ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನಾ ವಾಟ್ಸಪ್ ನಿಂದ ಅಲ್ಲ ; ಔರಂಗಜೇಬ್ ಸಮಾಧಿ ಕೆಡಹುವ ವಿಚಾರದಲ್ಲಿ ರಾಜ್ ಠಾಕ್ರೆ ಪ್ರತಿಕ್ರಿಯೆ

31-03-25 09:34 pm       HK News Desk   ದೇಶ - ವಿದೇಶ

ಔರಂಗಜೇಬ್ ಸಮಾಧಿ ತೆರವು ಮಾಡಬೇಕೆಂದು ಹಿಂದುತ್ವವಾದಿ ಸಂಘಟನೆಗಳು ಧ್ವನಿ ಎತ್ತಿರುವಾಗಲೇ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಖಾರ ಪ್ರತಿಕ್ರಿಯೆ ನೀಡಿದ್ದು ನಮ್ಮ ಜನರು ಇತಿಹಾಸವನ್ನು ಪುಸ್ತಕದ ಅಧ್ಯಯನದಿಂದ ಕಲಿತುಕೊಳ್ಳಬೇಕೇ ವಿನಾ ವಾಟ್ಸಪ್ ಯುನಿವರ್ಸಿಟಿಯಿಂದ ಅಲ್ಲ ಎಂದು ಕೆಣಕಿದ್ದಾರೆ.

ಮುಂಬೈ, ಮಾ.31: ಔರಂಗಜೇಬ್ ಸಮಾಧಿ ತೆರವು ಮಾಡಬೇಕೆಂದು ಹಿಂದುತ್ವವಾದಿ ಸಂಘಟನೆಗಳು ಧ್ವನಿ ಎತ್ತಿರುವಾಗಲೇ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಖಾರ ಪ್ರತಿಕ್ರಿಯೆ ನೀಡಿದ್ದು ನಮ್ಮ ಜನರು ಇತಿಹಾಸವನ್ನು ಪುಸ್ತಕದ ಅಧ್ಯಯನದಿಂದ ಕಲಿತುಕೊಳ್ಳಬೇಕೇ ವಿನಾ ವಾಟ್ಸಪ್ ಯುನಿವರ್ಸಿಟಿಯಿಂದ ಅಲ್ಲ ಎಂದು ಕೆಣಕಿದ್ದಾರೆ.

ವಾಟ್ಸಪ್ ಇತಿಹಾಸದಿಂದ ಪ್ರೇರಿತರಾದವರು ಔರಂಗಜೇಬ್ ಸಮಾಧಿಯನ್ನು ಕೆಡವಲು ಹೇಳುತ್ತಿದ್ದಾರೆ. ಆದರೆ ನೈಜ ಇತಿಹಾಸವನ್ನು ಪುಸ್ತಕ ಓದಿ ತಿಳಿದುಕೊಳ್ಳಬೇಕು. ನಾವು ಆಧುನಿಕ ಕಾಲದ ನೈಜ ವಿಚಾರಗಳನ್ನು ಮರೆಯುತ್ತಿದ್ದೇವೆ. ಛಾವಾ ಸಿನಿಮಾದಿಂದಾಗಿ ಹಿಂದುಗಳು ಎಚ್ಚತ್ತುಕೊಂಡರೆ ಏನೂ ಉಪಯೋಗವಿಲ್ಲ. ವಿಕ್ಕಿ ಕೌಶಲ್ ನಿಂದಾಗಿ ಸಂಭಾಜಿ ಮಹಾರಾಜ್ ತ್ಯಾಗ ಮಾಡುವುದರ ಬಗ್ಗೆಯಾಗಲೀ, ಅಕ್ಷಯ್ ಖನ್ನಾ ತೋರಿಸಿದ ಔರಂಗಜೇಬನ ಕುರಿತಾಗಲೀ ನೈಜ ಇತಿಹಾಸ ತಿಳಿಯಲು ಮುಂದಾಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜಾಪುರ ಆದಿಲ್ ಶಾಹಿಗಳ ನೇನಾಧಿಪತಿಯಾಗಿದ್ದ ಅಫ್ಜಲ್ ಖಾನ್ ನನ್ನು ಶಿವಾಜಿ ಮಹಾರಾಜರ ಅಣತಿಯಂತೆ ಪ್ರತಾಪಗಢ ಕೋಟೆಯ ಬಳಿ ಸಮಾಧಿ ಮಾಡಲಾಗಿತ್ತು ಎಂದು ರಾಜ್ ಠಾಕ್ರೆ ಹೇಳಿದ್ದಾರೆ. ಸಂಭಾಜಿ ನಗರ್ ಜಿಲ್ಲೆಯಲ್ಲಿರುವ ಔರಂಗಜೇಬನ ಸಮಾಧಿಯನ್ನು ಕೆಡವಿ ಹಾಕಬೇಕು ಎಂದು ಹಿಂದು ಸಂಘಟನೆಗಳು ಅಭಿಯಾನ ಮಾಡಿರುವಾಗಲೇ ಹಿಂದುತ್ವವಾದಿ ರಾಜ್ ಠಾಕ್ರೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಔರಂಗಜೇಬ ಗುಜರಾತಿನ ದಾಹೋದ್ ನಲ್ಲಿ ಜನಿಸಿದ್ದ. ಆದರೆ ನಮ್ಮ ಇತಿಹಾಸಕಾರರು ರಾಜಕೀಯ ಲಾಭಕ್ಕಾಗಿ ಅದನ್ನು ತಿರುಚಿದ್ದಾರೆ. ಒಂದು ದೇಶವು ಕೇವಲ ಧರ್ಮದ ಆಧಾರದಲ್ಲಿ ಹೋದರೆ ಮುನ್ನಡೆಯಲು ಸಾಧ್ಯವಿಲ್ಲ. ಆಧುನೀಕರಣದ ಜೊತೆಗೆ ಹೆಜ್ಜೆ ಹಾಕುತ್ತಿರುವ ಟರ್ಕಿಯನ್ನು ನಾವು ಉದಾಹರಣೆಯಾಗಿ ನೋಡಬೇಕು ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

Maharashtra Navnirman Sena (MNS) chief Raj Thackeray on Sunday condemned attempts to incite communal tensions over Aurangzeb's tomb and urged people not to view history through the lens of caste and religion. Addressing his annual Gudi Padwa rally at Shivaji Park in Mumbai, Thackeray cautioned against misleading historical narratives and WhatsApp forwards, asserting that history should be studied from credible sources rather than social media.