪ್ರಾಶಸ್ತ್ಯ ಸೆಕಂಡರಿಯಾಗುತ್ತದೆ, ಸಂವಿಧಾನ ಕೊಟ್ಟಿರುವ ಕಾನೂನೇ ಧರ್ಮಕ್ಕಿಂತ ಮಿಗಿಲಾಗುತ್ತದೆ. ಇದೊಂದು ರೀತಿಯಲ್ಲಿ ನೈಸರ್ಗಿಕ ನ್ಯಾಯದ ಮೂಲಭೂತ ತತ್ವವಾಗಿರುತ್ತದೆ. ನ್ಯಾಯಾಲಯ ಯಾವುದೇ ವ್ಯಕ್ತಿಯ ಭಾವನೆಯನ್ನು ತಳ್ಳಿಹಾಕಲಾಗದು. ಇಲ್ಲಿ ಎರಡನೇ ಮದುವೆಯನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಮೊದಲ ಪತ್ನಿಯ ಭಾವನೆಯು ಮುಖ್ಯವಾಗುತ್ತದೆ.
ಧರ್ಮ ಗ್ರಂಥ ಕುರಾನ್ ಅಥವಾ ವೈಯಕ್ತಿಕ ಕಾನೂನು ಮಂಡಳಿ ಮೊದಲ ಪತ್ನಿ ಇರುವಾಗ ಇನ್ನೊಬ್ಬಳ ಜೊತೆಗೆ ಸಂಬಂಧ ಹೊಂದುವುದನ್ನು, ಎರಡನೇ ಪತ್ನಿಯನ್ನು ಇರಿಸಿಕೊಳ್ಳುವುದನ್ನು ಒಪ್ಪುತ್ತದೆಯೇ ಎಂದು ನಂಗನಿಸುತ್ತಿಲ್ಲ. ಎಲ್ಲರಿಗೂ ನ್ಯಾಯ ದೊರಕಿಸುವುದು, ವೈವಾಹಿಕ ಸಂಬಂಧಗಳಲ್ಲಿ ಸಮಾನತೆ ಕಾಯ್ದುಕೊಳ್ಳುವುದನ್ನು ಕುರಾನ್ ಹೇಳುತ್ತದೆ ಎನ್ನುವುದು ನನ್ನ ಭಾವನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದಲ್ಲದೆ, ಇಂತಹ ಪ್ರಕರಣಗಳಲ್ಲಿ ಮೊದಲ ಪತ್ನಿ ಕೇವಲ ಮೂಕಪ್ರೇಕ್ಷಕನಾಗಿ ಇರಬೇಕೆಂದು ಹೇಳುವುದಿಲ್ಲ. ಗಂಡ ಎರಡನೇ ಮದುವೆಯನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ಇರುತ್ತದೆ. ನೋಂದಣಿಗೆ ಅರ್ಜಿ ಹಾಕುವಾಗಲೇ ನೋಂದಣಾಧಿಕಾರಿ, ಮೊದಲ ಪತ್ನಿ ಜೀವಂತ ಇದ್ದರೆ ಆಕೆಗೆ ನೋಟೀಸ್ ಮಾಡಿ ಅಹವಾಲು ಕೇಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
The Kerala High Court has upheld a local authority’s decision to refuse registration of a Muslim man’s second marriage, emphasizing that in India, the Constitution holds primacy over religion.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm