ಬ್ರೇಕಿಂಗ್ ನ್ಯೂಸ್
29-01-25 07:55 pm HK News Desk ದೇಶ - ವಿದೇಶ
ನವದೆಹಲಿ, ಜ.29: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಕುಂಭ ಮೇಳಕ್ಕೆ ಕೋಟ್ಯಂತರ ಭಕ್ತರು ಸೇರಿದ್ದರಿಂದ ಈ ಬಾರಿ ಕಾಲ್ತುಳಿತ ಸಂಭವಿಸಿದ್ದು, ಹದಿನೈದಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕುಂಭ ಮೇಳ ಆದಾಗೆಲ್ಲ ಮೌನಿ ಅಮಾವಾಸ್ಯೆ ದಿನವೇ ಕಾಲ್ತುಳಿತದಿಂದ ಜನರು ಪ್ರಾಣ ಕಳಕೊಂಡಿದ್ದಾರೆ.
1954ರಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ದೊಡ್ಡ ಮಟ್ಟದ ಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯಂದೇ ಕಾಲ್ತುಳಿತ ಉಂಟಾಗಿತ್ತು. ಆಗಿನ ಕಾಲದಲ್ಲಿ ಅತಿ ಹೆಚ್ಚು ಎನ್ನುವಂತೆ ಸುಮಾರು 12 ಕೋಟಿ ಜನರು ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದರು. 1954ರ ಫೆ.3ರಂದು ನಡೆದ ಮೌನಿ ಅಮಾವಾಸ್ಯೆ ದಿನ ಒಮ್ಮಿಂದೊಮ್ಮೆಲೇ ಕಾಲ್ತುಳಿತ ಉಂಟಾಗಿ 800ಕ್ಕೂ ಹೆಚ್ಚು ಜನರು ಪ್ರಾಣ ಕಳಕೊಂಡಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಕೂಡ ಕುಂಭ ಮೇಳಕ್ಕೆ ಬಂದಿದ್ದರು.
ಪ್ರಧಾನಿ ನೆಹರೂ ಅವರು ಮೌನಿ ಅಮಾವಾಸ್ಯೆಯ ಮುನ್ನಾ ದಿನವೇ ಅಲಹಾಬಾದ್ (ಈಗ ಪ್ರಯಾಗರಾಜ್) ತ್ರಿವೇಣಿ ಸಂಗಮಕ್ಕೆ ಬಂದು ಉಳಿದುಕೊಂಡಿದ್ದರು. ಆನಂತರ, ಪ್ರಧಾನಿ ಬಂದಿದ್ದರಿಂದ ವಿಐಪಿಗಳಿಗೆ ತೀರ್ಥಸ್ನಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರಿಂದ ಕಾಲ್ತುಳಿತ ಉಂಟಾಯ್ತು ಎಂಬ ಟೀಕೆ ಕೇಳಿಬಂದಿತ್ತು. ಇದರಿಂದ ನೋವುಪಟ್ಟ ಪ್ರಧಾನಿ ನೆಹರು, ಅಂದಿನಿಂದಲೇ ಕುಂಭಮೇಳಕ್ಕೆ ವಿಐಪಿ ವ್ಯವಸ್ಥೆಯನ್ನು ರದ್ದುಪಡಿಸಿದ್ದರು. ಆಗಿನಿಂದ ಈಗಿನ ವರೆಗೂ ಕುಂಭ ಮೇಳದಲ್ಲಿ ಶಾಹಿ ಸ್ನಾನಕ್ಕೆ ವಿಐಪಿ ವ್ಯವಸ್ಥೆ ಇಲ್ಲ ಎಂಬುದಾಗಿ ಉತ್ತರ ಭಾರತದ ಹಿಂದಿ ಮಾಧ್ಯಮಗಳು ವರದಿ ಮಾಡಿವೆ.
1986ರಲ್ಲಿ ಹರಿದ್ವಾರದಲ್ಲಿ ನಡೆದಿದ್ದ ಕುಂಭ ಮೇಳದಲ್ಲಿಯೂ ಕಾಲ್ತುಳಿತ ಆಗಿತ್ತು. ಅದರಲ್ಲಿ 200 ಮಂದಿ ಪ್ರಾಣ ಕಳಕೊಂಡಿದ್ದರು. ಆ ಸಂದರ್ಭದಲ್ಲಿಯೂ ಉತ್ತರ ಪ್ರದೇಶ ಸಿಎಂ ವೀರಬಹಾದುರ್ ಸಿಂಗ್ ಮತ್ತು ಇತರ ಸಚಿವರು ಹರಿದ್ವಾರಕ್ಕೆ ಬಂದರೆಂದು ಪೊಲೀಸರು ಯಾತ್ರಿಗಳ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದರು. ಸಾಮಾನ್ಯ ಯಾತ್ರಿಗಳನ್ನು ನದಿ ಪ್ರವೇಶಕ್ಕೆ ತಡೆದಿದ್ದರಿಂದ ನಿಯಂತ್ರಣ ಮಾಡಲಾಗದೆ ನೂಕುನುಗ್ಗಲು ಉಂಟಾಗಿತ್ತು.
2003ರಲ್ಲಿ ಮಹಾರಾಷ್ಟ್ರದ ನಾಶಿಕ್ ನಲ್ಲಿ ಗೋದಾವರಿ ನದಿ ತೀರದಲ್ಲಿ ಕುಂಭ ಮೇಳಕ್ಕೆ ಜನರು ಸೇರಿದ್ದಾಗ ಕಾಲ್ತುಳಿತ ಉಂಟಾಗಿ ಹಲವರು ಪ್ರಾಣ ಕಳಕೊಂಡಿದ್ದರು. ಮಹಿಳೆಯರು ಸೇರಿದಂತೆ 39 ಜನರು ಸಾವನ್ನಪ್ಪಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಘಟನೆ ನಡೆದಿತ್ತು. 2013ರಲ್ಲಿ ಅಲಹಾಬಾದ್ ರೈಲ್ವೇ ನಿಲ್ದಾಣದಲ್ಲಿ ಕುಂಭಮೇಳಕ್ಕೆ ಬಂದಿದ್ದ ಜನರಿಂದಾಗಿ ಕಾಲ್ತುಳಿತ ಆಗಿತ್ತು. 2013ರ ಫೆ.10ರಂದು ರೈಲು ನಿಲ್ದಾಣದ ಮೇಲ್ಸೇತುವೆ ಕುಸಿದು ಬಿತ್ತೆಂದು ಜನರು ಗಾಬರಿಗೊಂಡು ಓಡುವುದಕ್ಕೆ ಮುಂದಾಗಿ ನೂಕುನುಗ್ಗಲು ಉಂಟಾಗಿತ್ತು. ಘಟನೆಯಲ್ಲಿ 42 ಜನರು ಸಾವನ್ನಪ್ಪಿದ್ದು, 45 ಮಂದಿ ಗಾಯಗೊಂಡಿದ್ದರು.
2025ರಲ್ಲಿ ಮತ್ತೆ 12 ವರ್ಷದ ಬಳಿಕ ಪ್ರಯಾಗರಾಜ್ ನಲ್ಲಿ ಕುಂಭ ಮೇಳ ನಡೆದಿದೆ. ವಿಶೇಷ ಅಂದ್ರೆ, 12 ಕುಂಭ ಮೇಳ ಕಳೆದ ಬಳಿಕ 45 ದಿನಗಳ ದೀರ್ಘ ಕಾಲದ ಉತ್ಸವ ಮಹಾ ಕುಂಭ ಮೇಳ ಆಗುತ್ತಿದ್ದು, ದೇಶ- ವಿದೇಶದ ಜನರು ಪಾಲ್ಗೊಂಡಿದ್ದಾರೆ. ಮೌನಿ ಅಮಾವಾಸ್ಯೆಯ ವಿಶೇಷ ದಿನಕ್ಕೆ ಪುಣ್ಯ ಸ್ನಾನ ಮಾಡಬೇಕೆಂದು ಕೋಟ್ಯಂತರ ಭಕ್ತರು ಸೇರಿದ್ದು ನಿನ್ನೆ ರಾತ್ರಿ ಭದ್ರತಾ ಸಿಬಂದಿ ಹಾಕಿದ್ದ ಬ್ಯಾರಿಕೇಡ್ ಮುರಿದು ಬಿದ್ದು ಜನರು ಒಬ್ಬರ ಮೇಲೊಬ್ಬರಂತೆ ಬಿದ್ದಿದ್ದಾರೆ. ಇದರಿಂದಾಗಿ ಅಷ್ಟೆಲ್ಲ ಭದ್ರತಾ ವ್ಯವಸ್ಥೆ ಇದ್ದರೂ, 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಮೌನಿ ಅಮಾವಾಸ್ಯೆಯ ಒಂದೇ ದಿನ ಎಂಟು ಕೋಟಿಗೂ ಹೆಚ್ಚು ಜನ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡಿದೆ.
ನಡುರಾತ್ರಿಯಲ್ಲಿ ಕಾಲ್ತುಳಿತದಿಂದ ಹಲವರು ಪ್ರಾಣ ಕಳಕೊಂಡಿದ್ದರಿಂದ ಸಾಧುಗಳು ಸ್ನಾನ ಮಾಡದೆ ಅರ್ಧದಿಂದಲೇ ತೆರಳಿದ್ದಾರೆ. ಹೀಗಾಗಿ ಮೌನಿ ಅಮಾವಾಸ್ಯೆಯ ಶಾಹಿ ಸ್ನಾನ ಪೂರ್ತಿಯಾಗಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಸಾಧುಗಳು ಆನೆಯ ಮೇಲೇರಿ ಬಂದು ತ್ರಿವೇಣಿ ಸಂಗಮದ ಘಾಟ್ ಗಳಲ್ಲಿ ಮೊದಲಾಗಿ ಸ್ನಾನ ಮಾಡುವುದು ವಾಡಿಕೆ. ಈ ಬಾರಿ ಶಾಹಿ ಸ್ನಾನ ಆರಂಭ ಆಗೋ ಮೊದಲೇ ಸಾವಾಗಿರುವುದರಿಂದ ಬೆಳಗ್ಗಿನ ಹೊತ್ತಿಗೆ ನಾಗಾ ಸಾಧುಗಳು ತೀರ್ಥ ಸ್ನಾನ ಮಾಡದೆ ಹಿಂದೆ ತೆರಳಿದ್ದಾರೆ. ಆನಂತರ, ವಿಳಂಬವಾಗಿ ಬಂದು ತೀರ್ಥಸ್ನಾನ ನೆರವೇರಿಸಿದ್ದಾರೆ.
A deadly stampede broke out at the Triveni Sangam in Prayagraj around 1:30 AM on the night between Tuesday and Wednesday, resulting in the tragic deaths of at least 30 people and leaving more than 40 injured. The Kumbh Mela has witnessed stampedes in the past as well. In 1954, during independent India’s first Kumbh Mela, a devastating stampede claimed the lives of around 800-1000 people. The event, held in Allahabad, now Prayagraj,, saw millions of devotees gather at the Sangam on February 3, during the Mauni Amavasya, for the sacred bath. Heavy rainfall made the area muddy and slippery, adding to the chaos.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm