ಬ್ರೇಕಿಂಗ್ ನ್ಯೂಸ್
26-10-25 05:38 pm HK News Desk ದೇಶ - ವಿದೇಶ
ಮುಂಬೈ, ಅ.26 : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯ 29 ವರ್ಷದ ವೈದ್ಯೆಯೊಬ್ಬರು ತನ್ನ ಮೇಲೆ ಪೊಲೀಸ್ ಎಸ್ಐ ಮತ್ತು ಸಾಫ್ಟ್ ವೇರ್ ಟೆಕ್ಕಿಯೊಬ್ಬ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಹೊಟೇಲ್ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ತೀವ್ರ ಸಂಚಲನ ಎಬ್ಬಿಸಿದೆ.
ಸತಾರಾ ಜಿಲ್ಲೆಯ ಫಾಲ್ಟಾನ್ ಸಬ್ ಡಿವಿಶನ್ ಆಸ್ಪತ್ರೆಯಲ್ಲಿ ಗ್ರಾಮಾಂತರ ಸೇವೆಯಲ್ಲಿ ಪ್ರೊಬೇಶನರಿ ಆಗಿದ್ದ ಯುವತಿ ಗುರುವಾರ ರಾತ್ರಿ ತಾನು ಉಳಿದುಕೊಂಡಿದ್ದ ಹೊಟೇಲ್ ರೂಮಿನಲ್ಲಿ ಸಾವಿಗೀಡಾಗಿದ್ದರು. ಈ ವೇಳೆ ಆಕೆಯ ಕೈಯಲ್ಲಿ ಬರೆದುಕೊಂಡಿದ್ದ ಡೆತ್ ನೋಟ್ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲಿ ತನ್ನ ಸಾವಿಗೆ ಫಾಲ್ಟಾನ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಪಾಲ್ ಬದಾನೆ ಮತ್ತು ಸಾಫ್ಟ್ ವೇರ್ ಉದ್ಯೋಗಿ ಪ್ರಶಾಂತ್ ಬ್ಯಾಂಕರ್ ಕಾರಣ ಎಂದು ಬರೆಯಲಾಗಿತ್ತು.
ವೈದ್ಯೆಯ ಸಾವಿನ ಬೆನ್ನಲ್ಲೇ ಪುಣೆಯಲ್ಲಿ ಫಾರ್ಮ್ ಹೌಸ್ ಮಾಲೀಕನ ಮಗನಾಗಿರುವ ಪ್ರಶಾಂತ್ ಬ್ಯಾಂಕರ್ ನನ್ನು ಅಲ್ಲಿಂದಲೇ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಯೆಂದು ಗುರುತಿಸಲ್ಪಟ್ಟ ಎಸ್ಐ ಗೋಪಾಲ್ ಬದಾನೆ ಫಾಲ್ಟಾನ್ ಗ್ರಾಮಾಂತರ ಠಾಣೆಯಲ್ಲಿ ಸರೆಂಡರ್ ಆಗಿದ್ದಾನೆ. ಪೊಲೀಸರ ಪ್ರಕಾರ, ಇವರಿಬ್ಬರು ಕೂಡ ಆ ಡಾಕ್ಟರ್ ಯುವತಿ ಜೊತೆಗೆ ಸಂಬಂಧ ಇರಿಸಿಕೊಂಡಿದ್ದರು.
