ಬ್ರೇಕಿಂಗ್ ನ್ಯೂಸ್
21-12-20 04:08 pm Headline Karnataka News Network ದೇಶ - ವಿದೇಶ
ರಿಯಾದ್, ಡಿ.21 : ಬ್ರಿಟನ್ ದೇಶದಲ್ಲಿ ಮತ್ತೆ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ದಿಢೀರ್ ಆಗಿ ಸ್ಥಗಿತಗೊಳಿಸಿದೆ. ಕನಿಷ್ಠ ಒಂದು ವಾರದ ತನಕ ರಸ್ತೆ ಹಾಗೂ ಸಮುದ್ರ ಮೂಲಕ ದೇಶಕ್ಕೆ ಆಗಮಿಸುವುದನ್ನು ನಿರ್ಬಂಧ ಹೇರಿದೆ.
ಈಗಾಗ್ಲೇ ಸೌದಿ ರಾಷ್ಟ್ರಕ್ಕೆ ಆಗಮಿಸಿರುವ ಮತ್ತು ತುರ್ತು ಪ್ರಕರಣಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಒಂದು ವಾರ ಕಾಲ ರದ್ದುಪಡಿಸಲಾಗಿದ್ದು, ಈ ನಿಷೇಧ ಇನ್ನೊಂದು ವಾರಕ್ಕೆ ವಿಸ್ತರಣೆಗೊಳ್ಳಬಹುದು ಎಂದು ಅಧಿಕೃತ ಸೌದಿ ಪ್ರೆಸ್ ಏಜನ್ಸಿ ಹೇಳಿದೆ. ಆದರೆ, ಈಗಾಗ್ಲೇ ಸೌದಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ, ಅವುಗಳಿಗೆ ದೇಶ ಬಿಟ್ಟು ತೆರಳಲು ಅನುಮತಿಸಲಾಗುವುದು ಎಂದು ಏಜನ್ಸಿ ಹೇಳಿದೆ.
ಹೊಸ ರೀತಿಯ ಕೊರೋನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ ಎಂದು ಇಂಗ್ಲೆಂಡ್ ಸರಕಾರ ಭಾನುವಾರ ಎಚ್ಚರಿಕೆ ನೀಡಿದ ನಂತರ ಹಲವು ಯುರೋಪಿಯನ್ ದೇಶಗಳು ಬ್ರಿಟನ್ಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ್ದು ಇದರ ಬೆನ್ನಿಗೇ ಸೌದಿ ಅರೇಬಿಯಾ ಕೂಡ ಈ ಕ್ರಮ ಕೈಗೊಂಡಿದೆ.
ಯುರೋಪ್ನಿಂದ ಅಥವಾ ಬೇರೆ ಯಾವುದೇ ದೇಶದಿಂದ ಸೌದಿ ಅರೇಬಿಯಾಗೆ ಡಿಸೆಂಬರ್ 8 ಹಾಗೂ ನಂತರದ ದಿನಗಳಲ್ಲಿ ಆಗಮಿಸಿದವರು ಎರಡು ವಾರಗಳ ಕಾಲ ಸ್ವಯಂ ಐಸೊಲೇಶನ್ ಒಳಗಾಗಬೇಕು ಮತ್ತು ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಅಲ್ಲಿನ ಜನರಿಗೆ ಸೂಚನೆ ನೀಡಲಾಗಿದೆ.
ಕುವೈತ್ ಕೂಡ ಬ್ರಿಟನ್ನಿಂದ ಆಗಮಿಸುವ ವಿಮಾನಗಳಿಗೆ ನಿರ್ಬಂಧ ಹೇರಿದೆ.
ಬ್ರಿಟನ್ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಭಾರೀ ವೇಗವಾಗಿ ಕೊರೊನಾ ಹರಡುತ್ತಿದ್ದು ಐದು ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಸಾವು ಕಂಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಈತನಕ 3.61 ಲಕ್ಷ ಕೊರೊನಾ ಸೋಂಕಿತರು ಕಂಡುಬಂದಿದ್ದು ಕೇವಲ ಆರು ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ, ಸೌದಿಯಲ್ಲಿ ಮೂರು ಹಂತದ ಕೋವಿಡ್ ವ್ಯಾಕ್ಸಿನೇಶನ್ ಪ್ರಯೋಗ ಆರಂಭಿಸಲಾಗಿದೆ. ಬ್ರಿಟನ್ ಮೂಲದ ಫೈಸರ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಲಸಿಕೆಯನ್ನು ಸೌದಿಗೆ ತರಿಸಿ, ನೀಡಲಾಗುತ್ತಿದೆ.
Saudi Arabia on Sunday halted international flights and suspended entry through its land and seaports for at least a week after a new fast-spreading strain of coronavirus appeared in Britain.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm