ಬ್ರೇಕಿಂಗ್ ನ್ಯೂಸ್
30-09-25 04:08 pm HK News Desk ದೇಶ - ವಿದೇಶ
ಅಜ್ಮೀರ್, ಸೆ.30 : ಫಸ್ಟ್ ನೈಟ್ ದಿನ ಹೆಂಡತಿ ಜೊತೆಗೆ ಹಾಸಿಗೆ ಹಂಚಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಮದುಮಗನಿಗೆ ಆಘಾತ ಆಗಿದೆ. ಅದೇ ರಾತ್ರಿ ನವವಧು, ಗಂಡನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣದ ಜೊತೆ ಪರಾರಿ ಆಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ವಿಷಯ ತಿಳಿದು ಮನೆಯವರೆಲ್ಲ ಆಘಾತಕ್ಕೆ ಒಳಗಾಗಿದ್ದು, ಪೊಲೀಸ್ ದೂರು ನೀಡಿದ್ದಾರೆ.
ರಾಜಸ್ಥಾನದ ಅಜ್ಮೀರ್ ಬಳಿಯ ಕಿಶನ್ಗಂಜ್ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯುವಕನೊಬ್ಬ ಆಗ್ರಾ ಮೂಲದ ಯುವತಿ ಜೊತೆ ಮದುವೆ ಆಗಿದ್ದ. ಮದುವೆಯಾದ ರಾತ್ರಿ ಫಸ್ಟ್ನೈಟ್ಗೆ ಕೊಠಡಿ ಸಿಂಗಾರಗೊಂಡಿತ್ತು. ಕೊಠಡಿ ಶೃಂಗರಿಸಿದ್ದನ್ನು ನೋಡಿದ ಯುವತಿ, ನಮ್ಮ ಕಡೆ ಈ ರೀತಿಯ ಫಸ್ಟ್ ನೈಟ್ ಸಂಪ್ರದಾಯವಿಲ್ಲ, ಇಷ್ಟೊಂದು ಅರ್ಜೆಂಟ್ ಮಾಡಲ್ಲ ಎಂದಿದ್ದಾಳೆ. ಇದನ್ನು ಮದುಮಗ ಮನೆಯವರಿಗೂ ತಿಳಿಸಿದ್ದು ಸಂಪ್ರದಾಯ ಇಲ್ಲ ಎಂದಿದ್ದಕ್ಕೆ ಸರಿ ಎಂದು ಸುಮ್ಮನಿದ್ದರು. ಸರಿ ರಾತ್ರಿ ಆಗಿದ್ದರಿಂದ ಎಲ್ಲರೂ ಮಲಗಿದ್ದರು. ಆದರೆ ನಸುಕಿನ ಮೂರು ಗಂಟೆ ಸುಮಾರಿಗೆ ಮದುಮಗ ಬಾಯಾರಿಕೆಯಿಂದ ಎಚ್ಚರಗೊಂಡಾಗ ಮದುಮಗಳು ಇರಲಿಲ್ಲ. ಇದರಿಂದ ಅನುಮಾನಗೊಂಡ ಮದುಮಗ, ಎಲ್ಲರನ್ನೂ ಎಬ್ಬಿಸಿ ಹುಡುಕಾಡಿದ್ದಾನೆ. ಕೊನೆಗೆ ಆಕೆ ಅಲ್ಲಿಂದ ಪರಾರಿ ಆಗಿರೋದು ತಿಳಿದುಬಂದಿದೆ. ಮನೆಯಿಂದ ತೆರಳುವಾಗ, ಬೀರುವಿನಲ್ಲಿದ್ದ ಬಂಗಾರ ಮತ್ತು ಹಣವನ್ನೆಲ್ಲ ಕದ್ದು ಓಡಿದ್ದಾಳೆ.
ಇದರಿಂದ ಮತ್ತಷ್ಟು ಗಾಬರಿಯಾದ ಮದುಮಗ ಹಾಗೂ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ರೀತಿಯ ಪ್ರಕರಣ ಉತ್ತರ ಭಾರತದಲ್ಲಿ ಬಹಳಷ್ಟು ನಡೆಯುತ್ತಿದ್ದು ಜನರನ್ನು ಮೋಸ ಮಾಡುತ್ತಿದ್ದಾರೆ. ಇವರ ಮದುವೆಗೂ ಬ್ರೋಕರ್ ಒಬ್ಬ ಬಂದಿದ್ದು ಆತನಿಗೆ ಮದುಮಗ 2 ಲಕ್ಷ ಹಣ ನೀಡಿದ್ದ. ಮೋಸದ ಜಾಲದಲ್ಲಿ ಈತನೂ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.
In a bizarre incident from Kishanganj near Ajmer, Rajasthan, a newlywed bride fled her husband’s house on the wedding night, stealing gold ornaments and cash. The groom, who discovered her missing around 3 a.m., raised alarm only to find she had escaped. The bride had earlier remarked that in her community, “first night” traditions were not urgent, which aroused no suspicion.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 05:32 pm
Mangalore Correspondent
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm