Pahalgam terror attack: ಉಗ್ರರು ಕನಸಿನಲ್ಲೂ ಊಹಿಸಲಾಗದ ಶಿಕ್ಷೆ ಕೊಡ್ತೇವೆ, ಒಬ್ಬೊಬ್ಬ ಉಗ್ರನನ್ನು ಹುಡುಕಿ ಹೊಡೆಯುತ್ತೇವೆ ; ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ವಾರ್ನಿಂಗ್ 

24-04-25 04:21 pm       HK News Desk   ದೇಶ - ವಿದೇಶ

ಉಗ್ರರು ಭಾರತದ ಆತ್ಮದ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಹಿಂದೆ ಇರೋರನ್ನು ನಾವು ಸುಮ್ಮನೆ ಬಿಡಲ್ಲ. ಉಗ್ರರು ಕನಸಿನಲ್ಲೂ ಊಹಿಸಲಾಗದ ರೀತಿಯ ಶಿಕ್ಷೆ ಕೊಡ್ತೇವೆ. ಒಬ್ಬೊಬ್ಬ ಉಗ್ರನನ್ನ ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ, ಎ.24 : ಉಗ್ರರು ಭಾರತದ ಆತ್ಮದ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಹಿಂದೆ ಇರೋರನ್ನು ನಾವು ಸುಮ್ಮನೆ ಬಿಡಲ್ಲ. ಉಗ್ರರು ಕನಸಿನಲ್ಲೂ ಊಹಿಸಲಾಗದ ರೀತಿಯ ಶಿಕ್ಷೆ ಕೊಡ್ತೇವೆ. ಒಬ್ಬೊಬ್ಬ ಉಗ್ರನನ್ನ ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. 

ಪ್ರಧಾನಿ ಮೋದಿ ಅವರು ಬಿಹಾರದ ಮಧುಬನಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದ ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭದಲ್ಲಿ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಮ್ಮ ದೇಶದ ಪ್ರಜೆಗಳನ್ನು ಉಗ್ರರು ಹತ್ಯೆ ಮಾಡಿರುವ ವಿಚಾರ ಪ್ರಸ್ತಾಪಿಸಿದರು. ಉಗ್ರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದರು. 

ಉಗ್ರರು ಮುಗ್ಧ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ನಾವು ಪ್ರತಿಯೊಬ್ಬ ಉಗ್ರರನ್ನು ಟ್ರ್ಯಾಕ್ ಮಾಡಿ ಹೊಡೆದುರುಳಿಸುತ್ತೇವೆ. ಪಾಕಿಸ್ತಾನಕ್ಕೂ ತಕ್ಕ ಶಾಸ್ತಿ ಮಾಡುತ್ತೇವೆ. ಇಡೀ ದೇಶ ಪೆಹಲ್ಗಾಮ್ ದಾಳಿಯಿಂದ ನೋವಿನಲ್ಲಿದೆ. ಭಯೋತ್ಪಾದನೆಗೆ ಬಳಕೆಯಾದ ನೆಲವನ್ನು ಕಿತ್ತೊಗೆಯುತ್ತೇವೆ. ಭಯೋತ್ಪಾದನೆಯನ್ನು ಶಿಕ್ಷಿಸದೇ ಬಿಡುವುದಿಲ್ಲ. ಪ್ರತಿಯೊಬ್ಬ ಉಗ್ರರನ್ನು ಹುಡುಕಿ, ಹುಡುಕಿ ಹೊಡೆಯುತ್ತೇವೆ ಎಂದು ಮೋದಿ ಹೇಳಿದ್ದಾರೆ. 

ಪ್ರವಾಸಕ್ಕೆ ಎಂದು ಪಹಲ್ಗಾಮ್ ಪ್ರದೇಶಕ್ಕೆ ಹೋಗಿದ್ದ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಪ್ರಜೆಗಳ ಮೇಲೆ ಪಾಪಿ ಉಗ್ರರು ದಿಢೀರ್ ಗನ್ ಹಿಡಿದು ನುಗ್ಗಿ ಶೂಟ್ ಮಾಡಿ ಹತ್ಯೆ ಮಾಡಿದ್ದರು. ಪಾಪಿ ಉಗ್ರರ ಈ ಕೃತ್ಯ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಇದೀಗ ಪ್ರಧಾನಿ ಮೋದಿ ಪಾಪಿ ಪಾಕಿಸ್ತಾನದ ಉಗ್ರರನ್ನು ಯಾರೂ ಊಹಿಸದ ರೀತಿ ಹೊಡೆದು ಹಾಕುತ್ತೀವಿ ಎಂದು ಹೇಳಿದ್ದಾರೆ. ಈ ಮೂಲಕ ಉಗ್ರರ ವಿರುದ್ಧ ಅತಿ ಕಠಿಣ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಆಗಿದೆ.

Prime Minister Narendra Modi issued a stern warning to terrorists on Thursday, pledging to "identify, track, and punish" those responsible for the Pahalgam terror attack that claimed 28 lives.Addressing his first public gathering since the attack, PM Modi expressed the nation's grief and assured decisive action against the perpetrators.