ಬ್ರೇಕಿಂಗ್ ನ್ಯೂಸ್
06-04-25 06:39 pm HK News Desk ದೇಶ - ವಿದೇಶ
ನವದೆಹಲಿ, ಎ.6: ಸಂಸತ್ತಿನ ಎರಡೂ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಸೂದೆಗೆ ಅಂಕಿತ ಹಾಕಿದ್ದಾರೆ. ಇದರ ಬೆನ್ನಲ್ಲೇ ದೇಶದ ಹಲವು ಕಡೆಗಳಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.
ಇದೇ ವೇಳೆಗೆ, ದೇಶದಲ್ಲಿ ಒಟ್ಟು ಎಷ್ಟು ವಕ್ಫ್ ಹೆಸರಿನ ಆಸ್ತಿಗಳಿವೆ, ಅವುಗಳ ವಿಸ್ತೀರ್ಣ ಎಷ್ಟು ಎನ್ನುವ ಚರ್ಚೆ ಆರಂಭಗೊಂಡಿದೆ. 2025ರ ಮಾರ್ಚ್ ವೇಳೆಗೆ ದೇಶಾದ್ಯಂತ 8.72 ಲಕ್ಷ ವಕ್ಫ್ ಆಸ್ತಿಗಳಿರುವುದಾಗಿ ವಕ್ಫ್ ಮಂಡಳಿಯೇ ಮಾಹಿತಿ ನೀಡಿದೆ. ಇದಲ್ಲದೆ, ಇವುಗಳ ಒಟ್ಟು ವಿಸ್ತೀರ್ಣ 38 ಲಕ್ಷ ಎಕರೆಗಿಂತಲೂ ಹೆಚ್ಚು ಎಂಬುದಾಗಿ ವಕ್ಫ್ ಮ್ಯಾನೇಜ್ಮೆಂಟ್ ಸಿಸ್ಟಮ್ ಆಫ್ ಇಂಡಿಯಾ (ಡಬ್ಲ್ಯೂಎಎಂಎಸ್ಐ) ಪೋರ್ಟಲ್ನಲ್ಲಿ ಈ ಮಾಹಿತಿ ನೀಡಲಾಗಿದೆ.
ರಾಜ್ಯವಾರು ನೋಡಿದರೆ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವಕ್ಫ್ ಆಸ್ತಿಗಳಿವೆ. ದೇಶದ ಅತಿ ದೊಡ್ಡ ರಾಜ್ಯದಲ್ಲಿರುವ ಸುನ್ನಿ ವಕ್ಫ್ ಮಂಡಳಿ ಹೆಸರಿನಲ್ಲಿ 2.17 ಲಕ್ಷ ವಕ್ಫ್ ಆಸ್ತಿ ಇದೆ. ಆದರೆ ಇದರ ಒಟ್ಟು ವಿಸ್ತೀರ್ಣದ ಅಂಕಿ - ಅಂಶಗಳು ಲಭ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ 80,480 ವಕ್ಫ್ ಆಸ್ತಿಗಳಿದ್ದರೆ, ಪಂಜಾಬ್ನಲ್ಲಿ 75,965, ತಮಿಳುನಾಡಿನಲ್ಲಿ 66,092 ಮತ್ತು ಕರ್ನಾಟಕದಲ್ಲಿ 62,830 ವಕ್ಫ್ ಆಸ್ತಿಗಳಿರುವುದಾಗಿ ಮಾಹಿತಿ ನೀಡಲಾಗಿದೆ. ಅತಿ ಹೆಚ್ಚು ಆಸ್ತಿಗಳ ಪೈಕಿ ನಮ್ಮ ರಾಜ್ಯ ಐದನೇ ಸ್ಥಾನದಲ್ಲಿವೆ.
ರಾಜ್ಯವಾರು ಲಭ್ಯ ವಕ್ಫ್ ಆಸ್ತಿಗಳ ವಿಸ್ತೀರ್ಣ ನೋಡಿದರೆ, ಮಧ್ಯಪ್ರದೇಶದಲ್ಲಿ ಗರಿಷ್ಠ 6.79 ಲಕ್ಷ ಎಕರೆ ವಕ್ಫ್ ಭೂಮಿ ಇದೆ. ತಮಿಳುನಾಡಿನಲ್ಲಿ 6.55 ಲಕ್ಷ ಎಕರೆ ಇದ್ದು, ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 5.96 ಲಕ್ಷ ಎಕರೆ ವಕ್ಫ್ ಜಮೀನಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 8,72,328 ಆಸ್ತಿಗಳಿದ್ದು ಅವುಗಳ ಒಟ್ಟು ವಿಸ್ತೀರ್ಣ 38,16,291.788 (38.16 ಲಕ್ಷ ) ಎಕರೆ ವ್ಯಾಪ್ತಿಯನ್ನು ಹೊಂದಿದೆ.
After two days of intense debate totalling over 25 hours in both House, Parliament early Friday cleared the Waqf Amendment Bill. It will now go to President Droupadi Murmu for her nod before it becomes an Act.
12-04-25 11:09 pm
Bangalore Correspondent
Annapoorneshwari Nagar Police Inspector, A.V....
11-04-25 11:10 pm
Sameer MD, Vidoe Deleted, Dharmasthala: ಸೌಜನ್...
11-04-25 10:27 pm
Bangalore High court, Birthday, suspend: ಬೆಂಗ...
11-04-25 03:45 pm
Yatnal, Muslim, Prophet Muhammad Paigambar: ಪ...
11-04-25 03:28 pm
12-04-25 09:01 pm
HK News Desk
Indian Mujahideen, Yasin Bhatkal: ಹೈದರಾಬಾದ್ ಬ...
10-04-25 09:10 pm
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
12-04-25 10:13 pm
Mangalore Correspondent
Mangalore Kambala, Dk Shivakumar: ಮುಂದಿನ ವರ್ಷ...
12-04-25 09:43 pm
Dinesh Gundurao, Mangalore: ಸರಕಾರಿ ಆಸ್ಪತ್ರೆಗಳ...
12-04-25 05:30 pm
Mangalore Subrahmanya train, Timings: ಎ.12ರಿಂ...
11-04-25 02:49 pm
Mangalore, Kolya, accident: ತೆಂಗಿನ ಮರದಿಂದ ಕೆಳ...
11-04-25 10:35 am
12-04-25 10:52 pm
Mangalore Correspondent
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am