ಬ್ರೇಕಿಂಗ್ ನ್ಯೂಸ್
29-03-25 01:27 pm HK News Desk ದೇಶ - ವಿದೇಶ
ಬ್ಯಾಂಕಾಕ್, ಮಾ 29: ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿ ನಿನ್ನೆ ಭೀಕರ ಭೂಕಂಪದಿಂದಾಗಿ ಅವಘಡ ಸಂಭವಿಸಿದ 24 ಗಂಟೆಗಳ ಒಳಗೆ ಇತ್ತ ಅಫ್ಘಾನಿಸ್ತಾನದಲ್ಲಿ ಕೂಡ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಶನಿವಾರ ಅಫ್ಘಾನಿಸ್ತಾನದಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ . ಬೆಳಿಗ್ಗೆ 5.16 ಕ್ಕೆ (IST) 180 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು NCS ವರದಿ ಮಾಡಿದೆ. ಶನಿವಾರ ಬೆಳಿಗ್ಗೆ ಅಫ್ಘಾನಿಸ್ತಾನದಲ್ಲಿ ಗಮನಾರ್ಹ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ದಾಖಲಾದ ಒಂದು ದಿನದ ನಂತರ ಈ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಸುಮಾರು ಬೆಳಿಗ್ಗೆ 5:16 IST ಕ್ಕೆ ಕಂಪನ ಸಂಭವಿಸಿದೆ ಎಂದು ವರದಿ ಮಾಡಿದೆ, ಇದರ ಕೇಂದ್ರಬಿಂದು 180 ಕಿಲೋಮೀಟರ್ ಆಳದಲ್ಲಿದೆ. ಭೂಕಂಪದ ನಿರ್ದೇಶಾಂಕಗಳನ್ನು 36.50° N ಅಕ್ಷಾಂಶ ಮತ್ತು 71.12° E ರೇಖಾಂಶ ಎಂದು ನೀಡಲಾಗಿದೆ. ಈ ಘಟನೆಯು ಈ ಪ್ರದೇಶದಲ್ಲಿ ನಡೆಯುತ್ತಿರುವ ಭೂಕಂಪನ ಚಟುವಟಿಕೆಯನ್ನು ಎತ್ತಿ ತೋರಿಸುತ್ತದೆ, ಅಂತಹ ನೈಸರ್ಗಿಕ ವಿದ್ಯಮಾನಗಳ ಮೇಲ್ವಿಚಾರಣೆ ಮತ್ತು ಸಿದ್ಧತೆಯ ಮಹತ್ವವನ್ನು ಒತ್ತಿಹೇಳುತ್ತದೆ.
ನಿನ್ನೆ ಮ್ಯಾನ್ಮಾರ್, ಥೈಲ್ಯಾಂಡ್ ಮಾತ್ರವಲ್ಲದೇ ಭಾರತದ ಭೂಮಿ ಕೂಡ ಕಂಪಿಸಿತ್ತು. ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್ನ ಸಾಗೈಂಗ್ ಪ್ರದೇಶ ಎಂದು ಹೇಳಲಾಗಿದ್ದು, ಇದು ಭೂಮಿಯಿಂದ ಸುಮಾರು 10 ಕಿಲೋಮೀಟರ್ ಕೆಳಗೆ ಇತ್ತು.
ಮೊದಲ ಭೂಕಂಪದ ತೀವ್ರತೆ 7.5 ಮತ್ತು ಎರಡನೆಯದರಲ್ಲಿ 7 ಎಂದು ಅಳೆಯಲಾಯಿತು. ಥೈಲ್ಯಾಂಡ್ನಲ್ಲಿ, ಭೂಮಿಯು ತುಂಬಾ ಕಂಪಿಸಿತು, ಜನರು ಭಯಭೀತರಾಗಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ
ಮ್ಯಾನ್ಮಾರ್ನಲ್ಲಿ ಈ ಭೂಕಂಪಗಳಿಂದ ಈವರೆಗೆ ಕನಿಷ್ಠ 150 ಜನರು ಸಾವನ್ನಪ್ಪಿದ್ದಾರೆ ಮತ್ತು 730 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ. ಆದ್ರೆ ನೆನ್ನೆ ತಡರಾತ್ರಿ ಮತ್ತೆ ಭೂಕಂಪ ಸಂಭವಿಸಿದೆ. ಭಾರತೀಯ ಕಾಲಮಾನದ ಪ್ರಕಾರ, ಮಾ. 28ರ ಮಧ್ಯರಾತ್ರಿ 12.30ರ ಸುಮಾರಿಗೆ ಅಲ್ಲಿ ಭೂಮಿ ಕಂಪಿಸಿದೆ. ಅದರಿಂದ ಮತ್ತಷ್ಟು ಕಟ್ಟಡಗಳು ಧರೆಗುರುಳಿವೆ. ಮತ್ತಷ್ಟು ಜನರು ನಾಪತ್ತೆಯಾಗಿದ್ದಾರೆ. ಮೃತರ ಸಂಖ್ಯೆ 1000ಕ್ಕೆ ಏರಿಕೆಯಾಗಿದ್ದು, 2000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮಾ. 28ರ ಮಧ್ಯಾಹ್ನ ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ, 12.30ಕ್ಕೆ ಸಂಭವಿಸಿದ್ದ ಭೂಕಂಪದಿಂದಾಗಿ ನೂರಾರು ಜನರು ಸಾವಿಗೀಡಾಗಿ, ಸಾವಿರಾರು ಜನರು ಗಾಯಗೊಂಡಿದ್ದಾರೆ. ಹಲವಾರು ಕಟ್ಟಡಗಳು ನೆಲಸಮವಾಗಿವೆ. ರಸ್ತೆ, ವಿದ್ಯುತ್, ನೀರು ಮುಂತಾದ ಮೂಲಸೌಕರ್ಯಗಳೆಲ್ಲಾ ಹಾಳಾಗಿ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಇದರ ನಡುವೆಯೇ ತಡರಾತ್ರಿ ಮತ್ತೊಂದು ಭೂಕಂಪ ಸಂಭವಿಸಿದ್ದು ಅಲ್ಲಿನ ಸರ್ಕಾರವನ್ನು ಹಾಗೂ ಜನರನ್ನು ಮತ್ತಷ್ಟು ಕಂಗೆಡಿಸಿದೆ.
ಮ್ಯಾನ್ಮಾರ್ ನಲ್ಲಿ ಮಾ. 28ರ ಮಧ್ಯರಾತ್ರಿಯಲ್ಲಿ ಮತ್ತೊಂದು ಭೂಕಂಪ ಸಂಭವಿಸಿದ್ದರೂ ಎಲ್ಲವೂ ಅಲ್ಲಿಗೇ ಮುಗಿದಂತೆ ಕಾಣುತ್ತಿಲ್ಲ. ಹಲವಾರು ಪ್ರಾಂತ್ಯಗಳಲ್ಲಿ ಭೂಮಿ ಮತ್ತೆ ಮತ್ತೆ ನಡುಗಿದ ಅನುಭವ ಆಗುತ್ತಿದೆ. ಅದರಿಂದ ಜನರು ಭಯಭೀತರಾಗಿದ್ದು ಯಾವಾಗ ಏನು ಸಂಭವಿಸುವುದೋ ಎಂಬ ಆತಂಕದಲ್ಲಿದ್ದಾರೆ ಎಂದು ಕೆಲವು ಸುದ್ದಿ ಜಾಲತಾಣಗಳು ವರದಿ ಮಾಡಿವೆ. ಮಾ. 28ರ ಮಧ್ಯಾಹ್ನ ಹಾಗೂ ಮಧ್ಯರಾತ್ರಿ ಸಂಭವಿಸಿದ ಎರಡು ಭೂಕಂಪಗಳ ಹೊರತಾಗಿಯೂ ಮ್ಯಾನ್ಮಾರ್ ನ ಅಲ್ಲಲ್ಲಿ ಲಘು ಭೂಕಂಪಗಳು ಸಂಭವಿಸಿದ್ದು ಒಟ್ಟು 9 ಬಾರಿ ಭೂಕಂಪನವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಮ್ಯಾನ್ಮಾರ್ಗೆ ಸಹಾಯ ಹಸ್ತ ಚಾಚಿದ ಭಾರತ ;
ಇನ್ನು ಸಂತ್ರಸ್ತವಾಗಿರುವ ಮ್ಯಾನ್ಮಾರ್ಗೆ ಭಾರತ ನೆರವಿನ ಹಸ್ತ ಚಾಚಿದೆ. ತಾತ್ಕಾಲಿಕ ಟೆಂಟ್ಗಳು, ಮಲಗುವ ಹಾಸಿಗೆ, ಹೊದಿಕೆಗಳು, ಆಹಾರ, ನೀರು, ನೈರ್ಮಲ್ಯ ಕಿಟ್, ಸೋಲಾರ್ ಲೈಟ್, ಜನರೇಟರ್ ಸೆಟ್ ಹಾಗೂ ಔಷಧಗಳ ನೆರವನ್ನು ಭಾರತ ನೀಡಿದೆ. ಈಗಾಗಲೇ ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯುಸೇನೆಯ C-130-J ವಿಮಾನ ವಿಮಾನದಲ್ಲಿ ಮ್ಯಾನ್ಮಾರ್ಗೆ ಕಳುಹಿಸಲಾಗುತ್ತಿದೆ.
ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ನಲ್ಲಿ ಪ್ರಬಲ ಭೂಕಂಪನದ ಬೆನ್ನಲೆ ಪ್ರಧಾನಿ ನರೇಂದ್ರ ಮೋದಿ ಸಹಾಯ ಹಸ್ತ ಚಾಚುವ ಭರವಸೆ ನೀಡಿದ್ದರು. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು.
An earthquake with a magnitude of 4.7 on the Richter Scale hit Afghanistan on Saturday morning. The impact on affected regions is uncertain at this time.
NCS reported that the earthquake took place at 5.16 am (IST) at a depth of 180 km. The death count from a massive earthquake in Myanmar has jumped to 1,002, with 2,376 people injured, the country's ruling junta said Saturday.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am