ಬ್ರೇಕಿಂಗ್ ನ್ಯೂಸ್
23-03-25 02:40 pm HK News Desk ದೇಶ - ವಿದೇಶ
ನವದೆಹಲಿ, ಮಾ.23: ದೆಹಲಿ ಹೈಕೋರ್ಟ್ ಜಡ್ಜ್ ಯಶವಂತ್ ವರ್ಮಾ ಮನೆಯಲ್ಲಿ ಅಪಾರ ಪ್ರಮಾಣದ ನಗದು ಹಣ ಸುಟ್ಟು ಹೋಗಿರುವುದು ಪತ್ತೆಯಾಗಿದೆ. ಆದರೂ 15 ಕೋಟಿಗೂ ಹೆಚ್ಚು ನಗದು ಹಣ ಸಿಕ್ಕಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಸುಪ್ರೀಂ ಕೋರ್ಟ್ ಗೆ 25 ಪುಟಗಳ ವರದಿ ಸಲ್ಲಿಸಿದ್ದಾರೆ.
ಅಲ್ಲದೆ, ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ವಿಸ್ತೃತ ತನಿಖೆ ನಡೆಸುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ದೆಹಲಿ ಹೈಕೋರ್ಟ್ ಸಿಜೆ ನೀಡಿರುವ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ಶನಿವಾರ ತಡರಾತ್ರಿ ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.
ಆದರೆ ಈ ವರದಿಯಲ್ಲಿರುವ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಆರೋಪಿತ ಜಡ್ಜ್ ಯಶವಂತ್ ವರ್ಮಾ ನಿರಾಕರಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಮತ್ತು ನಗದು ಪತ್ತೆಯಾಗಿದೆ ಎಂದು ಹೇಳಲಾದ ಕೊಠಡಿ ಔಟ್ಹೌಸ್ ಆಗಿತ್ತು, ನ್ಯಾಯಾಧೀಶರು ಮತ್ತು ಕುಟುಂಬ ವಾಸಿಸುವ ಮುಖ್ಯ ಕಟ್ಟಡವಲ್ಲ ಎಂದವರು ಹೇಳಿಕೊಂಡಿದ್ದಾರೆ.
ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಆ ಸ್ಟೋರ್ ರೂಂನಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ. ಆಪಾದಿತ ನಗದು ನಮಗೆ ಸೇರಿದೆ ಎಂಬ ವಿಷಯವನ್ನು ಖಂಡಿಸುತ್ತೇನೆ. ಈ ಹಣವನ್ನು ನಾವು ಇಟ್ಟುಕೊಂಡಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣ ಅಸಂಬದ್ಧ. ಕ್ವಾರ್ಟರ್ಸ್ ಬಳಿ ಅಥವಾ ಔಟ್ಹೌಸ್ ಗೆ ಯಾರಾದರೂ ಮುಕ್ತವಾಗಿ ಪ್ರವೇಶಿಸಬಹುದಾಗಿದೆ. ಪತ್ರಿಕೆಗಳು ಹಾಗೂ ಮಾಧ್ಯಮಗಳು ದೋಷಾರೋಪಣೆ ಮಾಡುವ ಮುನ್ನ ಸ್ವಲ್ಪ ವಿಚಾರಣೆ ನಡೆಸಬೇಕು ಎಂದು ನ್ಯಾಯಮೂರ್ತಿ ವರ್ಮಾ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗೆ ಸೇರಿರುವ ಮನೆಯಲ್ಲಿ ಪತ್ತೆಯಾದ ಸುಟ್ಟ ಕರೆನ್ಸಿ ನೋಟುಗಳು ಮತ್ತು ಇತರರ ದಾಖಲೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಸಹ ತನಿಖಾ ವರದಿಯ ಜೊತೆಗೆ ಸಲ್ಲಿಸಲಾಗಿದೆ. ಆದರೆ ಆರೋಪಿತ ನ್ಯಾಯಾಧೀಶ, ನನ್ನ ವಿರುದ್ಧ ಹೊರಿಸಲಾದ ಆಧಾರರಹಿತ ಆರೋಪಗಳು ಮತ್ತು ಪತ್ತೆಯಾದ ನಗದು ನನಗೆ ಸೇರಿದ್ದು ಎಂಬುದು ಕೇವಲ ಊಹಾಪೋಹ ಅಷ್ಟೇ ಎಂದು ಹೇಳಿ ಆರೋಪದಿಂದ ಮುಕ್ತರಾಗಲು ಯತ್ನಿಸಿದ್ದಾರೆ.
Delhi High Court judge Yashwant Varma has strongly denounced the allegations in the currency recovery row at his official residence here and said no cash was ever placed in the storeroom either by him or any of my family members.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am