ಬ್ರೇಕಿಂಗ್ ನ್ಯೂಸ್
15-10-25 12:09 pm HK News Desk ದೇಶ - ವಿದೇಶ
ನವದೆಹಲಿ, ಅ.15 : ರಾಜಸ್ಥಾನದ ಜೈಸಲ್ಮೇರ್ನಿಂದ ಜೋಧಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಬಸ್ಸಿನಲ್ಲಿದ್ದ ಮಕ್ಕಳು, ಮಹಿಳೆಯರು ಸೇರಿ 20 ಜನ ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಮೂವರು ಮಕ್ಕಳು, ನಾಲ್ವರು ಮಹಿಳೆಯರು ಸೇರಿದ್ದು 16 ಮಂದಿ ಗಂಭೀರ ಗಾಯಗೊಂಡಿದ್ದು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಸಲ್ಮೇರ್-ಜೋಧಪುರ ಹೆದ್ದಾರಿಯ ತೈಯಾತ್ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ 3:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಎಸಿ ಬಸ್ಸನ್ನು ಇತ್ತೀಚೆಗಷ್ಟೇ ಸ್ಲೀಪರ್ ಕೋಚ್ ಆಗಿ ಪರಿವರ್ತಿಸಿ ರೂಟ್ ನಲ್ಲಿ ಓಡಾಟ ಆರಂಭಿಸಲಾಗಿತ್ತು. ಘಟನೆ ಸಂದರ್ಭದಲ್ಲಿ ಸುಮಾರು 57 ಪ್ರಯಾಣಿಕರು ಬಸ್ನಲ್ಲಿದ್ದರು. ಬಸ್ ಎಂದಿನಂತೆ ಮಧ್ಯಾಹ್ನ 3 ಗಂಟೆಗೆ ಜೈಸಲ್ಮೇರ್ನಿಂದ ಜೋಧಪುರಕ್ಕೆ ಹೊರಟಿತ್ತು. ಕೇವಲ 20 ಕಿಲೋಮೀಟರ್ ದೂರಕ್ಕೆ ಹೋಗುತ್ತಿದ್ದಂತೆ ಹಿಂಭಾಗದಿಂದ ಹೊಗೆ ಕಾಣಿಸಿಕೊಂಡಿದ್ದು ಇತರ ವಾಹನಗಳ ಸೂಚನೆಯಂತೆ ಚಾಲಕ ಬಸ್ಸನ್ನು ನಿಲ್ಲಿಸಿದ್ದ. ಸುತ್ತ ಗ್ಲಾಸ್ ಪರಿವರ್ತಿತ ಬಾಡಿ ಆಗಿದ್ದರಿಂದ ಜನರು ಹೊರ ಬರುವುದಕ್ಕೆ ಅವಕಾಶ ಇರಲಿಲ್ಲ. ಅಲ್ಲದೆ, ಆಟೊಮೆಟಿಕ್ ಡೋರ್ ಇದ್ದುದರಿಂದ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಇಲೆಕ್ಟ್ರಿಕ್ ಕನೆಕ್ಷನ್ ಬಂದ್ ಆಗಿತ್ತು. ಇದರಿಂದ ಬಾಗಿಲು ಲಾಕ್ ಆಗಿದ್ದು ಪ್ರಯಾಣಿಕರು ಹೊರ ಬರಲಾಗದೆ ಜೀವ ರಕ್ಷಣೆಗಾಗಿ ಬೊಬ್ಬಿಟ್ಟರು. ಆದರೆ ಏಸಿ ಬಸ್ ಆಗಿದ್ದರಿಂದ ಪೂರ್ತಿ ಬಂದ್ ಆಗಿದ್ದುದು ಬೆಂಕಿ ಹರಡಲು ಅನುಕೂಲವಾಗಿತ್ತು. ಬಸ್ ಒಳಗಡೆಯ ಫೈಬರ್ ಮತ್ತು ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟ ಎಲ್ಲ ವಸ್ತುಗಳಿಗೂ ಬೆಂಕಿ ಹೊತ್ತಿಕೊಂಡಿತ್ತು.
ಬೆಂಕಿ ಹೊತ್ತಿಕೊಂಡ ತಕ್ಷಣ, ಪ್ರಯಾಣಿಕರು ಕಿರುಚುತ್ತಾ ಜೀವ ಉಳಿಸಿಕೊಳ್ಳಲು ಕಿಟಕಿಗಳ ಮೂಲಕ ಹೊರಗೆ ಹಾರಲು ಯತ್ನಿಸಿದರು. ಈ ವೇಳೆ ಪ್ರಯಾಣಿಕರು ಹೊರಗೆ ಬರಲಾಗದೆ ಮೈಗೆ ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿದ್ದಾರೆ. ಸ್ಥಳೀಯರು ತಕ್ಷಣ ಸಹಾಯಕ್ಕೆ ಬಂದರೂ ಅಗ್ನಿಶಾಮಕ ದಳ ಬರುವಾಗ 45 ನಿಮಿಷ ತಡವಾಗಿತ್ತು. ಪಕ್ಕದಲ್ಲೇ ಸೇನಾ ಕ್ಯಾಂಪ್ ಇದ್ದುದರಿಂದ ಅವರ ಬಳಿಯಿದ್ದ ಜೆಸಿಬಿ ತಂದು ಬಸ್ಸಿನ ಬಾಗಿಲು ತೆರೆದರೂ ಅಷ್ಟರಲ್ಲಿ ಹಲವಾರು ಜನ ಸುಟ್ಟು ಕರಕಲಾಗಿದ್ದರು. ಇದಲ್ಲದೆ, ಹೊರಗಿನಿಂದ ನೀರು ಹಾಕಿದರೂ ಒಳಗಡೆಯ ಬೆಂಕಿ ಶಮನವಾಗದೇ ಉರಿಯತೊಡಗಿತ್ತು. ಇದರಿಂದಾಗಿ ನೋಡ ನೋಡುತ್ತಲೇ ಭಾರೀ ದುರಂತ ನಡೆದುಹೋಗಿತ್ತು.
ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಜೋಧಪುರಕ್ಕೆ ಆಗಮಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಜೈಸಲ್ಮೇರ್ ಬಸ್ ಬೆಂಕಿ ಅವಘಡದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಂಭವಿಸಿದ ಅಪಘಾತದಿಂದ ಜೀವಹಾನಿಯಾಗಿದೆ. ಈ ಕಷ್ಟದ ಸಮಯದಲ್ಲಿ ಸಂತ್ರಸ್ತ ಜನರು ಮತ್ತು ಅವರ ಕುಟುಂಬಗಳಿಗೆ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
A horrific tragedy struck Rajasthan when a private AC sleeper bus traveling from Jaisalmer to Jodhpur caught fire near Taiyat village on Tuesday afternoon. At least 20 passengers — including three children and four women — were burnt alive after the automatic door got locked due to an electrical failure. The blaze spread rapidly inside the fully sealed AC bus, leaving passengers trapped.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm