Pak, Website Hacked, Indian Army : ಅಲ್ಲಾ ನಮ್ಮನ್ನು ರಕ್ಷಿಸುತ್ತಾನೆ, ನಿಮ್ಮನ್ನು ಯಾರೂ ರಕ್ಷಣೆ ಮಾಡಲ್ಲ! ಸೈನಿಕರ ಅಸೋಸಿಯೇಶನ್ ವೆಬ್ ಹ್ಯಾಕ್ ಮಾಡಿದ ಉಗ್ರರಿಂದ ಪೋಸ್ಟ್ 

27-04-25 07:38 pm       HK News Desk   ದೇಶ - ವಿದೇಶ

ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಪಾಕಿಸ್ತಾನ ಮೂಲದ ಹ್ಯಾಕರ್ ಗುಂಪು ಭಾರತದ ಸೇನೆಯನ್ನು ಗುರಿಯಾಗಿಸಿ ವೆಬ್ ಸೈಟ್ ಹ್ಯಾಕ್ ಮಾಡಲು ಮುಂದಾಗಿದೆ. ಟೀಮ್ ಇನ್ಸೇನ್ ಪಿಕೆ ಎನ್ನುವ ಹೆಸರಿನಲ್ಲಿ ಹ್ಯಾಕರ್ ಗುಂಪು ಭಾರತದ ಸೇನೆಯ ಕುಟುಂಬಸ್ಥರಿಗೆ ಸಂಬಂಧಪಟ್ಟ ನಾಲ್ಕು ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದೆ.

ನವದೆಹಲಿ, ಎ.27 : ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಪಾಕಿಸ್ತಾನ ಮೂಲದ ಹ್ಯಾಕರ್ ಗುಂಪು ಭಾರತದ ಸೇನೆಯನ್ನು ಗುರಿಯಾಗಿಸಿ ವೆಬ್ ಸೈಟ್ ಹ್ಯಾಕ್ ಮಾಡಲು ಮುಂದಾಗಿದೆ. ಟೀಮ್ ಇನ್ಸೇನ್ ಪಿಕೆ ಎನ್ನುವ ಹೆಸರಿನಲ್ಲಿ ಹ್ಯಾಕರ್ ಗುಂಪು ಭಾರತದ ಸೇನೆಯ ಕುಟುಂಬಸ್ಥರಿಗೆ ಸಂಬಂಧಪಟ್ಟ ನಾಲ್ಕು ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದೆ. ಅಲ್ಲದೆ, ಪ್ರಚೋದನಕಾರಿ ಸಂದೇಶಗಳನ್ನು ಹಾಕಿದ್ದು, ಅಲ್ಲಾ ನಮ್ಮನ್ನು ರಕ್ಷಿಸುತ್ತಾನೆ, ನಿಮ್ಮನ್ನು ಯಾರೂ ರಕ್ಷಣೆ ಮಾಡಲ್ಲ. ಹಿಂದುಗಳನ್ನು ಕೊಲ್ಲಿ, ಮುಸ್ಲಿಮರನ್ನು ಗೌರವಿಸಿ ಎಂದು ಬರೆಯಲಾಗಿದೆ.

ಇಂಡಿಯನ್ ಆರ್ಮಿ ನರ್ಸಿಂಗ್ ಕಾಲೇಜಿನ ವೆಬ್ ಸೈಟ್ ಹ್ಯಾಕ್ ಮಾಡಿ, ಅದರಲ್ಲಿ ಉರ್ದು ಮತ್ತು ಇಂಗ್ಲಿಷ್ ನಲ್ಲಿ ಎರಡು ಪ್ಯಾರಾ ಬರೆಯಲಾಗಿದೆ. ನಮ್ಮ ಧರ್ಮ, ಪದ್ಧತಿಗಳು ನಮ್ಮನ್ನು ಶ್ರೇಷ್ಠರನ್ನಾಗಿಸಿವೆ. ಎರಡು ದೇಶ ಸಿದ್ಧಾಂತ ಬರೀಯ ಸಿದ್ಧಾಂತ ಆಗಿರದೆ ಅದು ನಿಜವೇ ಆಗಿದೆ. ನಾವು ಮುಸ್ಲಿಮರು, ನೀವು ಹಿಂದುಗಳು. ಅಲ್ಲಾ ನಮ್ಮೊಂದಿಗಿದ್ದಾನೆ. ನಿಮ್ಮ ಧರ್ಮವು ನಿಮ್ಮನ್ನು ರಕ್ಷಣೆ ಮಾಡೋದಿಲ್ಲ. ನಿಮ್ಮ ಸಾವಿಗೆ ಅದೇ ಕಾರಣವಾಗುತ್ತದೆ. ನಾವು ನಿಮಗಿಂತ ಸುಪೀರಿಯರ್ ಮತ್ತು ಪವರ್ ಫುಲ್ ಆಗಿದ್ದೇವೆಂದು ಬರೆಯಲಾಗಿದೆ. 

ಇದೇ ರೀತಿಯ ಸಂದೇಶವನ್ನು ಆರ್ಮಿ ಅಸೋಸಿಯೇಶನ್ ಸಂಬಂಧಿಸಿದ ಮತ್ತೆರಡು ವೆಬ್ ಸೈಟ್ ಗಳನ್ನೂ ಹ್ಯಾಕ್ ಮಾಡಿ, ಮುಖ ಪುಟದಲ್ಲಿ ಹಾಕಲಾಗಿದೆ. ಈ ಬಗ್ಗೆ ಎನ್ ಡಿಟಿವಿ ವರದಿ ಮಾಡಿದ್ದು, ಆದರೆ ಈ ವೆಬ್ ಸೈಟ್ ಗಳಿಗೂ ಭಾರತೀಯ ಸೇನೆಗೂ ಯಾವುದೇ ಲಿಂಕ್ ಇಲ್ಲ. ಸೈನಿಕರು, ಅವರ ಕುಟುಂಬಸ್ಥರು, ಅಸೋಸಿಯೇಶನ್ ಸಂಬಂಧಿಸಿದ ವೆಬ್ ಸೈಟ್ ಇದಾಗಿದೆ. ಈ ಹ್ಯಾಕ್ ನಿಂದಾಗಿ ಭಾರತೀಯ ಸೇನೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಎನ್ ಡಿಡಿವಿ ವರದಿ ಮಾಡಿದೆ.

Now after the Pahalgam terror attack, Pakistan continues to target Indian websites. Pakistani groups continue to target the Indian Armed Forces related entities. 4 websites have been hacked so far. The official website of the Army College of Nursing in Punjab was hacked on Friday. Now 4 more websites have been hacked is what we're learning. This of course comes in the aftermath of the Pehilam terror attack. The hackers have been traced back to Pakistan, and 4 websites now additionally have been hacked.