ಬ್ರೇಕಿಂಗ್ ನ್ಯೂಸ್
21-02-25 01:23 pm HK News Desk ದೇಶ - ವಿದೇಶ
ನವದೆಹಲಿ, ಫೆ.21: ಅಮೆರಿಕದ ಮಾಜಿ ಅಧ್ಯಕ್ಷ ಜೋ ಬಿಡೆನ್, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸುವ ಉದ್ದೇಶ ಹೊಂದಿದ್ದರೇ ಎನ್ನುವ ಶಂಕೆ ಮೂಡಿಸುವ ರೀತಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಮತದಾನ ಪ್ರಕ್ರಿಯೆಗಾಗಿ 21 ಲಕ್ಷ ಮಿಲಿಯನ್ ಡಾಲರ್ ನೆರವು ನೀಡುತ್ತಿರುವುದೇಕೆ? ಇದರರ್ಥ ಅಲ್ಲಿ ಬೇರೆಯವರನ್ನು ಆಯ್ಕೆ ಮಾಡಲು ಈ ಹಣ ಬಳಕೆಯಾಗುತ್ತಿದೆಯೇ..? ಈ ವಿಷಯವನ್ನು ಭಾರತ ಸರಕಾರಕ್ಕೆ ನಾವು ಹೇಳಬೇಕಾಗಿದೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಸಂಸದರ ಸಮಾವೇಶದಲ್ಲಿ ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನೀಡಿರುವುದು ಭಾರತದಲ್ಲಿ ತೀವ್ರ ಚರ್ಚೆಗೀಡು ಮಾಡಿದೆ. ಮತದಾನ ಪ್ರಕ್ರಿಯೆ ಸುಧಾರಣೆಗಾಗಿ ಅಮೆರಿಕದಿಂದ ಭಾರತಕ್ಕೆ ನೀಡಲಾಗುತ್ತಿರುವ ನೆರವಿನ ಬಗ್ಗೆ ಪ್ರಶ್ನೆ ಮಾಡಿರುವ ಟ್ರಂಪ್, ನನಗೆ ನರೇಂದ್ರ ಮೋದಿ ಬಗ್ಗೆ ಗೌರವ ಇದೆ, ಆದರೆ ಇಷ್ಟೊಂದು ದೊಡ್ಡ ಮೊತ್ತವನ್ನು ಅಲ್ಲಿನ ಚುನಾವಣೆ ಪ್ರಕ್ರಿಯೆ ಸಲುವಾಗಿ ನೀಡುತ್ತಿರುವುದನ್ನು ಪ್ರಶ್ನಿಸುತ್ತೇನೆ. ಭಾರತದಲ್ಲಿ ಬೇಕಾದಷ್ಟು ಆದಾಯ, ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತದೆ. ಜನರ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತವೂ ಒಂದು ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ಬೆನ್ನಲ್ಲೇ ಅನಗತ್ಯ ವೆಚ್ಚಗಳನ್ನು ತಗ್ಗಿಸುವುದಕ್ಕಾಗಿ DOGE ಎನ್ನುವ ಪ್ರತ್ಯೇಕ ಕಮಿಟಿಯೊಂದನ್ನು ರಚಿಸಿದ್ದಾರೆ. ಅಮೆರಿಕದಿಂದ ಬೇರೆ ಬೇರೆ ದೇಶಗಳಿಗೆ ನೀಡಲಾಗುತ್ತಿರುವ ನೆರವು, ಅದರ ಸಾಧಕ ಬಾಧಕ ಬಗ್ಗೆ ಈ ಕಮಿಟಿ ಅಧ್ಯಕ್ಷರಿಗೆ ರಿಪೋರ್ಟ್ ಕೊಟ್ಟಿದೆ. ಅದರ ಪ್ರಕಾರ, ಭಾರತಕ್ಕೆ ಯುಎಸ್ ಏಡ್ ರೂಪದಲ್ಲಿ 21 ಲಕ್ಷ ಡಾಲರ್ ನೆರವು ಮತದಾನ ಜಾಗೃತಿಗಾಗಿ ಸಿಕ್ಕಿದೆ. ಇದೇ ಹಿನ್ನೆಲೆಯಲ್ಲಿ ಅಮೆರಿಕದ ಜನರ ತೆರಿಗೆಯ ಹಣವನ್ನು ನಾವು ಯಾಕೆ ಇನ್ಯಾರಿಗೋ ನೀಡಬೇಕು ಎಂದು ಟ್ರಂಪ್ ಪ್ರಶ್ನೆ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ರಾಜಕೀಯ ಕ್ಷೇತ್ರ ಸುಧಾರಣೆ ಹೆಸರಲ್ಲಿ ಅಮೆರಿಕದಿಂದ 29 ಲಕ್ಷ ಡಾಲರ್ ನೆರವು ನೀಡಲಾಗಿದೆ. ಇದೇ ಕಾರಣಕ್ಕೆ ಬಾಂಗ್ಲಾ ಅಧ್ಯಕ್ಷೆ ಶೇಖ್ ಹಸೀನಾ ಅವರನ್ನು ಕೆಳಕ್ಕಿಳಿಸಿದ್ದರಲ್ಲಿ ಅಮೆರಿಕದ ಪಾತ್ರ ಇತ್ತು ಎನ್ನುವ ಚರ್ಚೆಯೂ ಆಗಿತ್ತು. ಭಾರತದಲ್ಲಿ ಚುನಾವಣೆ ಪ್ರಕ್ರಿಯೆಗೆ ಅಮೆರಿಕದ ಹಣ ಬಳಕೆಯಾಗಿದೆ ಎಂಬ ಟ್ರಂಪ್ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಬಗ್ಗೆ ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ನಾಯಕರು ಅಮೆರಿಕದ ನೆರವಿನ ಬಗ್ಗೆ ಯಾರಿಗೆಷ್ಟು ಸಿಕ್ಕಿದೆ, ಸರಕಾರಕ್ಕೆ ಎಷ್ಟು ಪಾಲು ಮತ್ತು ಸರಕಾರೇತರ ಸಂಸ್ಥೆಗಳಿಗೆ ಎಷ್ಟು ಸಿಕ್ಕಿದೆ ಎನ್ನುವುದನ್ನು ತಿಳಿಯಲು ಹಾಲಿ ಅಧ್ಯಕ್ಷರು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹ ಮಾಡಿದ್ದಾರೆ.
ಇದೇನಿದ್ದರೂ, ಡೊನಾಲ್ಡ್ ಟ್ರಂಪ್ ಹೇಳಿಕೆ ತಮ್ಮ ಕಾಸ್ಟ್ ಕಟ್ಟಿಂಗ್ ಉದ್ದೇಶಕ್ಕೆ ಮಾತ್ರ ಸೀಮಿತ ಆಗಿರುವಂತಿದೆ. ಅಮೆರಿಕ ಈ ರೀತಿಯ ನೆರವನ್ನು ಹಲವಾರು ಅಭಿವೃದ್ಧಿ ಶೀಲ ದೇಶಗಳಿಗೆ ಹಿಂದಿನಿಂದಲು ನೀಡುತ್ತ ಬಂದಿದೆ. ಆದರೆ ಹಿಂದಿನ ಅಧ್ಯಕ್ಷರನ್ನು ತೆಗಳುವ ನೆಪದಲ್ಲಿ ಮೋದಿಯನ್ನು ಬದಲಿಸುವುದಕ್ಕಾಗಿ ಈ ನೆರವು ನೀಡಿದ್ದಾರೆಯೇ ಎಂಬ ಹೊಸ ದಾಳ ಉರುಳಿಸಿದ್ದಾರೆ. ಆಮೂಲಕ ಉದ್ಯಮ ಜಗತ್ತಿನಿಂದ ಬಂದು ಅಧ್ಯಕ್ಷ ಹುದ್ದೆಗೇರಿರುವ ಟ್ರಂಪ್, ಅಪ್ಪಟ ರಾಜಕಾರಣಿಯಾಗಿ ಎದುರಾಳಿಯ ಧೈರ್ಯ ಗುಂದಿಸುವ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೋ ಬಿಡೆನ್, ಈ ರೀತಿಯ ಹೇಳಿಕೆ ಬೇಸ್ ಲೆಸ್ ಎಂದಿದ್ದಾರೆ.
US President Donald Trump has questioned the $21 million aid to India by the Joe Biden administration under the category of increasing “voter turnout in India”, wondering if it was trying to get “someone else elected”.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm