ಬ್ರೇಕಿಂಗ್ ನ್ಯೂಸ್
23-04-25 05:16 pm HK News Desk ದೇಶ - ವಿದೇಶ
ನವದೆಹಲಿ, ಎ.23 : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯ ರೂವಾರಿ, ಲಷ್ಕರ್ ಇ-ತೈಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಆಪ್ತನಾದ ಸೈಫುಲ್ಲಾ ಖಾಲಿದ್ ಎಂದು ಗುರುತಿಸಲಾಗಿದೆ. ಲಷ್ಕರ್ ಸಂಘಟನೆಯ ಹಿರಿಯ ಕಮಾಂಡರ್ ಖಾಲಿದ್ ಅಲಿಯಾಸ್ ಸೈಫುಲ್ಲಾ ಕಸೂರಿ ಈ ಹತ್ಯಾಕಾಂಡದ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲದ ಇತರ ಇಬ್ಬರು ಕಾರ್ಯಕರ್ತರು ಈ ದಾಳಿಯನ್ನು ಸಂಘಟಿಸಿದ್ದಾರೆ ಎಂದು ನಂಬಲಾಗಿದೆ. ನಿಷೇಧಿತ ಎಲ್ಇಟಿಯ ಅಂಗಸಂಸ್ಥೆ "ದಿ ರೆಸಿಸ್ಟೆನ್ಸ್ ಫ್ರಂಟ್" ಸದಸ್ಯರು ಎಂದು ನಂಬಲಾದ ಈ ದಾಳಿಕೋರರು ಹಿಂದು ಪ್ರವಾಸಿಗರನ್ನು ಗುರಿಯಾಗಿಸಿ ಮಧ್ಯಾಹ್ನ 2:30 ರ ಸುಮಾರಿಗೆ ದಾಳಿ ನಡೆಸಿದ್ದಾರೆ. ಭಯೋತ್ಪಾದಕರ ಕ್ರೂರ ದಾಳಿಯು ದೇಶಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿದೆ. ಸೌದಿ ಅರೇಬಿಯಾಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜತಾಂತ್ರಿಕ ಭೇಟಿಯನ್ನು ಮೊಟಕುಗೊಳಿಸಿ ದೆಹಲಿಗೆ ಮರಳಿದ್ದು ಸಂಪುಟ ಸದಸ್ಯರ ತುರ್ತು ಸಭೆ ಕರೆದಿದ್ದಾರೆ.
ಗುಪ್ತಚರ ಮೂಲಗಳ ಪ್ರಕಾರ, ಐದರಿಂದ ಆರು ಉಗ್ರರು ದಾಳಿಯಲ್ಲಿ ಭಾಗಿಯಾಗಿದ್ದಾರೆ, ಇದರಲ್ಲಿ ಇತ್ತೀಚೆಗೆ ನಿಯಂತ್ರಣ ರೇಖೆ (LoC) ಆಚೆಯಿಂದ ಕಣಿವೆಗೆ ನುಸುಳಿದ ಹಲವರು ಸೇರಿದ್ದಾರೆ ಎನ್ನಲಾಗಿದೆ.
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಎಲ್ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಅವರ ನಿಕಟ ಸಹಚರರೇ ಈ ಕೃತ್ಯ ನಡೆಸಿದ್ದಾರೆ. ಮುಂಬೈ ದಾಳಿಯ ರೂವಾರಿ ತಹಾವುರ್ ರಾಣಾನನ್ನು ಅಮೆರಿಕದಿಂದ ಬಂಧಿಸಿ ಕರೆತಂದು ವಿಚಾರಣೆ ನಡೆಸುತ್ತಿರುವಾಗಲೇ ಲಷ್ಕರ್ ಉಗ್ರರಿಂದ ಭಯೋತ್ಪಾದಕ ದಾಳಿಯಾಗಿದೆ. ತಹಾವುರ್ ರಾಣಾ, ಹಫೀಜ್ ಸಯೀದ್ ಆಪ್ತನಾಗಿದ್ದು ಭಾರತದ ತನಿಖಾ ಏಜನ್ಸಿಗಳ ಮುಂದೆ ಪಾಕಿಸ್ತಾನದ ರಹಸ್ಯಗಳನ್ನು ಬಾಯಿಬಿಟ್ಟಿರುವ ಸಾಧ್ಯತೆಯಿದೆ. ಎನ್ಐಎ ಮತ್ತು ಮಿಲಿಟರಿ ಗುಪ್ತಚರ ಏಜನ್ಸಿಗಳು ರಾಣಾನನ್ನು ತನಿಖೆ ನಡೆಸುತ್ತಿರುವಾಗಲೇ ಈ ದಾಳಿ ನಡೆಸಿರುವುದು ನೋಡಿದರೆ ರಾಣಾ ಬಂಧನಕ್ಕೆ ಪ್ರತಿಯಾಗಿ ಈ ದಾಳಿ ನಡೆದಿದೆಯೇ ಎನ್ನುವ ಶಂಕೆ ಮೂಡಿದೆ.
ಪಾಕಿಸ್ತಾನದಲ್ಲಿ ದ್ವೇಷ ಭಾಷಣಕ್ಕೆ ಕುಖ್ಯಾತನಾಗಿರುವ ಸೈಫುಲ್ಲಾ ಎರಡು ತಿಂಗಳ ಹಿಂದೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಂಗನ್ಪುರಕ್ಕೆ ಬಂದಿದ್ದನಂತೆ. ಅಲ್ಲಿ ಪಾಕಿಸ್ತಾನ ಸೇನೆಯ ದೊಡ್ಡ ಬೆಟಾಲಿಯನ್ ಇದೆ. ಪಾಕಿಸ್ತಾನ ಸೇನೆಯ ಕರ್ನಲ್ ಜಾಹಿದ್ ಜರೀನ್ ಖಟ್ಟಕ್ ಎಂಬಾತ, ಸೈಫುಲ್ಲಾನನ್ನು ಜಿಹಾದಿ ಭಾಷಣ ಮಾಡಲು ಅಲ್ಲಿಗೆ ಕರೆಸಿದ್ದ ಎನ್ನಲಾಗಿದೆ. ಅಲ್ಲಿ ಅವನು ಪಾಕಿಸ್ತಾನ ಸೇನೆಯನ್ನ ಭಾರತದ ವಿರುದ್ಧ ಕೆರಳುವಂತೆ ಪ್ರಚೋದಿಸಿದ್ದನಂತೆ. ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದು ಬಳಿಕವೇ ISIನಿಂದ ‘ರೆಸಿಸ್ಟಂಟ್ ಫ್ರಂಟ್’ ಎನ್ನುವ ಮತ್ತೊಂದು ಉಗ್ರವಾದಿ ಗುಂಪು ರಚಿಸಲಾಗಿತ್ತು. ‘ರೆಸಿಸ್ಟಂಟ್ ಫ್ರಂಟ್’ಗೆ ಸೈಫುಲ್ಲಾ ಖಾಲೀದ್ ನೇತೃತ್ವ ವಹಿಸಿಕೊಂಡಿದ್ದ.
ಆರ್ಟಿಕಲ್ 370 ರದ್ದು ಮಾಡಿರುವ ವಿಚಾರವನ್ನು ಸೈಫುಲ್ಲಾ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುವ ಸಭೆಗಳಲ್ಲಿ ಪ್ರಸ್ತಾಪಿಸಿ, 2026ರ ಫೆ.2ರೊಳಗೆ ಕಾಶ್ಮೀರವನ್ನ ವಶ ಪಡಿಸಿಕೊಳ್ತೇವೆ.. ನಮ್ಮ ಮುಜಾಹಿದ್ದೀನ್ ದಾಳಿಯನ್ನ ಇನ್ನಷ್ಟು ತೀವ್ರಗೊಳಿಸುತ್ತೇವೆ, ಫೆಬ್ರವರಿ, 2026 ರ ವೇಳೆಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ಹೇಳಿದ್ದನೆಂದು ವರದಿಯಾಗಿದೆ.
Hours after the haunting Pahalgam terror attack, The Resistance Front (TRF) has claimed responsibility for the same. This Pakistan-backed terror group has taken at least 26 lives in Jammu and Kashmir just weeks ahead of the Amarnath Yatra.
23-04-25 08:04 pm
Bangalore Correspondent
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
23-04-25 05:16 pm
HK News Desk
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm