ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾರರು, ಡೇಟಾ ಆಪರೇಟರ್ ದೋಷದ ಬಗ್ಗೆ ದೂರು, ತನ್ನ ಚಿತ್ರ ದುರ್ಬಳಕೆ ಆಗಿದೆಯೆಂದ ಬ್ರೆಜಿಲ್ ರೂಪದರ್ಶಿ

07-11-25 11:33 am       HK News Desk   ದೇಶ - ವಿದೇಶ

ಚುನಾವಣಾ ಆಯೋಗದ ಸಹಕಾರದೊಂದಿಗೆ ಹರಿಯಾಣದಲ್ಲಿ ವ್ಯಾಪಕ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಸಿಡಿಸಿದ್ದ ಹೈಡ್ರಜನ್ ಬಾಂಬ್ ಆರೋಪಗಳಲ್ಲಿ ಕೆಲವು ಠುಸ್ಸಾಗಿವೆ. ಬ್ರೆಜಿಲ್ ರೂಪದರ್ಶಿ ಚಿತ್ರವಿರುವ ಆರೋಪಗಳನ್ನು ಮತದಾರರು ಮತ್ತು ಆ ರೂಪದರ್ಶಿಯೇ ನಿರಾಕರಿಸಿದ್ದಾರೆ.

ನವದೆಹಲಿ, ನ.7 : ಚುನಾವಣಾ ಆಯೋಗದ ಸಹಕಾರದೊಂದಿಗೆ ಹರಿಯಾಣದಲ್ಲಿ ವ್ಯಾಪಕ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಸಿಡಿಸಿದ್ದ ಹೈಡ್ರಜನ್ ಬಾಂಬ್ ಆರೋಪಗಳಲ್ಲಿ ಕೆಲವು ಠುಸ್ಸಾಗಿವೆ. ಬ್ರೆಜಿಲ್ ರೂಪದರ್ಶಿ ಚಿತ್ರವಿರುವ ಆರೋಪಗಳನ್ನು ಮತದಾರರು ಮತ್ತು ಆ ರೂಪದರ್ಶಿಯೇ ನಿರಾಕರಿಸಿದ್ದಾರೆ.

ಪಿಂಕಿ ಜುಗಿಂದರ್‌ ಕೌಶಿಕ್ ಎಂಬ ಮಹಿಳೆಯು 'ತನ್ನ ಮತದಾರ ಚೀಟಿಯ ಬಗ್ಗೆ ಗೊಂದಲ ಮೂಡಿರುವುದು ಡೇಟಾ ಆಪರೇಟ‌ರ್ ತಪ್ಪಿನಿಂದ ಹೊರತು ಡಿಲೀಟ್ ಆಗಿರುವ ಕಾರಣಕ್ಕೆ ಅಲ್ಲ ಎಂದಿದ್ದಾರೆ. ಗ್ರಾಮದ ಮತ್ತೊಬ್ಬ ಮಹಿಳೆಯ ಚಿತ್ರವಿರುವ ಮತದಾರ ಚೀಟಿ ಲಭಿಸಿದೆ ಎಂಬ ಕಾರಣಕ್ಕೆ ನನ್ನ ಮತದಾರರ ಚೀಟಿ 6 ವರ್ಷ ಹಿಂದೆ ಹಿಂದಿರುಗಿಸಿದ್ದೆ‌. ಆದರೆ ತಿದ್ದುಪಡಿ ಚೀಟಿ ಮರಳಿ ಸಿಕ್ಕಿಲ್ಲ, ಆದರೆ ವೋಟರ್‌ ಸ್ಲಿಪ್‌ ನಲ್ಲಿ ಹೆಸರಿದ್ದ ಕಾರಣ, 2024ರ ಚುನಾವಣೆಯಲ್ಲಿ ಆಧಾರ್ ಕಾರ್ಡ್ ಹಿಡಿದು ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದಾರೆ. 

ಇದೇ ರೀತಿ ಮುನೀಶ್ ದೇವಿ ಎಂಬವರು ಕೂಡ ಡೇಟಾ ಆಪರೇಟರ್ ಕಡೆಯಿಂದ ತಪ್ಪಾಗಿರುವ ಬಗ್ಗೆ ಬೊಟ್ಟು ಮಾಡಿದ್ದಾರೆ. ಇನ್ನು ಗುನಿಯಾ ಎಂಬವರು ಎರಡು ವರ್ಷ ಹಿಂದೆಯೇ ಮೃತಪಟ್ಟಿದ್ದಾರೆ. ಅಂಜು ಎಂಬವರು 2024ರಲ್ಲಿ ಮತ ಚಲಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಗುಧಾರ್ನ ಎಂಬಲ್ಲಿ 150 ಸಂಖ್ಯೆಯ ಮನೆಯಲ್ಲಿ ಒಂದು ಕಡೆ 66 ಜನ, ಇನ್ನೊಂದೆಡೆ 501 ಜನ ವಾಸಿಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದರು. ಆದರೆ ಮಾಧ್ಯಮ ಸಂಸ್ಥೆಗಳು ಈ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಎಕ್ರೆಗಟ್ಟಲೆ ಜಾಗದಲ್ಲಿ ಒಂದೇ ಕುಟುಂಬದ ನಾಲ್ಕು ತಲೆಮಾರುಗಳು ಪ್ರತ್ಯೇಕವಾಗಿ ವಾಸಿಸುತ್ತಿರುವುದು ಕಂಡುಬಂದಿದೆ. 

ಇದೇ ವೇಳೆ, ಮತದಾರ ಚೀಟಿಗಳಲ್ಲಿ ತಮ್ಮ ಚಿತ್ರ ಬಳಕೆ ಬಗ್ಗೆ ಬ್ರೆಜಿಲ್‌ ರೂಪದರ್ಶಿ ಲಾರಿಸ್ಸಾ ಪ್ರತಿಕ್ರಿಯಿಸಿದ್ದಾರೆ. ತನ್ನ ಹಳೆಯ ಫೋಟೋವೊಂದು ಭಾರತದ ಚುನಾವಣೆಗಳಲ್ಲಿ ದುರ್ಬಳಕೆಯಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತನ್ನ ಅನುಮತಿ ಪಡೆಯದೇ ಚಿತ್ರ ದುರ್ಬಳಕೆಯಾಗಿದೆ ಎಂದಿರುವ ಅವರು, ತನ್ನನ್ನು ಭಾರತೀಯಳಂತೆ ಚಿತ್ರಿಸಿ ವಂಚಿಸುತ್ತಿದ್ದಾರೆ. ಇದೇನು ಹುಚ್ಚುತನ! ಇದೇನು ಅತಿರೇಕ! ಯಾವ ಜಗತ್ತಿನಲ್ಲಿ ಬದುಕುತ್ತಿದ್ದೇವೆ?' ಎಂದು ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

Congress leader Rahul Gandhi’s explosive allegations of large-scale voter fraud in Haryana, allegedly aided by the Election Commission, have lost credibility after voters themselves and a Brazilian model denied the claims. Errors were found to be due to data entry mistakes, while the model expressed outrage over her image being misused on Indian voter ID cards.