ಬ್ರೇಕಿಂಗ್ ನ್ಯೂಸ್
25-09-25 05:05 pm HK News Desk ದೇಶ - ವಿದೇಶ
ಕಾಸರಗೋಡು, ಸೆ.25 : ಕೇರಳದಲ್ಲಿ ಅಮೀಬಾ ಮೆನಿಂಗೋ ಎನ್ಸೆಫಾಲಿಟಿಸ್ (ಅಮೀಬಾ ಮೆದುಳು ಜ್ವರ)ದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಈ ನಡುವೆ, ಅಮೀಬಾ ಜ್ವರದ ಬಗ್ಗೆ ಕೇರಳ ಆರೋಗ್ಯ ಇಲಾಖೆ ಸಮಗ್ರ ಅಧ್ಯಯನಕ್ಕೆ ಮುಂದಾಗಿದೆ.
ಸಾಮಾನ್ಯವಾಗಿ ನೀರಿನಲ್ಲಿ 'ನೆಗ್ಲೇರಿಯಾ ಫೌಲೇರಿ' ಎಂಬ ಕುಲಕ್ಕೆ ಸೇರಿದ ಅಮೀಬಾ ಮೂಗಿನ ಮೂಲಕ ಮೆದುಳಿಗೆ ಪ್ರವೇಶಿಸಿ ರೋಗವನ್ನು ಉಂಟು ಮಾಡುತ್ತದೆ ಎಂದು ನಂಬಲಾಗುತ್ತಿದೆ. ಆದರೆ ಇದರ ಬಗ್ಗೆ ಖಚಿತತೆ ಇಲ್ಲ. ಪ್ರಸ್ತುತ ಸೋಂಕು ಹರಡುತ್ತಿರುವುದನ್ನು ನೋಡಿದರೆ ಆ ರೀತಿಯಲ್ಲಿ ಸೋಂಕು ತಗುಲಿದ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನುವುದು ಆರೋಗ್ಯ ತಜ್ಞರ ಮಾಹಿತಿ. ಈ ನಡುವೆ ಅಮೀಬಾ ಗಾಳಿಯ ಮೂಲಕ ಹರಡಬಹುದೇ ಎಂದು ನಿರ್ಧರಿಸಲು ಆರೋಗ್ಯ ಇಲಾಖೆಯ ತಜ್ಞರು ಅಧ್ಯಯನಕ್ಕೆ ಇಳಿದಿದ್ದಾರೆ.
ಸದ್ಯ ಪ್ರಾಥಮಿಕ ಅಧ್ಯಯನದಲ್ಲಿ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಪಿಎಎಂ) ಮತ್ತು ಗ್ರ್ಯಾನುಲೋಮ್ಯಾಟಸ್ ಮೆನಿಂಗೊ ಎನ್ಸೆಫಾಲಿಟಿಸ್ ಎಂಬ ಎರಡು ರೀತಿಯಲ್ಲಿ ಸೋಂಕು ಇರುವುದನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪ್ರಾಥಮಿಕ ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್ ಅತ್ಯಂತ ಅಪಾಯಕಾರಿ ಮತ್ತು ಆ ವರ್ಗದ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಇದನ್ನು 'ಮೆದುಳು ತಿನ್ನುವ ಅಮೀಬಾ' ಎಂದೂ ಕರೆಯಲ್ಪಡುವ 'ನೇಗ್ಲೇರಿಯಾ ಫೌಲೇರಿ' ಅಮೀಬಾ ಮಾದರಿಯ ಜೀವಿಯಿಂದ ಹರಡುತ್ತದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಕೊಳ, ಸರೋವರ ಮತ್ತು ನದಿಗಳ ನೀರಿನಲ್ಲಿ ಕಂಡುಬರುವ ಅಮೀಬಾ ಮೆದುಳನ್ನು ತಲುಪಿ ಜೀವಕೋಶಗಳನ್ನು ನಾಶಪಡಿಸುತ್ತದೆ. ಊತ ಮತ್ತು ಸಾವಿಗೂ ಕಾರಣವಾಗುತ್ತದೆ.
ಇದೇ ಮಾದರಿಯಲ್ಲಿ ಹಲವಾರು ಪ್ರಕರಣಗಳು ಕೇರಳದಲ್ಲಿ ಮಕ್ಕಳು ಸೇರಿದಂತೆ ಜನಸಾಮಾನ್ಯರಲ್ಲಿ ಕಂಡುಬಂದಿವೆ. ನೇಗ್ಲೇರಿಯಾ ಫೌಲೆರಿ ಹೊರತುಪಡಿಸಿ, ಆಕಾಂತಮೀಬಾ, ಸಪೀನಿಯಾ ಮತ್ತು ಬಾಲಮುಥಿಯಾದಂತಹ ಅಮೀಬಾಗಳು ಸಹ ಈ ರೋಗವನ್ನು ಉಂಟು ಮಾಡುತ್ತವೆ. ಅಮೀಬಾ ಮೂಗು ಮತ್ತು ಮೆದುಳನ್ನು ಬೇರ್ಪಡಿಸುವ ತೆಳುವಾದ ಪದರದಲ್ಲಿನ ಅಪರೂಪದ ರಂಧ್ರಗಳ ಮೂಲಕ ಅಥವಾ ಕಿವಿಯೋಲೆಯ ರಂಧ್ರದ ಮೂಲಕ ಮೆದುಳನ್ನು ಪ್ರವೇಶಿಸಿ ಸೋಂಕಿಗೆ ಕಾರಣವಾಗುತ್ತದೆ.
ಈ ರೋಗವು ಶೇ.97ಕ್ಕಿಂತ ಹೆಚ್ಚು ಮರಣ ಪ್ರಮಾಣವನ್ನು ಹೊಂದಿದೆ. ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ ಅವರ ತಲೆಬುರುಡೆಗಳು ಸಾಕಷ್ಟು ದಪ್ಪವಾಗಿರುವುದಿಲ್ಲ. ಆದರೆ ಈ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ನೇಗ್ಲೇರಿಯಾ ಫೌಲೆರಿ ಅಮೀಬಾ ಸಮುದ್ರದ ನೀರಿನಲ್ಲಿ ಬದುಕುಳಿಯುವುದಿಲ್ಲ. ಮಾನವ ದೇಹದಲ್ಲಿ 45.8 ಡಿಗ್ರಿ ಸೆಲ್ಸಿಯಸ್ ವರೆಗೆ ಬದುಕಬಲ್ಲದು ಎಂದು ಹೇಳಲಾಗುತ್ತದೆ.
ಕೇರಳದಲ್ಲಿ ಈ ಸೋಂಕಿನಿಂದ 80 ಪ್ರಕರಣ ಪತ್ತೆಯಾಗಿದ್ದು ಅದರಲ್ಲಿ 21 ಸಾವು ಇದರಿಂದಾಗಿದೆ ಎಂಬುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದೆ. ಇನ್ನಷ್ಟು ಹರಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚಿಸಿದೆ.
Kerala is witnessing a worrying rise in cases of amoebic meningoencephalitis, commonly known as the “brain-eating amoeba” infection, with 80 confirmed cases and 21 deaths so far. The outbreak has sparked fear among the public, especially as most cases are reported in children. The state health department has initiated a comprehensive study to better understand the spread of the disease.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm