ಬ್ರೇಕಿಂಗ್ ನ್ಯೂಸ್
20-03-25 06:07 pm HK News Desk ದೇಶ - ವಿದೇಶ
ಮುಂಬೈ, ಮಾ.20 : ಬಹು ನಿರೀಕ್ಷೆಯ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸಲು ಮಹಾರಾಷ್ಟ್ರ ಸರಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಮಹಾ ಸಿಎಂ ದೇವೇಂದ್ರ ಫಡ್ನವಿಸ್, ವಿಧಾನ ಪರಿಷತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಇದರಿಂದ ಕೊಂಕಣ ರೈಲ್ವೇಯ ಹಣಕಾಸು ಸ್ಥಿತಿಯನ್ನು ಉತ್ತಮ ಪಡಿಸಲು ಸಾಧ್ಯವಿದೆ ಎಂದು ಫಡ್ನವಿಸ್ ಹೇಳಿದ್ದಾರೆ.
ಪ್ರಸಕ್ತ ಕೊಂಕಣ ರೈಲ್ವೇಯು ಭಾರತೀಯ ರೈಲ್ವೇ ಅಧೀನದಲ್ಲಿದ್ದರೂ, ಇತರೇ ಸಾರ್ವಜನಿಕ ರಂಗದ ಕಂಪನಿಗಳಿದ್ದ ರೀತಿ ಪ್ರತ್ಯೇಕ ಸಂಸ್ಥೆಯಾಗಿದೆ. ಮಹಾರಾಷ್ಟ್ರ ಮೇಲ್ಮನೆಯಲ್ಲಿ ಬಿಜೆಪಿ ಶಾಸಕ ಪ್ರವೀಣ್ ದರೇಕರ್ ಕೇಳಿದ ಪ್ರಶ್ನೆಗೆ, ಸಿಎಂ ಫಡ್ನವಿಸ್ ಈ ಮಾಹಿತಿ ನೀಡಿದ್ದು ಮಹಾರಾಷ್ಟ್ರ ಸರಕಾರವು ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಸಂವಹನ ನಡೆಸಲಿದೆ ಎಂದು ಹೇಳಿದ್ದಾರೆ.
ಕೊಂಕಣ ರೈಲ್ವೇಯು ಆರ್ಥಿಕವಾಗಿ ಹೀನ ಸ್ಥಿತಿಯಲ್ಲಿರುವುದರಿಂದ ಡಬಲ್ ಟ್ರ್ಯಾಕ್ ಮಾಡುವುದಾಗಲೀ, ಭೂಕುಸಿತ ಅಪಾಯ
ಇರುವಲ್ಲಿ ತಡೆಗೋಡೆ ಕಟ್ಟುವ ವಿಷಯದಲ್ಲಾಗಲೀ ಮುಂದೆ ಹೋಗುತ್ತಿಲ್ಲ. ಈ ಭಾಗದ ರೈಲ್ವೇ ಅಭಿವೃದ್ಧಿ ಬಗ್ಗೆ ಕೇಂದ್ರ ಸರಕಾರದ ಜೊತೆಗೆ ಬಹಳಷ್ಟು ಬಾರಿ ಮಾತುಕತೆ ನಡೆಸಲಾಗಿತ್ತು. ಇದಕ್ಕೆಲ್ಲ ಭಾರತೀಯ ರೈಲ್ವೇ ಜೊತೆಗೆ ವಿಲೀನಗೊಳಿಸುವುದೇ ಉತ್ತರ ಎಂದು ರೈಲ್ವೇ ಸಚಿವರು ಹೇಳಿದ್ದರು ಎಂಬುದಾಗಿ ಸಿಎಂ ತಿಳಿಸಿದ್ದಾರೆ.
ಇದಲ್ಲದೆ, ಕೊಂಕಣ ರೈಲ್ವೇ ವಿಲೀನಕ್ಕೆ ಈಗಾಗಲೇ ಕೇರಳ, ಕರ್ನಾಟಕ, ಗೋವಾ ಸರಕಾರಗಳು ತಮ್ಮ ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಸರಕಾರ ಕೂಡಲೇ ಈ ಕುರಿತಾಗಿ ಮುಂದಿನ ಪ್ರಕ್ರಿಯೆ ನಡೆಸಬೇಕು. ಆದರೆ ಈ ಭಾಗಕ್ಕೆ ಕೊಂಕಣ ರೈಲ್ವೇ ಎಂದೇ ಹೆಸರನ್ನು ಉಳಿಸಿಕೊಳ್ಳಬೇಕು ಎಂಬುದು ನಮ್ಮ ಬೇಡಿಕೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ನಮ್ಮ ಬೇಡಿಕೆಯನ್ನು ಒಪ್ಪಿದ್ದಾರೆ. ವಿಲೀನ ಪ್ರಕ್ರಿಯೆ ಬಳಿಕ ಈ ಭಾಗದಲ್ಲಿ ಡಬಲ್ ಟ್ರ್ಯಾಕ್ ಸೇರಿದಂತೆ ರೈಲ್ವೇ ಸ್ವೇಶನ್ ಆಧುನೀಕರಣ, ಅಪಘಾತ ತಡೆಗೆ ಹೊಸ ತಂತ್ರಜ್ಞಾನ ಅಳವಡಿಕೆ ಆಗಲಿದೆ ಎಂದು ಫಡ್ನವಿಸ್ ಹೇಳಿದ್ದಾರೆ.
The Maharashtra government will give its consent to the merger of Konkan Railway Corporation Ltd with the Indian Railways, Chief Minister Devendra Fadnavis announced in the legislative council.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm