Case against Orry at Vaishno Devi: ವೈಷ್ಣೋದೇವಿ ಮಂದಿರ ತಪ್ಪಲಿನಲ್ಲಿ ಡ್ರಗ್ಸ್ ಪಾರ್ಟಿ ; ಬಾಲಿವುಡ್ ನಟ- ನಟಿಯರ ವಿರುದ್ಧ ಎಫ್ಐಆರ್, ಧಾರ್ಮಿಕ ಭಾವನೆ ಅಗೌರವ ಸಹಿಸಲ್ಲ ಎಂದ ಜಮ್ಮು ಪೊಲೀಸರು

17-03-25 09:43 pm       HK News Desk   ದೇಶ - ವಿದೇಶ

ಜಮ್ಮು ಕಾಶ್ಮೀರದ ವೈಷ್ಣೋದೇವಿ ಮಂದಿರದ ಬಳಿಯ ತಪ್ಪಲಿನಲ್ಲಿ ಬಾಲಿವುಡ್ ನಟ- ನಟಿಯರು ಡ್ರಗ್ಸ್ ಪಾರ್ಟಿ ಮಾಡಿರುವ ಬಗ್ಗೆ ಜಮ್ಮು ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.

ನವದೆಹಲಿ, ಮಾ.17: ಜಮ್ಮು ಕಾಶ್ಮೀರದ ವೈಷ್ಣೋದೇವಿ ಮಂದಿರದ ಬಳಿಯ ತಪ್ಪಲಿನಲ್ಲಿ ಬಾಲಿವುಡ್ ನಟ- ನಟಿಯರು ಡ್ರಗ್ಸ್ ಪಾರ್ಟಿ ಮಾಡಿರುವ ಬಗ್ಗೆ ಜಮ್ಮು ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಬಾಲಿವುಡ್ಡಿನ ಫೇಮಸ್ ಇನ್ ಫ್ಲುವೆನ್ಸರ್, ಓರ್ರಿ ಎಂದೇ ಹೆಸರಾಗಿರುವ ಓರ್ಹಾನ್ ಅವಾತ್ರಮಣಿ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಮ್ಮು ಪೊಲೀಸರು ನೆಲದ ಕಾನೂನು ರಕ್ಷಣೆ ಮತ್ತು ಧಾರ್ಮಿಕ ಭಾವನೆಗಳಿಗೆ ಅಗೌರವ ತೋರಿಸಿದರೆ ಸಹಿಸುವುದಿಲ್ಲ. ಪವಿತ್ರ ಜಾಗದಲ್ಲಿ ಡ್ರಗ್ಸ್, ಆಲ್ಕೋಹಾಲ್ ಸೇವನೆ ಮಾಡಿದರೆ ಕಠಿಣ ಕಾನೂನು ಖಚಿತ ಎಂಬ ಸಂದೇಶ ರವಾನಿಸಿದ್ದೇವೆ ಎಂದು ಹೇಳಿದ್ದಾರೆ.

Jammu-Kashmir: FIR Against Social Media Influence Orry And Others For  Drinking Alcohol At Mata Vaishno Devi Base Camp

ಕತ್ರಾ ಪೊಲೀಸ್ ಠಾಣೆಯಲ್ಲಿ ಮಾರ್ಚ್ 15ರಂದು ದೂರು ದಾಖಲಾಗಿದ್ದು, ಅದರ ಬೆನ್ನಲ್ಲೇ ನಾವು ಕ್ರಮ ಜರುಗಿಸಿದ್ದೇವೆ. ವೈಷ್ಣೋದೇವಿ ಯಾತ್ರೆ ಆರಂಭಗೊಳ್ಳುವ ಕತ್ರಾ ತಪ್ಪಲಿನ ಹೊಟೇಲಿನಲ್ಲಿ ಮದ್ಯ ಸೇವನೆ ಮಾಡಿದ್ದರು. ತಂಡದಲ್ಲಿ ಆರು ಮಂದಿ ಭಾರತೀಯರು ಮತ್ತು ಇನ್ನೊಬ್ಬ ರಷ್ಯನ್ ಪ್ರವಾಸಿಗ ಇದ್ದರು. ಓರ್ಹಾನ್ ಅವಾತ್ರಮಣಿ, ದರ್ಶನ್ ಸಿಂಗ್, ಪಾರ್ಥ್ ರೈನಾ, ರಿತಿಕ್ ಸಿಂಗ್, ರಾಶಿ ದತ್ತಾ, ರಕ್ಷಿತಾ ಭೋಗಾಲ್, ಶಗುನ್ ಕೋಹ್ಲಿ ಮತ್ತು ರಷ್ಯ ಮೂಲದ ಅನಾಸ್ತಸಿಲಾ ಅರ್ಜಾಮ್ ಸ್ಕಿನಾ ಅವರು ಮದ್ಯ-ಡ್ರಗ್ಸ್ ಸೇವನೆ, ನಾನ್ ವೆಜ್ ಬಳಕೆಗೆ ನಿಷೇಧ ಇದ್ದರೂ ಪಾರ್ಟಿ ಮಾಡಿದ್ದಾರೆ. ವೈಷ್ಣೋದೇವಿ ಯಾತ್ರಾ ಸ್ಥಳದಲ್ಲಿ ಇಂತಹ ಅಗೌರವ ನಾವು ಒಪ್ಪುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ಪ್ರವಾಸಿಗರಿಗೆ ಸಂದೇಶ ನೀಡುವುದಕ್ಕಾಗಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಓರಿ ಬಾಲಿವುಡ್ಡಿನ ಹೆಸರಾಂತ ಸೆಲೆಬ್ರಿಟಿಯಾಗಿದ್ದು, ಜೊತೆಗಿದ್ದವರು ಕೂಡ ನಟ- ನಟಿಯರಾಗಿದ್ದಾರೆ. ಬಾಲಿವುಡ್ ಮಂದಿ ಇದೇ ಜಾಗದಲ್ಲಿ ಪಾರ್ಟಿಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಗ್ಗೆ ಕಠಿಣ ಸಂದೇಶ ರವಾನಿಸಲು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.

Police said that alcohol and non-vegetarian diet is not allowed inside Cottage Suite as it is strictly prohibited at divine places like Mata Vaishno devi temple.