ಡಾಕ್ಟರ್ ಯುವತಿ ಫಾಲ್ಟಾನ್ ಆಸ್ಪತ್ರೆಗೆ ಬಂದು 23 ತಿಂಗಳಾಗಿದ್ದು, ಇನ್ನೊಂದು ತಿಂಗಳಾಗುತ್ತಿದ್ದರೆ ಗ್ರಾಮಾಂತರ ಸೇವೆಯ 24 ತಿಂಗಳು ಮುಗಿದು ಬೇರೆ ಕಡೆಗೆ ಪೋಸ್ಟಿಂಗ್ ಆಗುತ್ತಿದ್ದರು. ಫಾಲ್ಟಾನ್ ಪೊಲೀಸ್ ಠಾಣೆಯಿಂದ ಕರೆತರುತ್ತಿದ್ದ ಆರೋಪಿಗಳ ವೈದ್ಯಕೀಯ ವರದಿ, ಮರಣೋತ್ತರ ಪರೀಕ್ಷಾ ವರದಿಗಳಲ್ಲಿ ಪೊಲೀಸರು, ರಾಜಕೀಯ ಪ್ರಭಾವಿಗಳು ಹೇಳಿದ ರೀತಿಯಲ್ಲಿ ವರದಿ ಬರೆಯಬೇಕಿತ್ತು ಎನ್ನುವ ಒತ್ತಡ ಡಾಕ್ಟರ್ ಮೇಲಿತ್ತು. ಈ ಬಗ್ಗೆ ವಿರೋಧಿ ನಿಲುವು ಹೊಂದಿದ್ದ ಯುವತಿ, ಮೇಲಧಿಕಾರಿಗಳಿಗೂ ಪತ್ರ ಬರೆದಿದ್ದರು.
ವೈದ್ಯರು ವೈದ್ಯಕೀಯ ವರದಿಗಳನ್ನು ತಿರುಚಿದಲ್ಲಿ ಕೆಲವು ಆರೋಪಿಗಳನ್ನು ಸುಲಭದಲ್ಲಿ ಬಂಧಿಸಲು ಸಾಧ್ಯವಾಗುತ್ತಿತ್ತು. ಇಂಥ ಪ್ರಕರಣಗಳಲ್ಲಿ ಬೀಡ್ ಕ್ಷೇತ್ರದ ಸಂಸದರ ಪಿಎ ಒಬ್ಬ ನೇರವಾಗಿ ಡಾಕ್ಟರ್ ಗೆ ಕರೆ ಮಾಡಿ ಒತ್ತಡ ಹೇರುತ್ತಿದ್ದ ಆರೋಪಗಳಿವೆ. ವೈದ್ಯೆ ಮೂಲತಃ ಬೀಡ್ ಕ್ಷೇತ್ರದವರಾಗಿದ್ದರಿಂದ ಆಕೆಯ ಮೇಲೆ ಒತ್ತಡ ಹೇರಿ ತಮಗೆ ಬೇಕಾದಂತೆ ವರದಿ ಬರೆಸುತ್ತಿದ್ದರು ಎಂಬ ಆರೋಪಗಳಿದ್ದವು. ಇದಲ್ಲದೆ, ಪ್ರಶಾಂತ್ ಬ್ಯಾಂಕರ್ ಜೊತೆಗೆ ಏಳೆಂಟು ತಿಂಗಳಿನಿಂದ ಡಾಕ್ಟರ್ ಯುವತಿ ಹತ್ತಿರದ ಸಂಬಂಧ ಹೊಂದಿದ್ದರು. ಆದರೆ ಈ ಮಧ್ಯೆ ಕೆಲವು ತಿಂಗಳ ಹಿಂದೆ ಪ್ರಶಾಂತ್, ಈಕೆಯನ್ನು ದೂರ ಮಾಡಿದ್ದರಿಂದ ಸಂಬಂಧ ಹಳಸಿತ್ತು.
ಇತ್ತೀಚೆಗೆ ಮತ್ತೆ ಸಂಬಂಧ ಏರ್ಪಟ್ಟು ಚಾಟಿಂಗ್ ನಡೆದಿತ್ತು. ಆನಂತರ ಪ್ರಶಾಂತ್ ಬ್ಯಾಂಕರ್ ಗೆ ಡೆಂಗ್ಯು ತಗಲಿದಾಗ ಈಕೆಯೇ ಚಿಕಿತ್ಸೆ ನೀಡಿದ್ದಳು. ಸಾಯುವುದಕ್ಕೂ ಒಂದು ದಿನ ಮುಂಚೆ ಬ್ಯಾಂಕರ್ ಗೆ ಹಲವಾರು ಕರೆ ಮಾಡಿದ್ದಳು. ನಾವು ಕರೆ ಮತ್ತು ಮೆಸೇಜ್ ಮಾಡಿದ್ದರ ಸ್ಕ್ರೀನ್ ಶಾಟ್ ಗಳನ್ನು ಪೊಲೀಸರಿಗೆ ನೀಡಿದ್ದೇವೆ ಎಂದು ಪ್ರಶಾಂತ್ ಬ್ಯಾಂಕರ್ ತಂಗಿ ಹೇಳಿದ್ದಾರೆ. ಇದಕ್ಕೂ ಮುನ್ನ ಪೊಲೀಸ್ ಠಾಣೆ ಸಿಬಂದಿ ಆರೋಪಿಗಳ ವೈದ್ಯಕೀಯ ವರದಿ ವಿಚಾರದಲ್ಲಿ ಒತ್ತಡ ಹೇರುತ್ತಾರೆಂದು ಮೇಲಧಿಕಾರಿಗಳಿಗೆ ಯುವತಿ ದೂರು ನೀಡಿದ್ದು ಇದರಂತೆ ಆಂತರಿಕ ಕಮಿಟಿ ರಚಿಸಿ ವರದಿಯನ್ನೂ ನೀಡಿತ್ತು. ಆ ಸಂದರ್ಭದಲ್ಲಿ ಪೊಲೀಸರು ತನಗೆ ನೀಡಿದ್ದ ಮಾನಸಿಕ ಕಿರುಕುಳ ಮತ್ತು ಎಸ್ಐ ಗೋಪಾಲ್ ಬದಾನೆ ತನ್ನ ಕಚೇರಿಗೆ ಬಂದು ಕಿರುಕುಳ ನೀಡುತ್ತಿದ್ದ ಬಗ್ಗೆ ನಾಲ್ಕು ಪುಟಗಳ ಲಿಖಿತ ಮಾಹಿತಿಯನ್ನು ವೈದ್ಯೆ ನೀಡಿದ್ದರು.
ಸಂಸದರ ಪಿಎ ಒತ್ತಡ ಹೇರಿದ್ದು, ಪೊಲೀಸರ ಕಿರುಕುಳದಿಂದಾಗಿ ವೈದ್ಯೆ ಸಾವಿಗೀಡಾಗಿದ್ದೆಂಬ ವಿಚಾರ ಮಹಾರಾಷ್ಟ್ರದಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು ವಿಪಕ್ಷಗಳು ಬಿಜೆಪಿ ಆಡಳಿತದ ವಿರುದ್ಧ ಆರೋಪ ಮಾಡಿವೆ. ಸಿಎಂ ಫಡ್ನವಿಸ್ ಪ್ರತಿಕ್ರಿಯಿಸಿ, ವೈದ್ಯೆಯ ಸಾವು ವಿಷಾದ ಮೂಡಿಸಿದೆ. ನಾವು ಯಾವುದೇ ಕಾರಣಕ್ಕೂ ಆರೋಪಿಗಳನ್ನು ಹಾಗೇ ಬಿಡುವುದಿಲ್ಲ. ಆರೋಪಿತ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ, ಕಠಿಣ ಶಿಕ್ಷೆಗೆ ಗುರಿ ಮಾಡುತ್ತೇವೆ. ವೈದ್ಯೆಯ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದಿದ್ದಾರೆ.
A 29-year-old government doctor from Satara district, Maharashtra, died by suicide in a hotel room, leaving behind a shocking “death note” written on her palm. In it, she accused a police Sub-Inspector, Gopal Badane, and a software engineer, Prashant Banker, of physical and mental harassment.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 05:32 pm
Mangalore Correspondent
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
15-07-26 01:17 pm
HK News Staffer
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm