ಬ್ರೇಕಿಂಗ್ ನ್ಯೂಸ್
04-10-25 01:11 pm HK News Desk ದೇಶ - ವಿದೇಶ
ಮುಂಬೈ, ಅ.4 : ಸದ್ಯ ಎಲ್ಲೆಡೆ ʻಕಾಂತಾರ- 1’ ಸಿನಿಮಾದ್ದೇ ಚರ್ಚೆಯಾಗಿದೆ. ಬಾಕ್ಸ್ ಆಫೀಸ್ನಲ್ಲಿಯೂ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಇದೀಗ ಬಾಲಿವುಡ್ಡಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಚಿತ್ರವನ್ನು ವಿಮರ್ಶಿಸಿ, ಬ್ಲಾಕ್ಬಸ್ಟರ್ ಎಂದು ಕರೆದಿದ್ದಲ್ಲದೆ ನಾವೆಲ್ಲ ನಾಚಿಕೆಪಡಬೇಕು ಎಂದಿದ್ದಾರೆ.
ಕಾಂತಾರ ಒಂದು ಅದ್ಭುತ. ಭಾರತದ ಎಲ್ಲಾ ಫಿಲ್ಮ್ ಮೇಕರ್ಸ್ ಕೂಡ ರಿಷಬ್ ಶೆಟ್ಟಿ ಮತ್ತು ಅವರ ತಂಡದ ಪ್ರಯತ್ನವನ್ನು ನೋಡಿ ನಾಚಿಕೆಪಡಬೇಕು. ಧ್ವನಿ, ವಿನ್ಯಾಸ, ಸಿನಿಮಾಟೋಗ್ರಫಿ, ನಿರ್ಮಾಣ ವಿನ್ಯಾಸ ಮತ್ತು ವಿಎಫ್ಎಕ್ಸ್ನಲ್ಲಿ ಮಾಡಿದ ಪ್ರಯತ್ನವನ್ನು ನೋಡಿ ನಾಚಿಕೆಪಡಬೇಕು. ಸಿನಿಮಾ ಕತೆ ಬೋನಸ್ ಆಗಿದ್ದರೆ, ಅದನ್ನು ಹೊರತುಪಡಿಸಿಯೂ ಅವರ ಒಟ್ಟು ಪ್ರಯತ್ನವು ಬ್ಲಾಕ್ಬಸ್ಟರ್ ಆಗುವಂತೆ ಮಾಡಿದೆ. ಸೃಜನಶೀಲ ತಂಡವನ್ನು ರಾಜಿ ಮಾಡಿಕೊಳ್ಳದೆ ಬೆಂಬಲಿಸಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ಗೆ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಶ್ರೇಷ್ಠ ನಿರ್ದೇಶಕರೋ ಅಥವಾ ಶ್ರೇಷ್ಠ ನಟರೋ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, "ನಾನು ಕೇವಲ ಒಬ್ಬ ಸಿನಿಮಾ ಪ್ರೇಮಿ ಅಷ್ಟೇ ಸರ್. ನಿಮ್ಮೆಲ್ಲಾ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು” ಎಂದು ರಿಷಬ್ ಶೆಟ್ಟಿ ವಿನಮ್ರವಾಗಿ ಉತ್ತರಿಸಿದ್ದಾರೆ.
KANTAAAARRRAAA is FANTAAAASTICCCC .. All FILM MAKERS in INDIA should feel ASHAMED after seeing the UNIMAGINABLE EFFORT @Shetty_Rishab and his team put in the BGM, SOUND DESIGN, CINEMATOGRAPHY , PRODUCTION DESIGN and VFX ..Forgetting the CONTENT which is a BONUS , their EFFORT…
— Ram Gopal Varma (@RGVzoomin) October 3, 2025
Bollywood director Ram Gopal Varma praised Kantara-1 as a blockbuster, saying all Indian filmmakers should feel ashamed after witnessing the effort put in by Rishab Shetty and his team. He lauded the sound design, cinematography, VFX, and production quality, adding that it’s hard to decide whether Rishab is a better actor or director.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm