Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ; ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ, ತಂದೆ- ಮಗ ಸೇರಿ ಮೂವರು ಸಾವು, ಪೊಲೀಸರ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ, ಕಾಯ್ದೆ ಜಾರಿಗೆ ಬಿಡಲ್ಲ ಎಂದ ಸಿಎಂ ಮಮತಾ ಬ್ಯಾನರ್ಜಿ  

12-04-25 09:01 pm       HK News Desk   ದೇಶ - ವಿದೇಶ

ವಕ್ಫ್ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಪ್ರತಿಭಟನೆ ಹಿಂಸಾರೂಪಕ್ಕಿಳಿದಿದ್ದು, ತಂದೆ- ಮಗ ಸೇರಿ ಮೂವರು ಉದ್ರಿಕ್ತರಿಂದ ಚೂರಿ ಇರಿತಕ್ಕೊಳಗಾಗಿ ಮತ್ತು ಪೊಲೀಸರ ಗುಂಡಿನೇಟಿಗೆ ಸಾವಿಗೀಡಾಗಿದ್ದಾರೆ.

ಕೊಲ್ಕತ್ತಾ, ಎ.12: ವಕ್ಫ್ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಪ್ರತಿಭಟನೆ ಹಿಂಸಾರೂಪಕ್ಕಿಳಿದಿದ್ದು, ತಂದೆ- ಮಗ ಸೇರಿ ಮೂವರು ಉದ್ರಿಕ್ತರಿಂದ ಚೂರಿ ಇರಿತಕ್ಕೊಳಗಾಗಿ ಮತ್ತು ಪೊಲೀಸರ ಗುಂಡಿನೇಟಿಗೆ ಸಾವಿಗೀಡಾಗಿದ್ದಾರೆ. ಶನಿವಾರ ಬೆಳಗ್ಗಿನಿಂದಲೇ ಜನರು ಬೀದಿಗಿಳಿದು ಹಿಂಸೆಗೆ ಇಳಿದಿದ್ದು, ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಲು ಯತ್ನಿಸಿದ್ದಾರೆ. ಅಲ್ಲದೆ, ಹಿಂಸಾನಿರತರನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಘಟನೆ ಸಂಬಂಧಿಸಿ ಪೊಲೀಸರು ನೂರಾರು ಮಂದಿಯನ್ನು ಬಂಧಿಸಿದ್ದಾರೆ.

ಇದೇ ವೇಳೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿವ ಮಮತಾ ಬ್ಯಾನರ್ಜಿ ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ವಕ್ಫ್ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇವರ ಹೇಳಿಕೆಯನ್ನು ಖಂಡಿಸಿ ರಾಜ್ಯದ ಕೆಲವು ಕಡೆಗಳಲ್ಲಿ ಬಿಜೆಪಿಯಿಂದಲೂ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆದಿದೆ. ಸಂಸೇರ್ ಗಂಜ್ ಬಳಿಯ ಜಾಫರಾಬಾದ್ ಪ್ರದೇಶದಲ್ಲಿ ಮನೆಯ ಎದುರಲ್ಲೇ ತಂದೆ- ಮಗನನ್ನು ಚೂರಿಯಿಂದ ಇರಿದು ಕೊಲ್ಲಲಾಗಿದೆ. ಇದೇ ಪ್ರದೇಶದ ಧುಲಿಯಾನ್ ಎಂಬಲ್ಲಿ ಪೊಲೀಸರಿಂದ ಪ್ರಯೋಗಿಸಲ್ಪಟ್ಟ ಗುಂಡಿನೇಟು ಪಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಬಿಎಸ್ಎಫ್ ಯೋಧರನ್ನು ನಿಯೋಜನೆ ಮಾಡಲಾಗಿದ್ದು ಅಶ್ರುವಾಯು ಸಿಡಿಸಿ ಉದ್ರಿಕ್ತರನ್ನು ಹತೋಟಿಗೆ ತರುತ್ತಿದ್ದಾರೆ.  

Calcutta HC orders CAPF deployment in Bengal' Murshidabad as Waqf clashes  kill 3 | Latest News India - Hindustan Times

Calcutta HC orders deployment of central forces in Murshidabad over clashes  against Waqf Act - The Economic Times

LIVE! HC orders deployment of central forces in Murshidabad - Rediff.com  news

LIVE! HC orders deployment of central forces in Murshidabad - Rediff.com  news

Protests over Waqf Act in Murshidabad turn violent, prohibitory orders  imposed | Kolkata News - The Indian Express

Bengal anti-Waqf Act stir violence: How a rumour sparked violence during  protest in Murshidabad - India Today

Anti-Waqf Act rally turns violent in Tripura

वक्फ कानून के खिलाफ रैली, एक अफवाह और हिंसा... बंगाल के मुर्शिदाबाद में  कैसे बिगड़ा माहौल - Rally against Waqf law, a rumour and violence how  atmosphere deteriorated in Bengal ...

ಪೊಲೀಸರು 118 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದ್ದು ಬಂಧಿತರ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ಜನರು ಸೋಶಿಯಲ್ ಮೀಡಿಯಾದಲ್ಲಿ ಬರುವ ಪ್ರಚೋದನೆಗಳಿಗೆ ಕಿವಿಗೊಡಬೇಡಿ. ಶಾಂತಿ ಕಾಪಾಡಿ ಎಂದು ಎಡಿಜಿಪಿ ಜಾವೇದ್ ಶಾಹೀಮ್ ಹೇಳಿಕೆ ನೀಡಿದ್ದಾರೆ. ಸಿಎಂ ಬ್ಯಾನರ್ಜಿ ಅವರೂ ಜನರಲ್ಲಿ ಶಾಂತಿ ಕಾಪಾಡಲು ಕರೆ ನೀಡಿದ್ದು ಹಿಂಸೆ ಮಾಡಬೇಡಿ, ನಾವು ಕಾನೂನು ಜಾರಿಗೆ ತರಲು ಬಿಡುವುದಿಲ್ಲ. ಧರ್ಮ, ರಾಜಕೀಯ ಕಾರಣಕ್ಕೆ ಜನರು ಬೀದಿಗೆ ಬರಬೇಡಿ. ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಜನರ ವಿರೋಧಕ್ಕೆ ಅವರೇ ಉತ್ತರ ನೀಡಬೇಕು ಎಂದಿದ್ದಾರೆ.

ಶುಕ್ರವಾರ ಮುಸ್ಲಿಂ ಬಾಹುಳ್ಯದ ಜಿಲ್ಲೆಗಳಾದ ಮುರ್ಶಿದಾಬಾದ್, ಮಾಲ್ಡಾ, ಸೌತ್ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿತ್ತು. ಹಲವಾರು ವಾಹನಗಳು, ಪೊಲೀಸರ ಜೀಪು, ವ್ಯಾನ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. ರಸ್ತೆ ತಡೆ ಮಾಡಿ ಭದ್ರತಾ ಸಿಬಂದಿಗಳ ಮೇಲೂ ದಾಳಿ ನಡೆಸಲಾಗಿದೆ. ಇದೇ ವೇಳೆ ಬಿಜೆಪಿ ರಾಜ್ಯದ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಸರಕಾರವನ್ನು ಟೀಕಿಸಿದೆ. ಪ್ರತಿಭಟನೆ ಹತ್ತಿಕ್ಕಲು ಸಾಧ್ಯವಾಗದಿದ್ದರೆ ಕೇಂದ್ರದ ಸಹಾಯ ಕೇಳಿ. ಜಿಹಾದಿಗಳು ಸರಕಾರ ಮತ್ತು ಆಡಳಿತವನ್ನು ಕೈಗೆ ತೆಗೆದುಕೊಂಡಿದ್ದು, ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡಿದ್ದಾರೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಹಿಂಸಾಗ್ರಸ್ತ ಘಟನೆಗೆ ಭಯೋತ್ಪಾದಕರ ಬೆಂಬಲವಿದ್ದು, ಈ ಬಗ್ಗೆ ಎನ್ಐಎ ತನಿಖೆ ನಡೆಸಬೇಕೆಂದು ಸುವೇಂದು ಅಧಿಕಾರಿ ಕೇಂದ್ರ ಮತ್ತು ಹೈಕೋರ್ಟಿಗೆ ದೂರು ನೀಡಿದ್ದಾರೆ. ಹೈಕೋರ್ಟ್ ಕೇಂದ್ರದ ಭದ್ರತಾ ಪಡೆಗಳನ್ನು ನಿಯೋಜಿಸಿ ಹಿಂಸೆಯನ್ನು ನಿಯಂತ್ರಣಕ್ಕೆ ತರುವಂತೆ ಸೂಚನೆ ನೀಡಿದೆ. ಇದೇ ವೇಳೆ, ಹಿಂಸಾಪೀಡಿತ ಜಿಲ್ಲೆಗಳಲ್ಲಿ ಇಂಟರ್ನೆಟ್ ನಿರ್ಬಂಧಿಸಲಾಗಿದ್ದು, ಅಲ್ಲಿ ಏನಾಗುತ್ತಿದೆ ಎನ್ನುವ ವಿಚಾರ ಹೊರಗೆ ಬರುತ್ತಿಲ್ಲ ಎಂದೂ ಬಿಜೆಪಿ ನಾಯಕರು ಟೀಕಿಸಿದ್ದಾರೆ.

Three deaths have been reported in Waqf-related violence at Samserganj in West Bengal's Murshidabad, news agency PTI quoted police as saying on Saturday, shortly after which the Calcutta high court ordered the deployment of the central forces in the clash-hit district.