ಬ್ರೇಕಿಂಗ್ ನ್ಯೂಸ್
21-12-20 09:37 am Mangaluru Correspondent ದೇಶ - ವಿದೇಶ
ಅಬುಧಾಬಿ, ಡಿ.20: ದಿಢೀರ್ ಆರ್ಥಿಕ ಕುಸಿತಕ್ಕೊಳಗಾಗಿ ದಿವಾಳಿಯಾಗಿರುವ ಮಂಗಳೂರು ಮೂಲದ ಖ್ಯಾತ ಉದ್ಯಮಿ ಬಿ.ಆರ್.ಶೆಟ್ಟಿಯವರ ದುಬೈನಲ್ಲಿರುವ ಉದ್ಯಮ ಸಮೂಹವನ್ನು ಕೇವಲ ಒಂದು ಡಾಲರ್ ಮೊತ್ತಕ್ಕೆ ಇಸ್ರೇಲ್ ಮೂಲದ ಕಂಪೆನಿಯೊಂದಕ್ಕೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಕಳೆದ 2019ರ ಡಿಸೆಂಬರ್ ತಿಂಗಳಲ್ಲಿ 2 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ್ದ ಎನ್ ಎಂಸಿ ಹೆಲ್ತ್ ಕೇರ್ ಹಾಸ್ಪಿಟಲ್, ದುಬೈ ಎಕ್ಸ್ ಚೇಂಜ್ ಸೇರಿದಂತೆ ಬಿ.ಆರ್.ಶೆಟ್ಟಿಗೆ ಸೇರಿದ ವಿವಿಧ ಕಂಪನಿಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಕಂಪನಿ ಸಮೂಹ ಒಂದು ಬಿಲಿಯನ್ ಡಾಲರ್ ನಷ್ಟು ಸಾಲ ಹೊಂದಿದೆ ಎನ್ನಲಾಗುತ್ತಿದ್ದು ಕಳೆದ ಒಂದು ವರ್ಷದಿಂದ ಉದ್ಯಮ ಸಂಸ್ಥೆಯ ಸ್ಥಿತಿ ಡೋಲಾಯಮಾನವಾಗಿತ್ತು.
ಅಮೆರಿಕ ಮೂಲದ ಅಡಿಟ್ ಸಂಸ್ಥೆಯೊಂದು ಬಿ.ಆರ್ ಶೆಟ್ಟಿಯ ಕಂಪನಿ ಭಾರೀ ನಷ್ಟದಲ್ಲಿರುವ ಬಗ್ಗೆ ಮತ್ತು ದುಬೈನ ಸೆಂಟ್ರಲ್ ಬ್ಯಾಂಕಿಗೆ ಭಾರೀ ಮೊತ್ತದ ಸಾಲವನ್ನು ಹಿಂತಿರುಗಿಸದಿರುವ ಬಗ್ಗೆ 2019ರಲ್ಲಿ ಮೊದಲ ಬಾರಿಗೆ ವರದಿ ನೀಡಿತ್ತು. ಈ ವರದಿ ಜಾಗತಿಕ ನೆಲೆಯಲ್ಲಿ ಕಂಪನ ಮೂಡಿಸಿದ್ದಲ್ಲದೆ, ಬಿ.ಆರ್.ಶೆಟ್ಟಿ ಎಂಬ ಫೋರ್ಬ್ಸ್ ಪಟ್ಟಿ ಸೇರಿದ್ದ ಜಗತ್ತಿನ ಅತ್ಯಂತ ಸಿರಿವಂತನನ್ನು ನಿಂತಲ್ಲೇ ಭಿಕಾರಿಯಾಗುವಂತೆ ಮಾಡಿದೆ. ತಲೆತಪ್ಪಿಸಿಕೊಂಡು ಓಡಾಡಿದ್ದ ಬಿ.ಆರ್.ಶೆಟ್ಟಿ ಕೊನೆಗೂ ದುಬೈಗೆ ತೆರಳಿದ್ದು ಈಗ ತನ್ನ ಉದ್ಯಮ ಸಮೂಹವನ್ನೇ ಮಾರಾಟ ಮಾಡಲು ನಿಶ್ಚಯಿಸಿದ್ದಾರೆ. ದುಬೈನ ರಾಜವಂಶಸ್ಥರ ಪಾಲುದಾರಿಕೆಯಲ್ಲಿ ಬಿ.ಆರ್.ಶೆಟ್ಟಿ ಉದ್ಯಮ ನಡೆಸುತ್ತಿದ್ದರು. ಉದ್ಯಮದಲ್ಲಿ ಅತಿ ವೇಗವಾಗಿ ಬೆಳೆದು ಜಗತ್ತಿನ ನೂರು ಸಿರಿವಂತರಲ್ಲಿ ಒಬ್ಬರೆಂಬ ಖ್ಯಾತಿಗೂ ಪಾತ್ರರಾಗಿದ್ದರು.
