ಬ್ರೇಕಿಂಗ್ ನ್ಯೂಸ್
25-12-20 02:09 pm Headline Karnataka News Network ದೇಶ - ವಿದೇಶ
ಕೊಚ್ಚಿ, ಡಿ.25: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ವಿದ್ಯಾರ್ಥಿ ಘಟಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಕ್ಕೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಕಳೆದ ಕೆಲವು ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ಹಣವನ್ನು ಠೇವಣಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಪಿಎಫ್ಐ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೊಚ್ಚಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ. ಇದೇ ಪ್ರಕರಣ ಸಂಬಂಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎ.ರವೂಫ್ ಶರೀಫ್ ಬಂಧನಕ್ಕೊಳಗಾಗಿದ್ದು, ಆತನ ಕಸ್ಟಡಿ ಅವಧಿಯನ್ನು ಮತ್ತೆ ಮೂರು ದಿನಕ್ಕೆ ವಿಸ್ತರಿಸಲು ಕೋರಿದ ವೇಳೆ ಅಧಿಕಾರಿಳು ಈ ವರದಿಯನ್ನು ಕೋರ್ಟಿಗೆ ಸಲ್ಲಿಕೆ ಮಾಡಿದ್ದಾರೆ.
ಪಿಎಫ್ಐ ಸಂಘಟನೆಯ ವಿವಿಧ ಬ್ಯಾಂಕ್ ಖಾತೆಗಳಿಗೆ ದೇಶಾದ್ಯಂತ ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿರುವುದನ್ನು ಪತ್ತೆ ಮಾಡಲಾಗಿದೆ. ಬ್ಯಾಂಕ್ ಖಾತೆಗಳಿಗೆ ನಗದು ರೂಪದಲ್ಲಿಯೂ ದೊಡ್ಡ ಮೊತ್ತದ ಹಣ ಠೇವಣಿ ಮಾಡಲಾಗಿದೆ. ನಗದಿನ ಮೂಲ ಮ್ತತು ಹಣ ವರ್ಗಾವಣೆ ಆಗಿರುವ ವಿಚಾರದಲ್ಲಿ ತನಿಖೆ ನಡೆಸಲಾಗುತ್ತಿದೆ. 2013ರ ಬಳಿಕ ಪಿಎಫ್ಐ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಲ್ಲದೆ, 2014ರ ಬಳಿಕ ಹಣ ವರ್ಗಾವಣೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಪತ್ತೆ ಮಾಡಲಾಗಿದೆ ಎಂದು ವರದಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
2019 ಮತ್ತು 20ರಲ್ಲಿ ಸಿಎಎ ಕಾನೂನು ವಿರುದ್ಧದ ಪ್ರತಿಭಟನೆಯ ವೇಳೆ ಪಿಎಫ್ಐ ಈ ಹಣವನ್ನು ಬಳಕೆ ಮಾಡಿತ್ತು. ದೆಹಲಿ ಮತ್ತು ಬೆಂಗಳೂರು ಗಲಭೆಯಲ್ಲಿ ಪಿಎಫ್ಐ ಮತ್ತು ಅದರ ರಾಜಕೀಯ ಘಟಕ ಎಸ್ ಡಿಪಿಐ ನಾಯಕರ ಪಾತ್ರ ಇರುವುದು ಕಂಡುಬಂದಿದೆ. ಗಲಭೆ ಸಂದರ್ಭದಲ್ಲಿ ಪಿಎಫ್ಐ ತನ್ನ ಖಾತೆಯಲ್ಲಿರುವ ಹಣವನ್ನು ದುರ್ಬಳಕೆ ಮಾಡಿರುವ ಬಗ್ಗೆ ಇಡಿ ತನಿಖೆಯಲ್ಲಿ ಕಂಡುಬಂದಿದೆ ಎಂದು ಕೋರ್ಟಿಗೆ ತಿಳಿಸಿದ್ದಾರೆ.
ವಿದೇಶಗಳಿಂದ ಭಾರೀ ಮೊತ್ತದ ಫಂಡಿಂಗ್
ದೇಶಾದ್ಯಂತ ಪಿಎಫ್ಐ ನಾಯಕರ ಮನೆ, ಕಚೇರಿಗಳಿಗೆ ದಾಳಿ ನಡೆಸಿದ ಸಂದರ್ಭ ವಿದೇಶಗಳಿಂದ ದೊಡ್ಡ ಮೊತ್ತದ ಫಂಡಿಂಗ್ ಬರುತ್ತಿರುವುದು ಪತ್ತೆಯಾಗಿದೆ. ವಿದೇಶಗಳಲ್ಲಿ ಫಂಡ್ ಕಲೆಕ್ಟ್ ಮಾಡುವುದಕ್ಕಾಗಿ ಪಿಎಫ್ಐ, ಕೆಲವು ಪ್ರತಿನಿಧಿಗಳನ್ನು ಇಟ್ಟುಕೊಂಡಿದೆ. ವಿದೇಶಗಳಿಂದ ಬರುವ ಹಣದ ಮೊತ್ತ ಈಗ ಪತ್ತೆಯಾದ ಬ್ಯಾಂಕ್ ಖಾತೆಗಳಲ್ಲಿ ಕಂಡುಬಂದಿಲ್ಲ. ಹೀಗಾಗಿ, ಈ ಹಣವನ್ನು ಹವಾಲಾ ರೂಪದಲ್ಲಿ ವಿದೇಶಗಳಿಂದ ತರಿಸಲಾಗುತ್ತಿದೆ ಎಂಬ ಶಂಕೆಯಿದೆ ಎಂದು ವರದಿಯಲ್ಲಿ ಹೇಳಿದೆ.
ಕಳೆದ ತಿಂಗಳು ಕೇರಳದ ನಾಲ್ವರು ಪತ್ರಕರ್ತರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಅವರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲು ಫಂಡಿಂಗ್ ಮಾಡಿದ್ದು ಕ್ಯಾಂಪಸ್ ಫ್ರಂಟ್ ಸಂಘಟನೆಯ ರವೂಫ್ ಎನ್ನುವ ವಿಚಾರ ತಿಳಿದುಬಂದಿತ್ತು. ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ ಸಂದರ್ಭದಲ್ಲಿ ಅಲ್ಲಿಗೆ ತೆರಳಿ ಬಂಧಿತನಾಗಿದ್ದ ಮಲಯಾಳಂ ಪತ್ರಕರ್ತ ಸಿದ್ದಿಕ್ ಕಪ್ಪನ್ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದ. ಇದರಂತೆ, ಇದೇ ತಿಂಗಳ ಆರಂಭದಲ್ಲಿ ಕ್ಯಾಂಪಸ್ ಫ್ರಂಟ್ ಜನರಲ್ ಸೆಕ್ರಟರಿ ಕೆ.ಎ. ರವೂಫ್ ನನ್ನು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ತೆರಳಲು ರೆಡಿಯಾಗುತ್ತಿದ್ದಾಗ ಬಂಧಿಸಲಾಗಿತ್ತು. ತಪಾಸಣೆ ವೇಳೆ ಕ್ಯಾಂಪಸ್ ಫ್ರಂಟ್ ಸಂಘಟನೆ ಹೆಸರಲ್ಲಿ ಹಣದ ವಹಿವಾಟನ್ನು ರೌಫ್ ನೋಡಿಕೊಂಡಿದ್ದು ತಿಳಿದುಬಂದಿತ್ತು.
ರೌಫ್ ಬಂಧನದ ಬಳಿಕ ಆತನ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಐಸಿಐಸಿಐ ಬ್ಯಾಂಕ್ ಖಾತೆಯಲ್ಲಿ 1.35 ಕೋಟಿ ರೂ. ಹಣವನ್ನು 2018-20ರ ಅವಧಿಯಲ್ಲಿ ಡಿಪಾಸಿಟ್ ಮಾಡಿದ್ದು ಕಂಡುಬಂತು. ಅಲ್ಲದೆ, ಫೆಡರಲ್ ಬ್ಯಾಂಕ್ ಖಾತೆಯಲ್ಲಿ 67 ಲಕ್ಷ ಮತ್ತು ಏಕ್ಸಿಸ್ ಬ್ಯಾಂಕಿನಲ್ಲಿ 20 ಲಕ್ಷ ಹಣ ಇರುವುದು ಪತ್ತೆಯಾಗಿತ್ತು. ಈ ನಡುವೆ, ಕೊಚ್ಚಿಯ ವಿಶೇಷ ನ್ಯಾಯಾಲಯಕ್ಕೆ ರವೂಫ್ ನನ್ನು ಹಾಜರು ಪಡಿಸಲಾಗಿತ್ತು. ಕೋರ್ಟಿನಲ್ಲಿ ತಾನು ರಫ್ತು ವ್ಯವಹಾರದಲ್ಲಿ ಬಿಸಿನೆಸ್ ಹೊಂದಿದ್ದು, ಅದರಲ್ಲಿ ಬಂದ ಹಣವೆಂದು ಹೇಳಿಕೊಂಡಿದ್ದ. ಅಲ್ಲದೆ, ಒಮಾನ್ ದೇಶದ ಕಂಪೆನಿ ಒಂದರಲ್ಲಿ ಜನರಲ್ ಮ್ಯಾನೇಜರ್ ಆಗಿದ್ದೇನೆ ಎಂದು ಹೇಳಿಕೆಯನ್ನೂ ನೀಡಿದ್ದ. ಇಡಿ ಕಸ್ಟಡಿಯಲ್ಲಿ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿದ್ದಾರೆ. ಹತ್ತು ಖಾಲಿ ಪೇಪರ್ ಗಳಿಗೆ ಸಹಿ ಮಾಡಲು ಹೇಳಿದ್ದಾರೆ. ನನ್ನ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ ಎಂದು ಆರೋಪ ಮಾಡಿದ್ದ. ಕೊನೆಗೆ, ಇಡಿ ಅಧಿಕಾರಿಗಳ ಮನವಿಯಂತೆ ಕೋರ್ಟ್ ಆರೋಪಿಯನ್ನು ಮೂರು ದಿನಗಳ ಕಸ್ಟಡಿಗೆ ನೀಡಿದೆ.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm