ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು ಉಳಿದೆಲ್ಲ ಖಾಯಂ ಸದಸ್ಯ ದೇಶಗಳು ಭಾರತಕ್ಕೆ ಬೆಂಬಲ, ರಷ್ಯಾ, ಫ್ರಾನ್ಸ್, ಅಮೆರಿಕ ಬೆಂಬಲ ಘೋಷಣೆ  

06-05-25 02:45 pm       HK News Desk   ದೇಶ - ವಿದೇಶ

ಕಿಸ್ತಾನ ವಿರುದ್ಧ ಭಾರತ ತೆಗೆದುಕೊಂಡ ಕ್ರಮಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಒಪ್ಪಿಗೆ ಸಿಕ್ಕಿದೆ. ಪಹಲ್ಗಾಮ್ ದಾಳಿ ಎರಡು ರಾಷ್ಟ್ರಗಳ ರಾಜಕೀಯ ಬಿಕ್ಕಟ್ಟಲ್ಲ. ಅಂತಾರಾಷ್ಟ್ರೀಯ ಭಯೋತ್ಪಾದನೆ ಎಂಬ ಭಾರತದ ವಾದಕ್ಕೆ ವಿಶ್ವಸಂಸ್ಥೆಯ 13 ಸದಸ್ಯ ರಾಷ್ಟ್ರಗಳು ಬೆಂಬಲ ನೀಡಿವೆ. 

ನವದೆಹಲಿ, ಮೇ 6 : ಪಾಕಿಸ್ತಾನ ವಿರುದ್ಧ ಭಾರತ ತೆಗೆದುಕೊಂಡ ಕ್ರಮಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಒಪ್ಪಿಗೆ ಸಿಕ್ಕಿದೆ. ಪಹಲ್ಗಾಮ್ ದಾಳಿ ಎರಡು ರಾಷ್ಟ್ರಗಳ ರಾಜಕೀಯ ಬಿಕ್ಕಟ್ಟಲ್ಲ. ಅಂತಾರಾಷ್ಟ್ರೀಯ ಭಯೋತ್ಪಾದನೆ ಎಂಬ ಭಾರತದ ವಾದಕ್ಕೆ ವಿಶ್ವಸಂಸ್ಥೆಯ 13 ಸದಸ್ಯ ರಾಷ್ಟ್ರಗಳು ಬೆಂಬಲ ನೀಡಿವೆ. 

ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಹಾಗೂ ಆ ಮೂಲಕ ನಾಗರಿಕರನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಹೇಳಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ರಾಷ್ಚ್ರಗಳ ಪೈಕಿ ಭಾರತಕ್ಕೆ 13 ರಾಷ್ಟ್ರಗಳು ಬೆಂಬಲ ಘೋಷಿಸಿವೆ. ಅಲ್ಲದೆ, 5 ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಚೀನಾ ಹೊರತುಪಡಿಸಿ ಅಮೆರಿಕ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ರಾಷ್ಟ್ರಗಳು ಭಾರತಕ್ಕೆ ಸಾಥ್​ ನೀಡಿವೆ. 

ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳಾದ ಅಲ್ಜೀರಿಯಾ, ಡೆನ್ಮಾರ್ಕ್‌, ಗಯಾನಾ, ಪನಾಮಾ, ರಿಪಬ್ಲಿಕ್ ಆಫ್ ಕೊರಿಯಾ, ಸಿಯೆರಾ ಲಿಯೋನ್‌, ಸ್ಲೊವೇನಿಯಾ, ಸೊಮಾಲಿಯಾ, ಗ್ರೀಸ್​ ಭಾರತಕ್ಕೆ ಬೆಂಬಲ ನೀಡಿದ್ದು ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಸಂಪೂರ್ಣ ಬೆಂಬಲ ಎಂದಿದ್ದಾರೆ. ‌

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಪಹ್ಲಗಾಮ್ ಉಗ್ರರ ದಾಳಿಯನ್ನು ಖಂಡಿಸಿದ್ದು ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಭಾರತ ಪ್ರವಾಸಲ್ಲಿರುವ ಜಪಾನ್ ರಕ್ಷಣಾ ಸಚಿವರೂ ಭಯೋತ್ಪಾದನೆ ವಿರುದ್ಧ ಸಮರಕ್ಕೆ ಬೆಂಬಲ ನೀಡಿದ್ದಾರೆ.

 The UN Security Council commenced closed-door consultations here on the situation between India and Pakistan, hours after Secretary General Antonio Guterres voiced concern over tensions between the nuclear-armed neighbours being "at their highest in years".