ಬ್ರೇಕಿಂಗ್ ನ್ಯೂಸ್
13-10-25 05:31 pm HK News Desk ದೇಶ - ವಿದೇಶ
ತಿರುವನಂತಪುರಂ, ಅ.13 : ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ 26 ವರ್ಷದ ಯುವಕನೊಬ್ಬ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಇನ್ ಸ್ಟಾ ಗ್ರಾಮ್ ಪೋಸ್ಟ್ ನಲ್ಲಿ ತನ್ನ ಸಾವಿಗೆ ಆರೆಸ್ಸೆಸ್ ಸದಸ್ಯರ ಲೈಂಗಿಕ ದೌರ್ಜನ್ಯ ಕಾರಣ ಎಂದು ಆರೋಪ ಮಾಡಿ ಸಂಚಲನ ಮೂಡಿಸಿದ್ದಾನೆ.
ಕೊಟ್ಟಾಯಂ ಜಿಲ್ಲೆಯ ತಂಪಲಕಾಡ್ ನಿವಾಸಿ ಆನಂದ್ ಸಾವಿಗೆ ಶರಣಾದ ಯುವಕನಾಗಿದ್ದು, ಡೆತ್ ನೋಟ್ ನಲ್ಲಿ ಹೇಳಿರುವ ಪ್ರಕಾರ ಬಾಲ್ಯದಿಂದಲೇ ಆರೆಸ್ಸೆಸ್ ಕಾರ್ಯಕರ್ತನಾಗಿದ್ದೆ. ಸಣ್ಣದಿರುವಾಗಲೇ ತಾನು ನಂಬಿದ ವ್ಯಕ್ತಿಗಳೇ ಲೈಂಗಿಕ ದೌರ್ಜನ್ಯ ಎಸಗಿದರು. ಅದರಿಂದಾಗಿ ತೀವ್ರ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ ಎಂದಿದ್ದಾನೆ. ತಿರುವನಂತಪುರದಲ್ಲಿ ಉದ್ಯೋಗ ಮಾಡುತ್ತಿದ್ದ ಆನಂದ್, ಅಲ್ಲಿಯೇ ಲಾಡ್ಜ್ ಒಂದರಲ್ಲಿ ಎರಡು ದಿನಗಳ ಹಿಂದೆ ಸಾವಿಗೆ ಶರಣಾಗಿದ್ದಾನೆ.


ನಾನು ಸಾವಿಗೆ ಶರಣಾಗುತ್ತಿರುವುದು ಲವ್ ಅಫೇರ್, ಹುಡುಗಿಯ ಕಾರಣಕ್ಕೆ ಅಥವಾ ಯಾವುದೇ ಸಾಲದ ಕಾರಣಕ್ಕೆ ಅಲ್ಲ. ತೀವ್ರ ಖಿನ್ನತೆ ಮತ್ತು ಮಾನಸಿಕ ಕಿರುಕುಳದಿಂದಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ವೈದ್ಯರು ಕೊಟ್ಟಿರುವ ಔಷಧಿಗಳನ್ನು ಸೇವಿಸುತ್ತ ನನ್ನ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ಹಾಗಾಗಿ ಸಾವಿಗೆ ಶರಣಾಗುತ್ತಿದ್ದೇನೆ ಎಂದು 15 ಪುಟಗಳಷ್ಟು ಉದ್ದಕ್ಕೆ ದೀರ್ಘ ಪತ್ರ ಬರೆದು ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ.
ತಂದೆಯ ಸಲಹೆಯಂತೆ ಸಣ್ಣ ವಯಸ್ಸಿನಲ್ಲೇ ಆರೆಸ್ಸೆಸ್ ಸೇರ್ಪಡೆಯಾಗಿದ್ದೆ. ಆದರೆ ನಾನು ಸೋದರನೆಂದುಕೊಂಡಿದ್ದ ವ್ಯಕ್ತಿಯೊಬ್ಬರು ನನಗೆ ತೀವ್ರ ಕಿರುಕುಳ ನೀಡಿದ್ದಾರೆ. ಅದೇ ರೀತಿ ಹಲವಾರು ಆರೆಸ್ಸೆಸ್ ಕಾರ್ಯಕರ್ತರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದಿರುವ ಆನಂದ್, ಎನ್.ಎಂ. ಎಂದು ನಮೂದಿಸಿರುವ ವ್ಯಕ್ತಿ ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಸಕ್ರಿಯನಾಗಿದ್ದು ಅತಿ ಹೆಚ್ಚು ಬಾರಿ ಕಿರುಕುಳ ನೀಡಿದ್ದಾನೆಂದು ತಿಳಿಸಿದ್ದಾನೆ. ನನ್ನನ್ನು ಸೆಕ್ಸ್ ಟೂಲ್ ನಂತೆ ಮಾಡಿಕೊಂಡಿದ್ದ. ಮಾನಸಿಕ ನೋವಿನಿಂದಾಗಿ ವೈದ್ಯರಿಗೆ ತೋರಿಸಿದಾಗ ಅಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಎಂದು ತಿಳಿಸಿದರು. ಆತನಿಂದಾಗಿಯೇ ಈ ರೀತಿಯ ಕಾಯಿಲೆ ನನಗೆ ಆವರಿಸಿತ್ತು. ಕುಟುಂಬದಲ್ಲಿ ಸಂಬಂಧಿಕ ಮತ್ತು ಸೋದರನಾಗಿದ್ದ ಆ ವ್ಯಕ್ತಿ ನನಗೆ ತೀವ್ರ ಕಿರುಕುಳ ನೀಡಿದ್ದಾನೆ.
ಆರೆಸ್ಸೆಸ್ ಶಿಬಿರಗಳಲ್ಲಿಯೂ ಕೆಲವರು ನನಗೆ ಕಿರುಕುಳ ನೀಡಿದ್ದಾರೆ. ಅವರ ಹೆಸರು ಈಗ ನೆನಪಿಗೆ ಬರುತ್ತಿಲ್ಲ. ಕೆಲವರಿಂದ ದೈಹಿಕವಾಗಿಯೂ ಹಲ್ಲೆಗೀಡಾಗಿದ್ದೇನೆ ಎಂದು ಆನಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಘಟನೆ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಡಿವೈಎಫ್ಐ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದೆ.
In a suspected case of suicide, a 26-year-old software engineer, Anandu Aji, was found dead in a lodge room in Thampanoor, Thiruvananthapuram on Thursday. Anandu, a native of Thampalakad in Kottayam district, was reportedly suffering severe mental distress following repeated sexual abuse by members of the Rashtriya Swayamsevak Sangh (RSS).
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
18-04-26 11:31 pm
HK News Desk
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
19-04-26 02:58 pm
HK News Staffer
15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮುಂಬೈ,...
19-04-26 02:24 pm
ಅಂಬ್ಲಮೊಗರು ; ಸ್ನೇಹಿತರೊಂದಿಗೆ ಕೆರೆ ನೀರಲ್ಲಿ ಆಟವಾ...
19-04-26 10:20 am
ಹೇಯ್ ಮಟನ್ ಸರಿಯಾಗಿ ಬೆಂದಿಲ್ಲ ಎಂದು ಸ್ನೇಹಿತನ ಮುಂದ...
18-04-26 10:37 pm
180 ಅಪ್ರಾಪ್ತ ಬಾಲಕಿಯರ 350 ಅಶ್ಲೀಲ ವಿಡಿಯೋ ವೈರಲ್...
18-04-26 03:50 pm