ದುಬೈನಲ್ಲಿ ಸೆಂಟ್ರಲ್ ಬ್ಯಾಂಕ್ ಸೇರಿದಂತೆ ಹಲವು ಆರ್ಥಿಕ ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು. ಈ ಸಾಲ ಪಡೆಯುವುದಕ್ಕೂ ಉದ್ಯಮ ಸಮೂಹದಲ್ಲಿ ಪಾಲುದಾರಿಕೆ ಹೊಂದಿದ್ದ ರಾಜವಂಶಸ್ಥರೇ ಕಾರಣರಾಗಿದ್ದರು. ಆದರೆ, ಯಾವಾಗ ಕಂಪನಿ ಬಗ್ಗೆ ಅಮೆರಿಕದ ಅಡಿಟ್ ಕಂಪನಿಯೊಂದು ಗುಮಾನಿ ವ್ಯಕ್ತಪಡಿಸಿ, ಭಾರೀ ಮೊತ್ತದ ಹಣ ಬ್ಯಾಂಕುಗಳಿಗೆ ನೀಡುವಲ್ಲಿ ಉಳಿಸಿಕೊಂಡಿದ್ದಾರೆಂದು ವರದಿ ನೀಡಿತ್ತೋ ಪಾಲುದಾರಿಕೆ ಹೊಂದಿದ್ದವರು ಕೈಬಿಟ್ಟಿದ್ದಾರೆ. ನಂಬಿಕೆ ಕಳಕೊಂಡವರನ್ನು ದುಬೈನ ಅರಬಿಗಳು ಕೈಬಿಡುತ್ತಾರೆಂಬ ಮಾತಿನಂತೇ ನಡೆದುಕೊಂಡಿದ್ದಾರೆ. ಎರಡು ಬಿಲಿಯನ್ ಡಾಲರ್ ಮಾರುಕಟ್ಟೆ ದರ ಇದ್ದ ಸಂಸ್ಥೆಯ ಮೌಲ್ಯ ಒಮ್ಮೆಲೇ ಕುಸಿದು ಬಿದ್ದಿತ್ತು.
ಈಗ ಬ್ಯಾಂಕ್ ಸಾಲ ಸೇರಿ, ಪಾಲುದಾರಿಕೆಯ ಮೊತ್ತವನ್ನೂ ಖರೀದಿದಾರ ಸಂಸ್ಥೆ ಭರಿಸಬೇಕು. ಇವೆಲ್ಲವನ್ನೂ ಕಳೆದು ಉಳಿಕೆ ಮೊತ್ತ ಶೂನ್ಯ ಆಗಿರುವುದರಿಂದ 40 ವರ್ಷಗಳಲ್ಲಿ ಕಟ್ಟಿ ಬೆಳೆಸಿದ್ದ ಉದ್ಯಮ ಸಮೂಹವನ್ನೇ ನಾಮಕೆವಾಸ್ತೆ ಒಂದು ಡಾಲರ್ ಮೊತ್ತಕ್ಕೆ ಬಿಕರಿ ಮಾಡುತ್ತಿದ್ದಾರೆ ಬಿ.ಆರ್.ಶೆಟ್ಟಿ.
ಇದೇನಿದ್ದರೂ, ಈ ಪರಿಯಲ್ಲಿ ದಿಢೀರ್ ಆಗಿ ಕಟ್ಟಿದ್ದ ಮಹಲು ಕುಸಿದು ಬೀಳಲು ಏನು ಕಾರಣ ಎಂಬುದಕ್ಕೆ ಯಾರಲ್ಲೂ ಸ್ಪಷ್ಟ ಉತ್ತರ ಇಲ್ಲ. ಪಾಲುದಾರರು ಯಾರಿದ್ದರು, ಎಷ್ಟು ಪಾಲುದಾರಿಕೆ ಹೊಂದಿದ್ದರು ಎಂಬುದನ್ನೂ ಬಿ.ಆರ್.ಶೆಟ್ಟಿ ಸ್ಪಷ್ಟಪಡಿಸಿಲ್ಲ. ಹೋಗುವಾಗ ಬತ್ತಲೆ, ಹಿಂತಿರುಗುವಾಗಲೂ ಬತ್ತಲೆ ಎನ್ನುವ ರೀತಿ ಬಾವಗುತ್ತು ರಘುರಾಮ ಶೆಟ್ಟರು (78) ಈಗ ಊರಿಗೆ ಹಿಂತಿರುಗಬೇಕಿದೆ. 1973ರಲ್ಲಿ ಕೇವಲ ಮೆಡಿಕಲ್ ರೆಪ್ರೆಸೆಂಟಿವ್ ಆಗಿ ಬರಿಗೈಲಿ ದುಬೈಗೆ ತೆರಳಿದ್ದ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯವರು. ಉಡುಪಿಯಲ್ಲಿ ಆಗ ಜನಸಂಘದಲ್ಲಿದ್ದು ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು.
ಮೆಡಿಕಲ್ ರೆಪ್ರೆಸೆಂಟ್ ಆಗಿ ದುಬೈನ ಮರಳುಗಾಡಿಗೆ ಎಂಟ್ರಿ ಕೊಟ್ಟಿದ್ದ ಶೆಟ್ಟಿ ಅಲ್ಲಿ ಸಾಧಿಸಿದ್ದು , ಕಟ್ಟಿದ ಉದ್ಯಮ ಸಮೂಹ ಜಗತ್ತೇ ನಿಬ್ಬೆರಗು ಮೂಡಿಸುವಂಥದ್ದು. ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ 100 ಮತ್ತು 140 ನೇ ಕೊನೆಯ ಮಹಡಿಯನ್ನು ಖರೀದಿಸಿದಾಗ ದುಬೈನ ಸಿರಿವಂತರ ಜಗತ್ತು ಕಣ್ಣು ಮಿಟುಕಿಸಿ ನೋಡಿತ್ತು. ಆದರೆ, ಈಗ ಎಲ್ಲವನ್ನೂ ದುಬೈನಲ್ಲೇ ಬಿಟ್ಟು ಶೆಟ್ಟರು ಹಿಂದಡಿ ಇಟ್ಟಿದ್ದು ಅರಬಿಗಳಿಗೆ ಕೈಮುಗಿಯುವ ಸ್ಥಿತಿಗೆ ತಲುಪಿದ್ದಾರೆ. ತಾನೇ ಕಟ್ಟಿದ್ದ ಮಹಲು ತನ್ನೆದುರಲ್ಲೇ ಕುಸಿದು ಬಿದ್ದಿರುವುದನ್ನು ಬಿ.ಆರ್ ಶೆಟ್ಟಿ ನಿಜಕ್ಕೂ ಅರಗಿಸಿ ಕೊಳ್ಳಲು ಸಾಧ್ಯವಿಲ್ಲ.
UAE-based , Indian billionaire BR Shetty's company Finablr Plc, which is getting ready to sell its business to an Israeli-UAE consortium for a shocking Dollar $1. It was only last December the company was valued at $2 billion (Rs 14,700 crore). The company reported more than $1 billion in undisclosed debts in April.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm