ಬ್ರೇಕಿಂಗ್ ನ್ಯೂಸ್
27-09-25 05:53 pm HK News Desk ದೇಶ - ವಿದೇಶ
ನವದೆಹಲಿ, ಸೆ.27: ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್ ಡಿಎಫ್ ಸಿ ಬ್ಯಾಂಕಿನ ದುಬೈ ಶಾಖೆಯಲ್ಲಿ ಹಣಕಾಸು ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. ದುಬೈ ಹಣಕಾಸು ಸೇವೆಗಳ ಪ್ರಾಧಿಕಾರವು(ಡಿಎಫ್ಎಸ್ಎ) ಈ ನಿರ್ಬಂಧ ಹಾಕಿದ್ದು, ಮುಂದಿನ ಆದೇಶದ ವರೆಗೆ ಬ್ಯಾಂಕು ದುಬೈನಲ್ಲಿ ಹೊಸ ಗ್ರಾಹಕರಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡುವಂತಿಲ್ಲ ಎಂದು ಹೇಳಿದೆ.
ಎಚ್ ಡಿಎಫ್ ಸಿ ಬ್ಯಾಂಕಿನ ಶಾಖೆ ದುಬೈ ಇಂಟರ್ನ್ಯಾಶನಲ್ ಫೈನಾನ್ಶಿಯಲ್ ಸೆಂಟರ್ (ಡಿಐಎಫ್ ಸಿ) ಹೊಸತಾಗಿ ಹಣಕಾಸು ವರ್ಗಾವಣೆ, ಠೇವಣಿ, ಸಾಲ ಇನ್ನಿತರ ರೂಪದಲ್ಲಿ ಹೊಸತಾಗಿ ಗ್ರಾಹಕರಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡುವಂತಿಲ್ಲ. ಹಾಲಿ ಇರುವ ಗ್ರಾಹಕರ ಸೇವೆಗಳಿಗೆ ತೊಂದರೆ ಇರುವುದಿಲ್ಲ ಎಂದು ಈ ಕುರಿತು ಡಿಎಫ್ಎಸ್ ಎ ಹೊರಡಿಸಿರುವ ನೋಟೀಸಿನಲ್ಲಿ ಹೇಳಲಾಗಿದೆ.

ಡಿಐಎಫ್ ಸಿ ಹಣಕಾಸು ಸೇವೆಗಳಲ್ಲಿ ವಿಳಂಬ ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸುವಲ್ಲಿ ವಿಫಲಗೊಂಡ ವಿಚಾರದಲ್ಲಿ ಗ್ರಾಹಕರು ಧ್ವನಿಯೆತ್ತಿದ್ದಕ್ಕೆ ಡಿಎಫ್ ಎಸ್ಎ ಕ್ರಮ ಜರುಗಿಸಿದೆ ಎನ್ನಲಾಗುತ್ತಿದೆ. 2023ರಲ್ಲಿ ಸಿರಿವಂತ ಎನ್ಆರ್ ಐಗಳಿಗೆ ಬ್ಯಾಂಕಿನ ಸಾಲಪತ್ರಗಳ ಬಾಂಡ್ ಗಳನ್ನು ಮಾರಾಟ ಮಾಡಿದ್ದು, ಎಚ್ ಡಿಎಫ್ ಸಿ ಬ್ಯಾಂಕಿನ ದುಬೈ ಶಾಖೆಯ ಸಿಬಂದಿ ಅದನ್ನು ಸುಳ್ಳು ಹೇಳಿ ಮಾಡಿಸಿದ್ದರು ಎಂಬ ಆರೋಪಗಳಿವೆ. ಸ್ವಿಸ್ ಬ್ಯಾಂಕ್ ಆರ್ಥಿಕ ಕುಸಿತ ಆದ ಸಂದರ್ಭದಲ್ಲಿಯೇ ಈ ರೀತಿ ಮಾಡಿದ್ದು ಎನ್ಆರ್ ಐಗಳ ಆಕ್ಷೇಪಕ್ಕೆ ಕಾರಣವಾಗಿತ್ತು.
ಹೀಗಾಗಿ ಈ ಬಗ್ಗೆ ಸಲಹೆ ನೀಡಿದ ಬ್ಯಾಂಕಿನ ಸಿಬಂದಿ, ರಿಲೇಶನ್ ಶಿಪ್ ಮ್ಯಾನೇಜ್ಮೆಂಟ್ ನೋಡಿಕೊಂಡಿದ್ದ ದುಬೈ ಪ್ರತಿನಿಧಿಗಳು, ಬಹ್ರೈನ್ ಬ್ರಾಂಚ್ ಮೂಲಕ ಅಕೌಂಟ್ ಬುಕ್ಕಿಂಗ್ ಆಗಿದೆಯೆಂಬ ಮಾಹಿತಿ ಬಗ್ಗೆಯೂ ತನಿಖೆ ನಡೆಸಲು ಡಿಎಫ್ಎಸ್ಎ ಮುಂದಾಗಿದೆ. ನಿರ್ಬಂಧ ವಿಚಾರದ ಬಗ್ಗೆ ಎಚ್ ಡಿಎಫ್ ಸಿ ಬ್ಯಾಂಕ್ ಆಡಳಿತವು ಪ್ರತಿಕ್ರಿಯಿಸಿದ್ದು, ದುಬೈ ಶಾಖೆಯ ಮೇಲಿನ ನಿರ್ಬಂಧವು ಬ್ಯಾಂಕಿನ ಜಗತ್ತಿನಾದ್ಯಂತ ಇರುವ ಇತರ ಶಾಖೆಗಳ ವಹಿವಾಟಿಗೆ ತೊಂದರೆ ಮಾಡುವುದಿಲ್ಲ. ಆ ಶಾಖೆಯಲ್ಲಿ 2025ರ ಸೆ.23ರ ವರೆಗೆ 1489 ಗ್ರಾಹಕರಿಗೆ ಸೇವೆಗಳನ್ನು ನೀಡಿದ್ದು, ಬ್ಯಾಂಕಿನ ಒಟ್ಟು ಗ್ರಾಹಕರು ಮತ್ತು ಸೇವೆಗಳಿಗೆ ಹೋಲಿಸಿದರೆ ಇದು ತೀರಾ ಸಣ್ಣದು ಎಂದಿದೆ. ಡಿಎಫ್ ಎಸ್ ಎ ನಿಯಮಗಳನ್ನು ಪಾಲಿಸಿ, ಅದರ ತನಿಖೆಯನ್ನೂ ಎದುರಿಸುತ್ತದೆ ಎಂದೂ ಹೇಳಿದೆ.
The Dubai Financial Services Authority (DFSA) has imposed restrictions on the Dubai branch of HDFC Bank, one of India’s largest private sector banks. The order bars the branch from offering services to any new customers until further notice, though existing clients will not be affected.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm