ಬ್ರೇಕಿಂಗ್ ನ್ಯೂಸ್
24-02-25 10:14 pm HK News Desk ದೇಶ - ವಿದೇಶ
ನವದೆಹಲಿ, ಫೆ.24: ಸೋಲೆನ್ನುವುದು ಗೆಲುವಿನ ವಿರೋಧಿಯಲ್ಲ, ಗೆಲುವಿನ ಮೆಟ್ಟಿಲು ಎನ್ನುವ ಮಾತು ಇದೆ. ಕೆಲವರ ಸಕ್ಸಸ್ ಸ್ಟೋರಿಯನ್ನು ನೋಡಿದರೆ, ಈ ಮಾತು ಸತ್ಯವೆಂದೇ ಹೇಳಬೇಕು. ಹರ್ಯಾಣದ ಯುವಕನೊಬ್ಬ ಸರ್ಕಾರಿ ಕೆಲಸ ಗಿಟ್ಟಿಸಬೇಕೆಂದು ಸಿಕ್ಕ ಸಿಕ್ಕ ಪರೀಕ್ಷೆಗಳನ್ನೆಲ್ಲ ಬರೆದಿದ್ದ. ಬರೋಬ್ಬರಿ 35 ಪರೀಕ್ಷೆಗಳನ್ನು ಕಟ್ಟಿಯೂ ಪಾಸ್ ಆಗಲಿಲ್ಲ. ಕಬ್ಬಿಣದ ಕಡಲೆಯೆಂದೇ ಪರಿಗಣಿಸಲ್ಪಟ್ಟ ಯುಪಿಎಸ್ಸಿ ಪರೀಕ್ಷೆಗಳನ್ನೂ ಬರೆಯತೊಡಗಿದ್ದ. ಆದರೆ, ಬರೆಯುತ್ತ ಬರೆಯುತ್ತ ಅಸಾಧ್ಯವಾದ್ದನ್ನೇ ಸಾಧಿಸಬೇಕೆಂದು ಸಾಧನೆ ಮಾಡಿಯೇಬಿಟ್ಟಿದ್ದ.
ಹರ್ಯಾಣದ ಸಿರ್ಸಾ ಜಿಲ್ಲೆಯ ವಿಜಯವರ್ಧನ್ ಸಕ್ಸಸ್ ಸ್ಟೋರಿಯಿದು. ಹಿಸ್ಸಾರ್ ನಲ್ಲಿ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿದ್ದ ವಿಜಯವರ್ಧನ್, ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡಲೆಂದು ದೆಹಲಿಗೆ ತೆರಳಿದ್ದ. ಅಲ್ಲಿರುವಾಗಲೇ ಬೇರೆ ಬೇರೆ ಸರಕಾರಿ ಕೆಲಸದ ಹುದ್ದೆಗಳನ್ನು ಗಿಟ್ಟಿಸಲು ಪರೀಕ್ಷೆ ಬರೆಯತೊಡಗಿದ್ದ. ಆರ್ಬಿಐ, ಇಸ್ರೋ ಸೇರಿದಂತೆ ವಿವಿಧ ಸಂಸ್ಥೆಗಳ ಎಕ್ಸಾಮನ್ನೂ ಬರೆದಿದ್ದ. 2014ರಲ್ಲಿ ಮೊದಲ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ. ಹಲವು ಪ್ರಯತ್ನಗಳ ಬಳಿಕ 2018ರಲ್ಲಿ ಕಡೆಗೂ ಯುಪಿಎಸ್ಸಿ ಪರೀಕ್ಷೆಯನ್ನು ತೇರ್ಗಡೆಯಾಗಿದ್ದು, ಅಖಿಲ ಭಾರತ ಮಟ್ಟದಲ್ಲಿ 104ನೇ ರ್ಯಾಂಕ್ ಬಂದಿತ್ತು. ಆದರೆ ನೂರಕ್ಕಿಂತ ಶ್ರೇಣಿ ಮೇಲೆ ಹೋಗಿದ್ದರಿಂದ ಐಎಎಸ್ ಅಧಿಕಾರಿಯಾಗಲು ಅವಕಾಶ ಸಿಗಲಿಲ್ಲ. ಐಪಿಎಸ್ ಅಧಿಕಾರಿ ಆಗಬಹುದೆಂದು ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ಅದರಂತೆ, ಐಪಿಎಸ್ ಅಧಿಕಾರಿಯಾಗಿ ವಿಜಯವರ್ಧನ್ ಸೇವೆಗೆ ಸೇರಿಕೊಂಡರೂ ಆಡಳಿತ ಸೇವೆಯ ಛಲಗಾರಿಕೆ ಬಿಡಲಿಲ್ಲ. ಮತ್ತೆ ಯುಪಿಎಸ್ಸಿ ಪರೀಕ್ಷೆ ಬರೆಯತೊಡಗಿದ್ದು, 2021ರಲ್ಲಿ ಎರಡನೇ ಬಾರಿಗೆ ತೇರ್ಗಡೆಗೊಂಡು 70ರ ಶ್ರೇಣಿಯ ಒಳಗಡೆ ಪಾಸ್ ಆಗಿದ್ದ. ಆಮೂಲಕ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿಕೊಂಡಿದ್ದಲ್ಲದೆ, ಮನಸ್ಸು ಮಾಡಿದರೆ ಅಸಾಧ್ಯವಾಗಿದ್ದನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಸೋತೆವೆಂದು ಯಾವತ್ತೂ ಎದೆಗುಂದಬಾರದು, ಮತ್ತೆ ತಪ್ಪನ್ನು ತಿದ್ದಿಕೊಂಡು ಇನ್ನಷ್ಟು ಹೆಚ್ಚಿನ ಶ್ರಮ ಹಾಕಬೇಕು ಎಂದು ಹೇಳುತ್ತಾರೆ.
ವಿಜಯವರ್ಧನ್ ಪ್ರತಿ ಬಾರಿಯೂ ತನ್ನಿಂದಾದ ತಪ್ಪುಗಳನ್ನು ಪಟ್ಟಿ ಮಾಡುತ್ತಿದ್ದರು. ಮುಂದಿನ ಬಾರಿ ಆ ತಪ್ಪು ಆಗದಂತೆ ನೋಡಿಕೊಳ್ಳುತ್ತಿದ್ದರು. ಪ್ರತಿ ಪರೀಕ್ಷೆಯ ಬಳಿಕವೂ ತನ್ನ ನಿರ್ವಹಣೆ ಬಗ್ಗೆ ತಾನೇ ಮೌಲ್ಯಮಾಪನ ಮಾಡಿಕೊಳ್ಳುತ್ತಿದ್ದರು. ಹೆಚ್ಚಿನ ಮಂದಿ ಒಂದೆರಡು ಪ್ರಯತ್ನದ ಬಳಿಕ ಯುಪಿಎಸ್ಸಿ ತನ್ನಿಂದಾಗದು ಎಂದು ದೂರ ಉಳಿಯುತ್ತಾರೆ. ಅಂಥವರಿಗೆ ವಿಜಯವರ್ಧನ್ ಸಾಧನೆ ಪ್ರೇರಣೆ ನೀಡುವಂಥದ್ದು. ಛಲ ಇಟ್ಟುಕೊಂಡು ಪ್ರಯತ್ನಿಸಿದರೆ ಯಾವುದನ್ನೂ ಸಾಧಿಸಬಹುದು ಎನ್ನುವುದು ತೋರಿಸುತ್ತದೆ.
Union Public Service Commission or UPSC is considered arguably the toughest exam to crack in India. And the stories of those who can do it are always very inspiring. Another such story is that of a man from Haryana who was unable to pass any government job but finally succeeded and passed the UPSC examination after failing other exams 35 times. As the proverb goes “failure is not the opposite of success; it is a part of success," Haryana’s Vijay Wardhan is the perfect example of it. He was initially selected as an IPS officer in UPSC CSE but now, he is an IAS officer.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm