ಬ್ರೇಕಿಂಗ್ ನ್ಯೂಸ್
16-12-20 06:02 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಡಿ.16: ಶಬರಿಮಲೆಗೆ ಸ್ತ್ರೀಯರ ಪ್ರವೇಶ ವಿವಾದ ಎಡರಂಗದ ಪಾಲಿಗೆ ರಾಜಕೀಯ ಹಿನ್ನಡೆಗೆ ಕಾರಣ ಆಗುತ್ತಿದೆಯೇ ಅನ್ನುವ ಚರ್ಚೆ ದೇಶದ ಗಮನಸೆಳೆದಿದೆ. ಇದಕ್ಕೆ ಪೂರಕವಾಗಿ ಶಬರಿಮಲೆ ಇರುವ ಪಂದಳಂ ನಗರಸಭೆಯಲ್ಲಿ ಈ ಬಾರಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಒಟ್ಟು 33 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು 17 ರಲ್ಲಿ ಗೆದ್ದುಕೊಂಡಿದ್ದು, ಬಹುಮತದ ಮೂಲಕ ಅಧಿಕಾರ ಹಿಡಿದಿದ್ದಾರೆ.
ಕಳೆದ ಬಾರಿ ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟು ಪಿಣರಾಯಿ ವಿಜಯನ್ ಸರಕಾರ ನಡೆದುಕೊಂಡ ರೀತಿಗೆ ಕೇರಳ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಶಬರಿಮಲೆಯಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದಾಗ, ಕಮ್ಯುನಿಸ್ಟ್ ಸರಕಾರ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸಿತ್ತು. ಆನಂತರ ತಿಂಗಳ ಪರ್ಯಂತ ನಡೆದ ಪ್ರತಿಭಟನೆ ದೇಗುಲ ಬಂದ್ ಆದಬಳಿಕ ಶಾಂತವಾಗಿತ್ತು. ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸುರೇಂದ್ರನ್, ಶಬರಿಮಲೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಆಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸುರೇಂದ್ರನ್, ಶಬರಿಮಲೆ ವ್ಯಾಪ್ತಿಯ ಪತ್ತನಂತಿಟ್ಟ ಕ್ಷೇತ್ರದಲ್ಲಿ ಸ್ಪರ್ಧಿಸಿ ತೀವ್ರ ಪೈಪೋಟಿ ಒಡ್ಡಿದ್ದರು. ಉಳಿದಂತೆ, ಇಡೀ ರಾಜ್ಯದಲ್ಲಿ ಎಡರಂಗ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಿಜೆಪಿ ಪ್ರಬಲ ಸ್ಪರ್ಧೆ ಒಡ್ಡಿತ್ತು. ಇದೀಗ ಸ್ಥಳೀಯಾಡಳಿತ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಬೆಂಬಲಿತರು ಗೆಲುವು ಕಂಡಿದ್ದಾರೆ. ಈಮೂಲಕ ಕಮ್ಯುನಿಸ್ಟರ ಮತ್ತು ಕಾಂಗ್ರೆಸಿನ ಸಾಂಪ್ರದಾಯಿಕ ಮತಗಳು ಧ್ರುವೀಕರಣಗೊಂಡು ಬಿಜೆಪಿಯತ್ತ ವಾಲಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ. ಇದರ ಸಂಕೇತವಾಗಿ ಈ ಬಾರಿ ಮಂಜೇಶ್ವರ, ಪೆರ್ಲ, ಕುಂಬಳೆಯಲ್ಲಿ ಬ್ಲಾಕ್ ಪಂಚಾಯತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಕಂಡಿದ್ದಾರೆ. ಮೀಂಜ ಪಂಚಾಯತ್ ನಲ್ಲಿ ಈವರೆಗೂ ಕಮ್ಯುನಿಸ್ಟ್ ಪರವಾಗೇ ಇದ್ದ ಪಂಚಾಯತ್ ಕ್ಷೇತ್ರಗಳು ಈ ಬಾರಿ ಬಿಜೆಪಿಗೆ ಬಂದಿವೆ. ಎಡರಂಗದ ಪರ ಇದ್ದ ಹಿಂದು ಮತಗಳು ಸ್ಪಷ್ಟವಾಗಿ ತಿರುವು ಕಂಡಿದ್ದನ್ನು ಇದು ಸೂಚಿಸುತ್ತದೆ.
ಇಡೀ ರಾಜ್ಯದಲ್ಲಿ ಈ ರೀತಿಯ ಮತ ಧ್ರುವೀಕರಣ ಕಂಡುಬಂದಿದ್ದು, ಶಬರಿಮಲೆಯ ವಿವಾದದ ಬಳಿಕ ದೊಡ್ಡ ಮಟ್ಟಿನಲ್ಲಿ ಎಡರಂಗದ ಸಾಂಪ್ರದಾಯಿಕ ಮತಗಳಿಗೆ ಕತ್ತರಿ ಬಿದ್ದಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಮತ್ತು ಅಮಿತ್ ಷಾ ಮುಂದಿನ ಗುರಿ ಕೇರಳ ಎನ್ನುವ ದೂರಾಲೋಚನೆಯಿಂದ ಕೆಲಸ ಮಾಡುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿಯೂ ಬದಲಾವಣೆಯ ಹುಮ್ಮಸ್ಸು ಮೂಡಿಸಿದೆ. 2021ರ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಬಿಜೆಪಿ ಗಮನಾರ್ಹ ಸಾಧನೆ ಮಾಡಿದ್ದು ಅಸೆಂಬ್ಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸೂಚನೆ ಸಿಕ್ಕಂತಾಗಿದೆ.
ಈ ಬಾರಿ ಪಾಲಕ್ಕಾಡ್ ನಗರಸಭೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದಿದೆ. 52 ಸ್ಥಾನಗಳನ್ನು ಹೊಂದಿರುವ ನಗರಸಭೆಯಲ್ಲಿ ಬಿಜೆಪಿ ಈ ಬಾರಿ 28 ಸ್ಥಾನಗಳನ್ನು ಗೆದ್ದುಕೊಂಡಿದೆ. 2015ರ ಚುನಾವಣೆಯಲ್ಲಿ 24 ಸ್ಥಾನಗಳನ್ನು ಪಡೆದಿದ್ದ ಜಾಗದಲ್ಲಿ ಈ ಬಾರಿ ನಾಲ್ಕು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಕಾಸರಗೋಡು ನಗರಸಭೆಯಲ್ಲೂ ಬಿಜೆಪಿ 14 ಸ್ಥಾನಗಳನ್ನು ಪಡೆದಿದೆ. ಇದಲ್ಲದೆ, ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್, ಬ್ಲಾಕ್ ಮತ್ತು ನಗರಸಭೆ ಚುನಾವಣೆಗಳಲ್ಲಿ ಬಿಜೆಪಿ ಈ ಹಿಂದಿಗಿಂತ ಉತ್ತಮ ಪ್ರದರ್ಶನ ಮಾಡಿರುವುದು ಮುಂದಿನ ಚುನಾವಣೆಯ ದಿಕ್ಸೂಚಿ ಎನ್ನಲಾಗುತ್ತಿದೆ.
ಈವರೆಗೂ ಕೇರಳದ ಇತಿಹಾಸದಲ್ಲಿ ಒಂದೋ ಎಲ್ ಡಿಎಫ್, ತಪ್ಪಿದರೆ ಯುಡಿಎಫ್ ಮಾತ್ರ ಗೆದ್ದಿರುವುದು. ಬೇರೊಂದು ಪಕ್ಷಕ್ಕೆ ಅಲ್ಲಿ ನೆಲೆಯೇ ಇರಲಿಲ್ಲ. ಆದರೆ, ಈ ಬಾರಿಯ ಚುನಾವಣಾ ಕಣದಲ್ಲಿ ವಿರೋಧಿ ಅಲೆ ಕೆಲಸ ಮಾಡಿದ್ದು ಸ್ಪಷ್ಟವಾಗಿ ಕಂಡುಬರುತ್ತಿದೆ. ಎಡರಂಗ ಮತ್ತು ಯುಡಿಎಫ್ ಎರಡನ್ನೂ ಹೊರತುಪಡಿಸಿ ಮೂರನೇ ಪಕ್ಷ ಬಿಜೆಪಿಗೆ ಮೊದಲ ಬಾರಿಗೆ ಜನಮತ ನೀಡಿದ್ದಾರೆ. ಇದೇನೇ ಇದ್ದರೂ, ರಾಜ್ಯದಲ್ಲಿ ಒಟ್ಟು 941 ಗ್ರಾಮ ಪಂಚಾಯತಿಗಳಲ್ಲಿ 500ಕ್ಕೂ ಹೆಚ್ಚು ಕಡೆ ಎಲ್ ಡಿಎಫ್ ಮುನ್ನಡೆ ಕಾಯ್ದುಕೊಂಡಿದೆ. ಯುಡಿಎಫ್ ಕೇವಲ 109 ಪಂಚಾಯತ್ ಗಳಲ್ಲಿ ಮುನ್ನಡೆ ಸಾಧಿಸಿದೆ.
Counting of votes in Kerala Local Self-government Institutions (LSGI) is underway for panchayat and municipal bodies. These are local polls but have got national attention. The principal reason is the BJP, whose alliance has won the municipal council in the town where Sabarimala temple is located.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm