ಬ್ರೇಕಿಂಗ್ ನ್ಯೂಸ್
06-09-25 10:34 am HK News Desk ದೇಶ - ವಿದೇಶ
ನವದೆಹಲಿ, ಸೆ.6: ಡಿಜಿಟಲ್ ಪಾವತಿಗೆ ಜನ ಹೆಚ್ಚೆಚ್ಚು ಒಗ್ಗಿಕೊಳ್ಳುತ್ತಿರುವುದು ಮತ್ತು ಇಷ್ಟಪಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಒದಗಿಸಲು 'ಭಾರತೀಯ ರಾಷ್ಟ್ರೀಯ ಪಾವತಿ ನಿಗಮ'ವು ಯುಪಿಐ ಪಾವತಿ ಮಿತಿಯನ್ನು ಮತ್ತಷ್ಟು ಹೆಚ್ಚಳ ಮಾಡಿದೆ. ಸೆಪ್ಟೆಂಬರ್ 15ರಿಂದ ಹೊಸ ನಿಯಮ ಜಾರಿಯಾಗಲಿದ್ದು ಎಲ್ಲ ಬ್ಯಾಂಕುಗಳಿಗೆ ಈ ಕುರಿತು ಸುತ್ತೋಲೆ ಕಳುಹಿಸಲಾಗಿದೆ.
ಇದರಂತೆ ಇನ್ನು ಮುಂದೆ ಗ್ರಾಹಕರು ಒಮ್ಮೆಲೇ ಯುಪಿಐ ಮೂಲಕ 5 ಲಕ್ಷ ರೂ. ವರೆಗೆ ಹಣ ವರ್ಗಾವಣೆ ಮಾಡಬಹುದು. ಮತ್ತು 24 ಗಂಟೆ ಅವಧಿಯಲ್ಲಿ ಒಟ್ಟು 10 ಲಕ್ಷ ರೂ. ವರೆಗಿನ ಮೊತ್ತವನ್ನು ಯುಪಿಐ ಮೂಲಕ ಪಾವತಿಸಿ ಬ್ಯಾಂಕ್ ವಹುವಾಟು ಮಾಡಬಹುದು. ಆದರೆ, ಇದು ವ್ಯಕ್ತಿಯಿಂದ ವರ್ತಕರು ಅಥವಾ ಕಂಪನಿಗಳಿಗೆ ಮಾಡುವ ಪಾವತಿಗಳಿಗೆ ನಿರ್ದಿಷ್ಟ 12 ವ್ಯವಹಾರಗಳಿಗೆ ಮಾತ್ರ ಅನ್ವಯವಾಗುತ್ತದೆ.
ವ್ಯಕ್ತಿಯಿಂದ ವ್ಯಕ್ತಿಗೆ ಕಳುಹಿಸುವ ಹಣಕ್ಕೆ ದೈನಂದಿನ ಗರಿಷ್ಠ 1 ಲಕ್ಷ ರೂ. ಮಿತಿ ಮುಂದುವರಿಯಲಿದೆ. ಸದ್ಯಕ್ಕೆ ಷೇರು ಮಾರುಕಟ್ಟೆ, ವಿಮೆ ಮತ್ತು ಸರಕಾರಿ ಇ-ಮಾರ್ಕೆಟ್ ಪ್ಲೇಸ್, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸೇರಿದಂತೆ ಒಟ್ಟು 12 ವರ್ಗಗಳಿಗೆ ಹೆಚ್ಚುವರಿ ಪಾವತಿ ಮಿತಿ ಅನ್ವಯವಾಗಲಿದೆ. ಇದರಂತೆ, ಒಬ್ಬ ವ್ಯಕ್ತಿ ಗರಿಷ್ಠ ಎಂದರೆ ಒಂದು ಬಾರಿಗೆ ಐದು ಲಕ್ಷದಷ್ಟು ಮೊತ್ತವನ್ನು ಯುಪಿಐ ಮೂಲಕ ನಿರ್ದಿಷ್ಟ ಉದ್ದೇಶಕ್ಕೆ ಪಾವತಿ ಮಾಡಬಹುದು. 24 ಗಂಟೆ ಅವಧಿಯಲ್ಲಿ 10 ಲಕ್ಷ ರೂ. ವಹಿವಾಟನ್ನು ಯುಪಿಐನಲ್ಲಿಯೇ ಮಾಡಬಹುದಾಗಿದೆ. ಕ್ರೆಡಿಟ್ ಕಾರ್ಡ್ ಮಿತಿಯನ್ನೂ ಹೆಚ್ಚಿಸಲಾಗಿದ್ದು ಒಂದೇ ಬಾರಿಗೆ ಐದು ಲಕ್ಷ ಪಾವತಿ ಹಾಗೂ ದಿನದಲ್ಲಿ 6 ಲಕ್ಷದಷ್ಟು ಮೊತ್ತ ಪಾವತಿಸಲು ಅವಕಾಶ ನೀಡಲಾಗಿದೆ. ಹೊಸ ನೀತಿಯನ್ನು ಸೆ.15ರಿಂದಲೇ ಜಾರಿಗೆ ತರಲು ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ.
In response to the growing adoption and popularity of digital payments, the National Payments Corporation of India (NPCI) has announced an increase in the transaction limits for Unified Payments Interface (UPI) payments. The new rules will come into effect from September 15, and all banks have been notified accordingly. As per the revised guidelines, users will now be able to transfer up to ₹5 lakh in a single UPI transaction, and a total of ₹10 lakh within a 24-hour period.
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
06-09-25 01:58 pm
Udupi Correspondent
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am
Mangalore Cow Slaughter, Crime, Arrest: ಪೆರ್ನ...
05-09-25 10:53 pm
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm