ಬ್ರೇಕಿಂಗ್ ನ್ಯೂಸ್
25-09-25 05:09 pm HK News Desk ದೇಶ - ವಿದೇಶ
ನವದೆಹಲಿ, ಸೆ.25 : ಆಪರೇಷನ್ ಸಿಂಧೂರ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷ ನೆಪದಲ್ಲಿ ಪಾಕ್ ನಾಯಕರು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದು ತಮ್ಮ ಕಂತ್ರಿ ಬುದ್ಧಿ ತೋರಿದ್ದಾರೆ. ಪಾಕಿಸ್ತಾನವು ಶಾಲಾ ಪಠ್ಯಗಳಲ್ಲಿ, "ಭಾರತವೇ ದಾಳಿಗೆ ಪ್ರಚೋದಿಸಿದ್ದು ಪ್ರತಿಯಾಗಿ ಪಾಕ್ ಪಡೆ ದಾಳಿ ನಡೆಸಿ ಭಾರತದ ವಾಯುನೆಲೆಗಳನ್ನು ಧ್ವಂಸಗೊಳಿಸಿತು. ಕೊನೆಗೆ ಪಾಕಿಸ್ತಾನವೇ ಯುದ್ಧ ಗೆದ್ದಿತು ಎಂದು ಸುಳ್ಳು ಸೇರಿಸುವ ಮೂಲಕ ವಿಕೃತಿ ತೋರಿದೆ.
"ಭಾರತ ಆಕ್ರಮಿತ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಭಾರತ ಸುಳ್ಳು ಆರೋಪ ಹೊರಿಸಿದೆ. ಭಾರತೀಯ ಪಡೆಗಳು 2025ರ ಮೇ 6ರಂದು ನಮ್ಮ ಮೇಲೆ ದಾಳಿ ನಡೆಸುವ ಮೂಲಕ ಆಕ್ರಮಣಕಾರಿ ಧೋರಣೆ ಪ್ರದರ್ಶಿಸಿದವು. ಭಾರತದ ದಾಳಿಗೆ ನಮ್ಮ ಪಡೆಗಳು ದಿಟ್ಟ ಪ್ರತ್ಯುತ್ತರ ನೀಡಿದವು. ಕಾಶ್ಮೀರದಲ್ಲಿರುವ ಅವರ మిలిటరి ನೆಲೆಗಳನ್ನು ಧ್ವಂಸಗೊಳಿಸಿದವು,'' ಎಂದು ಬಡಾಯಿ ಕೊಚ್ಚಿಕೊಂಡು ಹಸಿ ಸುಳ್ಳುಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ.
"ಭಾರತದ ಡ್ರೋನ್ ದಾಳಿಗೆ ಪಾಕಿಸ್ತಾನವು ಬುನ್ಯಾನ್ -ಉಮ್-ಮರ್ಸೂಸ್' ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತು. ಪಾಕ್ ವಾಯುಪಡೆಯು ಭಾರತದ ವಾಯುನೆಲೆಗಳೂ ಸೇರಿದಂತೆ 26 ವ್ಯೂಹಾತ್ಮಕ ಸೇನಾ ಸ್ಥಳಗಳ ಮೇಲೆ ದಾಳಿ ನಡೆಸಿತು. ಭಾರಿ ನಷ್ಟದ ಬಳಿಕ ಭಾರತವೇ ಶಾಂತಿಗೆ ಮೊರೆಯಿಟ್ಟಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ಮನವಿ ಮೇರೆಗೆ ಪಾಕಿಸ್ತಾನವು ದಾಳಿ ನಿಲ್ಲಿಸಲು ಒಪ್ಪಿತು" ಎಂಬ ಸುಳ್ಳುಗಳನ್ನು ಪಠ್ಯದಲ್ಲಿ ಸೇರಿಸಿ ಹೊಸ ಜನಾಂಗವನ್ನು ಮತ್ತೆ ಭಾರತ ವಿರೋಧಿ ಭಾವನೆ ಬರುವಂತೆ ಪಾಕ್ ವಿಕೃತಿ ಮೆರೆದಿದೆ.
ಭಾರತ ದಾಳಿಗೆ ತತ್ತರಿಸಿದ್ದ ಪಾಕಿಗರು
ಕಳೆದ ಮೇನಲ್ಲಿ ಭಾರತ ನಡೆಸಿದ್ದ 'ಆಪರೇಶನ್ ಸಿಂಧೂರ'ಕ್ಕೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿತ್ತು. ಭಾರತೀಯ ಪಡೆಗಳು ದಾಳಿ ನಡೆಸಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರೆ ತಯ್ಬಾ, ಜೈಶ್ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವು ಅಮೃತಸರ, ಜಮ್ಮು, ಶ್ರೀನಗರ ಸೇರಿ 26 ಸ್ಥಳಗಳ ಮೇಲೆ ಡೋನ್ ದಾಳಿಗೆ ಯತ್ನಿಸಿತ್ತಾದರೂ ಭಾರತದ ಪ್ರಬಲ ವಾಯು ರಕ್ಷಣಾ ವ್ಯವಸ್ಥೆಯು ಈ ಆಕ್ರಮಣವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಪಾಕ್ನ ಈ ಪ್ರಚೋದನೆಗೆ ಪ್ರತಿಯಾಗಿ ಭಾರತವು ಕ್ಷಿಪಣಿ ದಾಳಿ ಮೂಲಕ ಪಾಕಿಸ್ತಾನದ ಮುರಿದ್, ನೂರ್ ಖಾನ್, ರಫೀಕಿ, ಸರ್ಗೋದಾ, ಚಕ್ ಲಾಲ, ರಹೀಮ್ ಯಾರ್ ಖಾನ್ ವಾಯುನೆಲೆಗಳನ್ನು ಧ್ವಂಸಗೊಳಿಸಿತ್ತು. ಇದರಿಂದ ಬೆಚ್ಚಿಬಿದ್ದ ಪಾಕಿಸ್ತಾನವು ಶಾಂತಿಗಾಗಿ ಭಾರತದ ಬಳಿ ಮೊರೆ ಇಟ್ಟಿತ್ತು.
In a blatant attempt to distort history, Pakistan has inserted false narratives about Operation Sindhoor into its school textbooks, portraying India as the aggressor and itself as the victor. The fabricated accounts claim that during the four-day conflict earlier this year, Pakistan destroyed Indian airbases and forced India to seek peace.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm