ಬ್ರೇಕಿಂಗ್ ನ್ಯೂಸ್
02-11-25 05:13 pm HK News Desk ದೇಶ - ವಿದೇಶ
ತಿರುವನಂತಪುರಂ, ನ.2 : ಕೇರಳದಲ್ಲಿ ಎಡರಂಗ ಸರ್ಕಾರ ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿಸಿ ಮೀಸಲಾತಿ ನೀಡಿದ್ದು, ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದೆ.
ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಕೇರಳದ ಎಡರಂಗ ಸರ್ಕಾರ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿಸಿ ಮೀಸಲಾತಿ ನೀಡಿರುವ ಕ್ರಮವನ್ನು ಪ್ರಶ್ನಿಸಿದ್ದು, ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಮೀಸಲಾತಿ ನೀಡಿದೆ ಎಂದು ಟೀಕಿಸಿದೆ.
ಆಯೋಗದ ಅಧ್ಯಕ್ಷ ಹನ್ಸ್ ರಾಜ್ ಅಹಿರ್, ಕೇರಳ ರಾಜ್ಯ ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿ ಪ್ರಯೋಜನಗಳನ್ನು ಧಾರ್ಮಿಕವಾಗಿ ಎರಡು ಗುಂಪುಗಳಿಗೆ ವಿಸ್ತರಿಸಲು ಯಾವ ಸಮೀಕ್ಷೆಯ ಮಾನದಂಡ ಇದೆ ಎಂಬುದನ್ನು ಸ್ಪಷ್ಟಪಡಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ. ಓಬಿಸಿ ಮೀಸಲಾತಿಯನ್ನು ಯಾವುದೇ ಧರ್ಮದ ಹೆಸರಿನಲ್ಲಿ ನೀಡುವುದು ಸರಿಯಲ್ಲ. ಒಂದೇ ಧರ್ಮದೊಳಗಿನ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿದ ನಂತರವೇ ಅದನ್ನು ನೀಡಬೇಕು ಎಂದು ಅವರು ಹೇಳಿದರು.
ಎಡರಂಗ ಸರ್ಕಾರದ ಈ ನಡೆಯನ್ನು "ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಮೀಸಲಾತಿ" ಎಂದು ಅಹಿರ್ ಹೇಳಿದ್ದಾರೆ. ಆಯೋಗವು ಕೇರಳ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಿದೆ ಮತ್ತು ಅದನ್ನು 15 ದಿನಗಳಲ್ಲಿ ಸಲ್ಲಿಸುವಂತೆ ನಿರ್ದೇಶಿಸಿದೆ ಎಂದವರು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಓಬಿಸಿ ಕೋಟಾವನ್ನು ಸರಿಯಾಗಿ ಜಾರಿಗೆ ತರಬೇಕೆಂದು ಆಯೋಗವು ಶಿಫಾರಸು ಮಾಡಿದೆ ಎಂದವರು ಹೇಳಿದರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಗುಂಪುಗಳನ್ನು ರಾಜ್ಯದ ಓಬಿಸಿ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಕೇರಳದಲ್ಲಿಯೂ ವಿರೋಧ ವ್ಯಕ್ತವಾಗಿದೆ.
The Left government in Kerala has sparked widespread opposition after deciding to extend OBC reservation benefits to Muslim and Christian communities, just months before the upcoming Assembly elections.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 08:40 pm
HK News Desk
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
14-10-26 08:55 pm
Mangaluru Staffer
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm