ಬ್ರೇಕಿಂಗ್ ನ್ಯೂಸ್
02-01-25 12:02 pm HK News Desk ದೇಶ - ವಿದೇಶ
ಅಮೆರಿಕ, ಜ 02: ಇಲ್ಲಿನ ಬೌರ್ಬನ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಗುಂಪಿನ ಮೇಲೆ ಟ್ರಕ್ ಹರಿದು 15 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜನರ ಮೇಲೆ ನುಗ್ಗಿದ ವಾಹನದ ಮೇಲೆ ಇಸ್ಲಾಮಿಕ್ ಸ್ಟೇಟ್(ಐಎಸ್) ಭಯೋತ್ಪಾದಕ ಸಂಘಟನೆಯ ಧ್ವಜ ಕಂಡುಬಂದಿದ್ದು, ಎಫ್ಬಿಐ ತನಿಖೆ ಚುರುಕುಗೊಳಿಸಿದೆ. ಘಟನೆಯ ಹಿಂದೆ ಯಾವುದಾದರೂ ಭಯೋತ್ಪಾದಕ ಗುಂಪಿನ ಕೈವಾಡವಿದೆಯೇ ಎಂಬ ಕುರಿತು ತನಿಖೆ ತೀವ್ರಗೊಳಿಸಿದೆ.
ಇದುವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಸುಧಾರಿತ ಸಾಧನ, ಕಂಟ್ರಿ ಬಾಂಬ್ಗಳು ವಾಹನದಲ್ಲಿ ಪತ್ತೆಯಾಗಿವೆ. ವಾಹನದಲ್ಲಿ ಚಾಲಕ ಮಾತ್ರ ಇದ್ದ ಎಂದು FBI ಮಾಹಿತಿ ನೀಡಿದೆ.
ಫ್ರೆಂಚ್ ಕ್ವಾರ್ಟನ್ನ ಆರ್ಲಿನ್ಸ್ನ ಐತಿಹಾಸಿಕ ಕೇಂದ್ರದ ಸಮೀಪ ಹೊಸ ವರ್ಷ 2025ರ ಸಂಭ್ರಮಾಚರಣೆಯಲ್ಲಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆಗೆ ಘಟನೆ ನಡೆದಿದೆ. ಓಪನ್ ಏರ್ ಕನ್ಸರ್ಟ್ನಲ್ಲಿ ಸೇರಿದ್ದ ಜನರ ಮೇಲೆ ವಾಹನ ಹರಿದಿದೆ. 'ಆಲ್ಸ್ಟೇಟ್ ಶುಗರ್ ಬೌಲ್'ಗಾಗಿ ನಗರಕ್ಕೆ ಬರುತ್ತಿದ್ದ ಕಾಲೇಜು ಫುಟ್ಬಾಲ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಶುಗರ್ ಬೌಲ್ ಅಮೆರಿಕದೆಲ್ಲೆಡೆ ನಡೆಯುವ ವಾರ್ಷಿಕ ಕಾಲೇಜು ಫುಟ್ಬಾಲ್ ಆಟವಾಗಿದೆ.
ಆರ್ಲೆನ್ಸ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿ, "ಸಂಭ್ರಮಾಚಾರಣೆಗಾಗಿ ನಾವು ಶೇ 100ರಷ್ಟು ಸಿಬ್ಬಂದಿಗಳನ್ನು ನಿಯೋಜಿಸಿದ್ದೆವು. ಇನ್ನೂ ಹೆಚ್ಚುವರಿಯಾಗಿ 300ಕ್ಕೂ ಹೆಚ್ಚು ಅಧಿಕಾರಿಗಳನ್ನು ಕಾನೂನು ಜಾರಿ ಸಂಸ್ಥೆಯಿಂದ ಎರವಲು ಪಡೆದಿದ್ದೆವು" ಎಂದು ತಿಳಿಸಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
ನಗರದೆಲ್ಲೆಡೆ ಸ್ಥಳೀಯ, ರಾಜ್ಯ ಮತ್ತು ಫೆಡರಲ್ ಸಹಭಾಗಿತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಪೊಲೀಸ್ ವಾಹನಗಳ ಜೊತೆಗೆ ಕಾಲ್ನಡಿಗೆ, ಬೈಕ್ ಹಾಗೂ ಕುದುರೆಗಳ ಮೇಲೆಯೂ ಕೂಡ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ನಡುವೆಯೂ ಘಟನೆ ಸಂಭವಿಸಿದೆ.
'ಎಕ್ಸ್' ಜಾಲತಾಣದ ಮೂಲಕ ಸಾರ್ವಜನಿಕರಿಗೆ ನ್ಯೂ ಆರ್ಲಿನ್ ತುರ್ತು ಸಿದ್ಧತಾ ಪ್ರಚಾರ(ಎನ್ಒಎಲ್ಎ) ಸಂದೇಶ ರವಾನಿಸಿ, "ಕ್ಯಾನೆಲ್ ಮತ್ತು ಬೌರ್ಬನ್ ಸ್ಟ್ರೀಟ್ನಲ್ಲಿ ಸಾಮೂಹಿಕ ಅಪಾಯದ ಘಟನೆ ಸಂಭವಿಸಿದೆ. ಈ ಪ್ರದೇಶದಿಂದ ದೂರವಿರಿ" ಎಂದು ಎಚ್ಚರಿಸಿದೆ.
Authorities are looking for any connections, associations or co-conspirators who might be linked to the man who intentionally drove a pickup truck into a crowd of New Year’s revelers in the Bourbon Street area of New Orleans early Wednesday, President Joe Biden said late Wednesday evening.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm